Advertisement

ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌: ಬಸವ ಜಯಂತಿ ಆಚರಣೆ

12:48 PM Jul 01, 2018 | |

ಕಲ್ಯಾಣ್‌: ಹನ್ನೆರಡನೇ ಶತಮಾನದ ಮಹಾ ಪುರುಷರಾದ ಬಸವೇಶ್ವರರ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಧಾರ್ಮಿಕ, ಸಾಮಾಜಿಕ ಕ್ರಾಂತಿಕಾರಿ ಚಿಂತನೆ ‌ಳು ಪರಿಣಾಮಕಾರಿಯಾಗಿವೆ. ಕಾಯಕ ಧರ್ಮವನ್ನು ಕಾಯಕವೇ ಕೈಲಾಸ ಎಂದು ತಿಳಿ ಹೇಳಿ ಅದನ್ನು ಜೀವನದಲ್ಲಿ ಅನುಷ್ಠಾನ ಗೊಳಿಸಿಕೊಳ್ಳುವ ಪವಾಡಕ್ಕೆ ಕಾರಣಕರ್ತರಾದ ಬಸವೇಶ್ವರರ ವ್ಯಕ್ತಿತ್ವದ ಆಳ, ಅಗಲವನ್ನು ಎತ್ತರ-ಭಿತ್ತರಗಳನ್ನು ಅನೇಕರು ಇಂದಿಗೂ ತಿಳಿದುಕೊಳ್ಳದಿರುವುದು ವಿಷಾದ‌ನೀಯ. ಅವರ ವಚನಗಳನ್ನು ಓದಿ, ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ನಮ್ಮ ಬದುಕು ಪಾವನವಾಗುತ್ತದೆ ಎಂದು ಪುಣೆಯ ವಿಚಾರವಾದಿ ಡಾ| ಶಶಿಕಾಂತ್‌ ಪಟ್ಟಣ ಅವರು ನುಡಿದರು.

Advertisement

ಜೂ. 24 ರಂದು ಸಂಜೆ ಕಲ್ಯಾಣ್‌ ಪೂರ್ವದ ಲೋಕ ಫೆಡರೇಶನ್‌ ಹಾಲ್‌ನಲ್ಲಿ ನಡೆದ ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌ ಇದರ ವತಿಯಿಂದ ನಡೆದ ಬಸವ ಜಯಂತಿ ಆಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಅನುಭವ ಮಂಟಪವನ್ನು ಶರಣ-ಶರಣೆಯರ ಮುಖ್ಯ ತಾಣವನ್ನಾಗಿಸಿದ ಬಸವಣ್ಣ ನಿಜವಾದ ಅರ್ಥದಲ್ಲಿ ಓರ್ವ ಸಮಾಜವಾದಿ ಹಾಗೂ ಮಾನ ವತಾವಾದಿ. ಮೇಲು-ಕೀಳು, ಬಡವ-ಶ್ರೀಮಂತ, ಹೆಣ್ಣು-ಗಂಡು ಎಂಬ ತಾರತಮ್ಯಕ್ಕೆ ಆಸ್ಪದ ನೀಡದೆ ನಾವೆಲ್ಲ ಸರಿ ಸಮಾನರೆಂಬ ಸಂದೇಶವನ್ನು ನೀಡಿದ್ದಾರೆ ಎಂದರು.

ಇನ್ನೋರ್ವ ಉಪನ್ಯಾಸಕ ಶಿವಪ್ಪ ಪೂಜಾರಿ ಇವರು ಮಾತನಾಡಿ, ಬಸವಣ್ಣ, ಅಲ್ಲಮ ಪ್ರಭು ಮತ್ತಿತರ ಅನೇಕ ಶರಣರು ಮೌಡ್ಯತೆಯ ನಿರ್ಮೂಲನಕ್ಕಾಗಿ ಶ್ರಮ ಪಟ್ಟವರು. ಹಲವಾರು ದೇವರುಗಳನ್ನು ಪೂಜಿಸುವ ಪದ್ಧತಿಯನ್ನು ತಿರಸ್ಕರಿಸಿ ಏಕದೇವೋಪಾಸನೆ ಬಗ್ಗೆ ಬಲವಾಗಿ ಪ್ರತಿಪಾದಿಸಿದ್ದಾರೆ. ಇಂದಿನ ಈ ವೈಜ್ಞಾನಿಕ ಯುಗದಲ್ಲಿ ಬಸವಣ್ಣನ ವಚನಗಳು ಬಹಳಷ್ಟು ಪ್ರಾಮುಖ್ಯತೆ ಪಡೆಯುತ್ತದೆ. ನೀರು, ಮರ, ಗಿಡಗಳನ್ನು ಪೂಜಿಸುವ ಬದಲು ನಮ್ಮ ಅಂತಃಕರಣವನ್ನು ಶುದ್ದಿಗೊಳಿಸಿ ನಮ್ಮೊಳಗಿರುವ ದೇವರನ್ನು ಆರಾಧಿಸಿ ಬದುಕನ್ನು ಸಾರ್ಥಕಗೊಳಿಸಬೇಕು ಎಂದು ನುಡಿದ ಬಸವಣ್ಣನವರ ವಚನಗಳು ಯುವ ಪೀಳಿಗೆಗೆ ದಾರಿದೀಪವಾಗಿವೆ ೆ ಎಂದು ನುಡಿದರು.

ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಪ್ರಕಾಶ್‌ ಹೆಗ್ಡೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಮೂರ್‍ನಾಲ್ಕು ವರ್ಷಗಳಿಂದ  ಜಗಜ್ಯೋತಿ ಮಹಾತ್ಮ ಬಸವೇಶ್ವರರ ಜಯಂತಿ ಕಾರ್ಯ ಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ. ಈ ಅರ್ಥಪೂರ್ಣ ಸಮಾಜಹಿತ ಕಾರ್ಯಕ್ರಮದಲ್ಲಿ ಮಹಾ ರಾಷ್ಟ್ರ ಮತ್ತು ಕರ್ನಾಟಕದ ಅನೇಕ ಬುದ್ಧಿ ಜೀವಿಗಳನ್ನು, ಸಂಪನ್ಮೂಲ ವ್ಯಕ್ತಿಗಳನ್ನು ಬರಮಾಡಿಕೊಂಡು ಅವರ ವಿಚಾರಗಳನ್ನು ಪ್ರತೀ ವರ್ಷ ಮೆಲುಕು ಹಾಕಿಕೊಂಡು ನಮ್ಮ ಜೀವದಲ್ಲಿ ಒಂದಿಷ್ಟು ಬದಲಾವಣೆಯನ್ನು ಕಂಡುಕೊಳ್ಳುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ ಎಂದರು.

ವೇದಿಕೆಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಮಂಜುನಾಥ ರೈ, ಉಪಾಧ್ಯಕ್ಷ ಎಂ. ಬಿ. ಬಿರಾದಾರ್‌, ಗೌರವ ಪ್ರಧಾನ ಕಾರ್ಯದರ್ಶಿ ರವೀಂದ್ರ ವೈ. ಶೆಟ್ಟಿ, ಜತೆ ಕಾರ್ಯದರ್ಶಿ ಕುಂಠಿನಿ ಪ್ರಕಾಶ್‌ ಹೆಗ್ಡೆ, ಕೋಶಾಧಿಕಾರಿ ಪ್ರಕಾಶ್‌ ನಾೖಕ್‌, ಜತೆ ಕೋಶಾಧಿಕಾರಿ ಎಂ. ಆರ್‌. ಹೊಸಕೋಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ಭಾರತಿ ಬಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement

ಇದೇ ಸಂದರ್ಭದಲ್ಲಿ ಉಪನ್ಯಾಸಕರನ್ನು ಹಾಗೂ ಅನ್ನಪ್ರಸಾದದ ಸೇವಾರ್ಥಿಗಳಾದ ಸುಮಂಗಳಾ ನಾರಾ ದಂಪತಿಯನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.  ಕೋಶಾಧಿಕಾರಿ ಪ್ರಕಾಶ್‌ ನಾೖಕ್‌ ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಗಿರಿಜಾ ವೀರಣ್ಣ ಸೊಗಲದ, ಮೀನಾಕ್ಷಿ ಚೆನ್ನವೀರ ಅಡಿಗಣ್ಣನವರ್‌ ಮತ್ತು ವನಜಾಕ್ಷಿ ಚಂದ್ರಶೇಖರ ಜಿಗಳೂರು ಅವರು ಪ್ರಾರ್ಥನೆಗೈದರು. ಕೇಂದ್ರದ ಸದಸ್ಯರು, ಸದಸ್ಯೆಯರು ಬಸವಣ್ಣನ ವಚನ ಸಾಹಿತ್ಯದ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಜೊತೆ ಕಾರ್ಯದರ್ಶಿ ಕುಂಠಿನಿ ಪ್ರಕಾಶ್‌ ಹೆಗ್ಡೆ ವಂದಿಸಿದರು. ಕೊನೆಯಲ್ಲಿ ಅನ್ನಪ್ರಸಾದ ನಡೆಯಿತು. ತುಳು-ಕನ್ನಡಿಗರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next