Advertisement

ತಂತ್ರಜ್ಞಾನದಿಂದ ಕನ್ನಡ ಕಣ್ಮರೆ

11:55 PM Mar 03, 2019 | |

ಚಿಕ್ಕಮಗಳೂರು: “ಮನೆ ಮನೆಗಳಲ್ಲಿ ಕನ್ನಡತನ ಮರೆಯಾಗುತ್ತಿದೆ. ತಂತ್ರಜ್ಞಾನಗಳ ಬಳಕೆ ಹೆಚ್ಚಾಗಿರು ವುದು ಇದಕ್ಕೆ ಕಾರಣ’ ಎಂದು ಕೇಂದ್ರ ಮಾಜಿ ಸಚಿವೆ ಡಿ.ಕೆ.ತಾರದೇವಿ ಸಿದ್ದಾರ್ಥ ಹೇಳಿದರು.

Advertisement

ಕುವೆಂಪು ಕಲಾ ಮಂದಿರಲ್ಲಿ ನಡೆದ ರಾಜ್ಯ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ  ಮಾತನಾಡಿದರು. ಭಾಷೆ ಸಂಸ್ಕೃತಿಯ ಪ್ರತೀಕ. ಸಂಸ್ಕಾರ ಬೆಳೆಸುವ ಮಾಧ್ಯಮ ಮಾತೃಭಾಷೆ. ಭಾರತೀಯತೆ ಉಳಿಸಿಕೊಳ್ಳಲು ಕನ್ನಡ ಭಾಷೆ ಅಗತ್ಯ. 7ನೇ ತರಗತಿಯ ತನಕ ಕನ್ನಡ ಭಾಷೆಯನ್ನು ಶಾಲೆಗಳಲ್ಲಿ ಕಲಿಸಬೇಕು. ನಂತರ ವ್ಯಾವಹಾರಿಕ ಭಾಷೆ ಕಲಿಯಬೇಕು.ಇಂಗ್ಲಿಷ್‌ ಭಾಷೆಯ ವ್ಯಾಮೋಹದಿಂದ ಪೋಷಕರು ಹೊರಬರಬೇಕು ಎಂದರು.

ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ. ಮಹಿಳೆಯರು ಅಮೋಘವಾದ ಕೃತಿಗಳನ್ನು ಕನ್ನಡ
ಭಾಷೆಗೆ ನೀಡಿದ್ದಾರೆ, ಆದರೂ ಇಂದಿಗೂ ನಾವು ಸಮಾನತೆಯ ಬಗ್ಗೆ ಮಾತನಾಡುತ್ತಿದ್ದೇವೆ ಎಂದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ನಮ್ಮಲ್ಲಿ ಹಲವಾರು ಸಮಾವೇಶಗಳು ನಡೆಯುತ್ತಲೆ ಇದೆ. ಆದರೆ ಗ್ರಾಮೀಣ ಮತ್ತು ರೈತ ಮಹಿಳೆಯರ ಸಮಾವೇಶಗಳು ನಡೆಯುತ್ತಿಲ್ಲ. ಅನಕ್ಷರಸ್ಥರಾಗಿದ್ದರೂ ಕನ್ನಡ ಭಾಷೆಗೆ ಅವರು ಕೊಡುಗೆ ನೀಡಿದ್ದಾರೆ. ಅವರನ್ನು ಸಮಾವೇಶದಲ್ಲಿ ಭಾಗವಹಿಸುವಂತೆ ಮಾಡಿ, ಅವರಿಗೂ ವೇದಿಕೆ ಕಲ್ಪಿಸುವ ಅವಶ್ಯಕತೆ ಇದೆ ಎಂದರು.

ಹಿರಿಯ ಪೊಲೀಸ್‌ ಅಧಿ ಕಾರಿ ಸವಿತಾ ಶ್ರೀನಿವಾಸ್‌, ಪಲ್ಲವಿ ರವಿ, ಆರತಿಕೃಷ್ಣ ಮಾತನಾಡಿದರು, ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ|ಮನು ಬಳಿಗಾರ್‌ ವಹಿಸಿದ್ದರು.

Advertisement

ಕೋಲಾರದಲ್ಲಿ ದಲಿತ ಸಾಹಿತ್ಯ ಸಮ್ಮೇಳನ
ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ರಾಜ್ಯ ಮಟ್ಟದ ಮೊದಲ ದಲಿತ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದು ಕಸಾಪ ರಾಜ್ಯಾಧ್ಯಕ್ಷ ಡಾ| ಮನು ಬಳಿಗಾರ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಮಟ್ಟದ ಮೊದಲ ದಲಿತ ಸಾಹಿತ್ಯ ಸಮ್ಮೇಳನವನ್ನು ಕೋಲಾರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಲೋಕಸಭಾ ಚುನಾವಣೆ ಪೂರ್ಣಗೊಂಡ ಬಳಿಕ ಸಮ್ಮೇಳನ ನಡೆಸಲಾಗುವುದು ಎಂದರು. ದಲಿತ ಸಾಹಿತ್ಯ ಸಂಪುಟ ಸಿದಟಛಿಪಡಿಸುವ ಕಾರ್ಯ ನಡೆಯುತ್ತಿದೆ. ಒಟ್ಟಾರೆ 10 ಸಂಪುಟಗಳನ್ನು ಸಿದಟಛಿಪಡಿಸಲಾಗುತ್ತಿದ್ದು, ಶೀಘ್ರದಲ್ಲಿಯೇ 5 ಸಂಪುಟಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.

2 ವರ್ಷಕ್ಕೊಮ್ಮೆ ಮಹಿಳಾ ಸಮ್ಮೇಳನ: ಮಹಿಳಾ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಹಲವರು, ಪ್ರತಿ ವರ್ಷ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಸುವಂತೆ ಒತ್ತಾಯಿಸಿದ್ದರು. ಹೀಗಾಗಿ ಭಾನುವಾರ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತಾವೇ 2 ವರ್ಷಕ್ಕೊಮ್ಮೆ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಸುವ ಪ್ರಸ್ತಾವನೆಗೆ ಮುಂದಿಟ್ಟಿದ್ದು, ಅದಕ್ಕೆ ಸರ್ವಾನುಮತದ ಒಪ್ಪಿಗೆ ದೊರೆತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next