Advertisement
ಅವರು ಇತ್ತೀಚೆಗೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಬರವಣಿಗೆಯನ್ನು ರೂಢಿಸಿಕೊಳ್ಳುವ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
Related Articles
Advertisement
ವೈಭವೀಕರಣ ಸಲ್ಲದುಯುವ ಲೇಖಕ, ಕರ್ನಾಟಕ ಮಲ್ಲದ ಹಿರಿಯ ಉಪಸಂಪಾದಕ ವಿಶ್ವನಾಥ ಅಮೀನ್ ನಿಡ್ಡೋಡಿ ಅವರು ಮಾತನಾಡಿ, ಸಮಾಜದಲ್ಲಿ ನಡೆಯುವ ನೈಜ ಘಟನೆಗಳು, ಪ್ರಸ್ತುತ ವಿದ್ಯಮಾನಗಳನ್ನು ಮುಖ್ಯ ಆಕರಗಳನ್ನಾಗಿ ಇಟ್ಟುಕೊಂಡು ವಿಶ್ಲೇಷಣೆ ಮಾಡಬೇಕು. ಒಂದು ವಿಷಯವನ್ನು ಆರಿಸಿಕೊಂಡು ಅದರ ಕುರಿತು ಗಂಭೀರ ಚಿಂತನೆಯನ್ನು ನಡೆಸಿ, ಇತರರೊಂದಿಗೆ ಚರ್ಚಿಸಿ ಬರೆಯಬೇಕು. ವಿಷಯ ಅಥವಾ ವ್ಯಕ್ತಿಯ ವೈಭವೀಕರಣ ಸಲ್ಲದು. ನಾವು ಬರೆಯುವ ವಿಷಯ ನೇರವಾಗಿರಬೇಕು. ಸಮಾಜದ ಸುಧಾರಣೆಯ ಆಶಯದಿಂದಲೇ ಪತ್ರಕರ್ತ ಕಾರ್ಯ ನಿರ್ವಹಿಸುತ್ತಾನೆ. ಒಳ್ಳೆಯ ಬರವಣಿಗೆ, ಸುದ್ದಿ ವಿಶ್ಲೇಷಣೆ ಓದುಗನ ಮೇಲೆ ಖಂಡಿತ ಪರಿಣಾಮ ಬೀರುತ್ತದೆ ಎನ್ನುವುದನ್ನು ಸೋದಾಹರಣವಾಗಿ ವಿವರಿಸಿದರು. ಅನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಂಶೋಧನ ಸಹಾಯಕರಾದ ಡಾ| ಉಮಾರಾವ್, ಸುರೇಖಾ ದೇವಾಡಿಗ, ಶಿವರಾಜ್ ಎಂ. ಜಿ, ಶೈಲಜಾ ಹೆಗಡೆ, ಸೋಮಶೇಖರ್ ಮಸಳಿ, ಜಮೀಲಾ ವಿಪ್ಪರಗಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಅನಿತಾ ಪೂಜಾರಿ, ತಾಕೋಡೆ, ಉದಯ ಶೆಟ್ಟಿ, ಡಾ| ಕೆ. ಗೋವಿಂದ ಭಟ್, ಜಯ ಪೂಜಾರಿ, ಲಕ್ಷಿ$¾à ಪೂಜಾರಿ ಅವರು ತಮ್ಮ ಲೇಖನಗಳನ್ನು ಪ್ರಸ್ತುತಪಡಿಸಿದರು. ವಿದುಷಿ ವೀಣಾ ಶಾಸ್ತ್ರಿ ಅವರು ಪಂಪ, ಕುಮಾರವ್ಯಾಸ ಭಾರತ, ದಾಸರ ರಚನೆ, ವಚನಗಳನ್ನು ವಿವಿಧ ರಾಗ ಸಂಯೋಜನೆಯೊಂದಿಗೆ ಪ್ರಸ್ತುತಪಡಿಸಿ ಕನ್ನಡ ಕಾವ್ಯದಲ್ಲಿರುವ ಸಂಗೀತದ ಕುರಿತು ಬೆಳಕು ಚೆಲ್ಲಿದರು. ಆಗಮಿಸಿದ ಯುವ ಲೇಖಕರಾದ ವಿಶ್ವನಾಥ ಅಮೀನ್ ನಿಡ್ಡೋಡಿ ಹಾಗೂ ಲತಾ ಸಂತೋಷ್ ಶೆಟ್ಟಿ ಅವರನ್ನು ವಿಭಾಗದ ಪರವಾಗಿ ಶಾಲು ಹೊದಿಸಿ ಗ್ರಂಥ ಗೌರವದೊಂದಿಗೆ ಗೌರವಿಸಲಾಯಿತು. ಪಾರ್ವತಿ ಪೂಜಾರಿ ಅವರ ಸ್ವಾಗತಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವಿಭಾಗದ ಸಹ ಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.