Advertisement
ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ಜ. 13ರಂದು ಅಪ ರಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‌ನ ವಿದ್ಯಾನಗರಿ ಅಲ್ಲಿನ ಜೆ. ಪಿ. ನಾಯಕ್ ಸಭಾಗೃಹದಲ್ಲಿ ಆಯೋಜಿಸಿದ್ದ ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿ, ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ನಡೆಯುವಷ್ಟು ಕನ್ನಡಪರ ಕಾರ್ಯಕ್ರಮಗಳು ಒಳನಾಡಿನಲ್ಲೂ ನಡೆಯಲು ಸಾಧ್ಯವಿಲ್ಲ. ಅನ್ಯಭಾಷಿಗರನ್ನು ಕನ್ನಡಿಗರನ್ನಾಗಿ ಪರಿವರ್ತಿಸಿದ ಶ್ರೇಯಸ್ಸು ಇಲ್ಲಿನ ಕನ್ನಡ ವಿಭಾಗಕ್ಕೆ ಸಲ್ಲುತ್ತದೆ ಎಂದು ನುಡಿದು ಕೃತಿಕಾರರನ್ನು ಅಭಿನಂದಿಸಿ ಶುಭಹಾರೈಸಿದರು.
Related Articles
Advertisement
ಅನುವಾದಕರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಯಾವುದೇ ಸ್ಥಾನಮಾನ ಸೌಲಭ್ಯವಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು. ವೈ. ವಿ. ಮಧುಸೂದನ್ ರಾವ್, ಡಾ| ದಾûಾಯಣಿ ಯಡವಳ್ಳಿ, ಡಾ| ಈಶ್ವರ ಅಲೆವೂರು ಮತ್ತು ಡಾ| ಪೂರ್ಣಿಮಾ ಎಸ್. ಶೆಟ್ಟಿ ಕ್ರಮವಾಗಿ ಕೃತಿಗಳನ್ನು ಪರಿಚಯಿಸಿದರು. ಕೃತಿಕಾರರು ಸಂದಭೋìಚಿತವಾಗಿ ತಮ್ಮ ಕೃತಿಗಳ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಮೋಹನ್ ಮಾರ್ನಾಡ್, ರಾಜೀವ ನಾಯಕ, ಅಹಲ್ಯಾ ಬಳ್ಳಾಲ್ ಮತ್ತು ಅವಿನಾಶ್ ಕಾಮತ್ ಅವರು “ಅಷಾಢದ ಒಂದು ದಿನ’ ವಾಚನ ನಾಟಕ ಪ್ರಸ್ತುತ ಪಡಿಸಿದರು.
ಸುಶೀಲಾ ಎಸ್. ದೇವಾಡಿಗ ಪ್ರಾರ್ಥನೆಗೈದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್. ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಡಾ| ಶ್ಯಾಮಲಾ ಪ್ರಕಾಶ್ ಅವರು ಕೃತಜ್ಞತೆ ಸಲ್ಲಿಸಿದರು. ವಿಭಾಗದ ವಿದ್ಯಾರ್ಥಿಗಳು, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.
ಚಿತ್ರ-ವರದಿ:ರೋನ್ಸ್ ಬಂಟ್ವಾಳ್