Advertisement
ನ. 12ರಂದು ಕಲ್ಯಾಣ್ ಪಶ್ಚಿಮದ ಶ್ರೀಮತಿ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ಕನ್ನಡ ಸಾಂಸ್ಕೃತಿಕ ಕೇಂದ್ರದ 16ನೇ ವಾರ್ಷಿಕೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಕನ್ನಡಿಗರಲ್ಲಿ ಕನ್ನಡದ ಬಗ್ಗೆ ಕೀಳರಿಮೆ ಬರಲು ಕರ್ನಾಟಕ ಬಹುಭಾಷಿಕತ್ವವೆ ಕಾರಣವಾಗಿದೆ. ಇಲ್ಲಿಯ ಜನರ ಮಾತೃಭಾಷೆಗಳು ಬೇರೆ ಬೇರೆಯಾಗಿದ್ದು, ತಮಿಳುನಾಡು ಹಾಗೂ ಕೇರಳಲ್ಲಿ ಅಲ್ಲಿಯ ಭಾಷೆ ಬಿಟ್ಟರೆ, ಬೇರೆ ಮಾತೃಭಾಷೆಗಳಿಲ್ಲ. ಕನ್ನಡದ ಎಷ್ಟೋ ಸಾಹಿತಿಗಳ ಮಾತೃಭಾಷೆ ಕನ್ನಡವಾಗಿರಲಿಲ್ಲ. ಆದರೂ ಕನ್ನಡ ಭಾಷೆಯಲ್ಲಿ ಸಾಹಿತ್ಯದ ಕೃಷಿ ಮಾಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವುದರ ಜೊತೆಗೆ ಕನ್ನಡಕ್ಕೆ 8 ಜ್ಞಾನ ಪೀಠವನ್ನು ತಂದುಕೊಟ್ಟಿರುವುದು ಹೆಮ್ಮೆಯ ಸಂಗತಿಯಾಗಿದೆ. ಕನ್ನಡವನ್ನು ಮಾತನಾಡಿದಂತೆ ಬರೆಯುವುದು ಹಾಗೂ ಬರೆದಂತೆ ಓದಬಹುದು. ಇಂತಹ ಭಾಷೆ ಬೇರೊಂದಿಲ್ಲ. ಕನ್ನಡದಲ್ಲಿರುವ ರಗಳೆ ಮತ್ತು ಷಟ³ದಿಗಳು ಬೇರೆ ಭಾಷೆಯಲ್ಲಿ ಸಿಗುವುದಿಲ್ಲ. ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಿಗೆ ಸ್ವಂತ ಲಿಪಿಯೂ ಇಲ್ಲ. ಆದರೆ ಇದರ ಮಧ್ಯೆ ಸಿಲುಕಿದ ಕನ್ನಡ ಭಾಷೆ ಇಂದು ಸೊರಗಿ ಹೋಗಿದೆ.
ಸಮಾರಂಭದಲ್ಲಿ ಸಂಸ್ಥೆಯ ಕಲ್ಯಾಣ ಕಸ್ತೂರಿ ವಾರ್ಷಿಕ ಸ್ಮರಣ ಸಂಚಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಅತಿಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಸಂಘದ ಹಿರಿಯ ಅರ್ಥತಜ್ಞ ಟಿ. ಮೋಹನ್‌ದಾಸ್ ಪೈ, ಉದ್ಯಮಿ ಲೋಹಿತಾಕ್ಷ ಶೆಟ್ಟಿ ದಂಪತಿ, ಸಂಸ್ಥೆಯ ಸಕ್ರಿಯ ಕಾರ್ಯಕರ್ತ ಚನ್ನವೀರ ಅಡಿಗಣ್ಣವರ ದಂಪತಿ ಹಾಗೂ ಎಸ್. ಎಂ. ಸಾಲಿಮಠ ದಂಪತಿಯನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.
Related Articles
Advertisement
ಸಂಸ್ಥೆಯ ಮಹಿಳಾ ವಿಭಾಗದ ಸದಸ್ಯೆಯರು ಪ್ರಾರ್ಥನೆಗೈದರು. ಗಣ್ಯರು ಜ್ಯೋತಿ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಕಾಶ್ ಹೆಗ್ಡೆ ಕುಂಠಿನಿ ಕಾರ್ಯಕ್ರಮ ನಿರ್ವಹಿಸಿದರು. ಎಂ. ಆರ್. ಹೊಸಕೋಟೆ ವಂದಿಸಿದರು. ಕಲ್ಯಾಣ್‌ನ ವಿವಿಧ ಸಂಘಟನೆಗಳ ಸದಸ್ಯರು, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬಸು ಸಿರಂಗಿ ಅವರಿಂದ ಸಂಗೀತ ಸಂಜೆ, ಚಂದ್ರಹಾಸ ರೈ ಬಳಗದಿಂದ ಜಾನಪದ ಹಾಗೂ ಗಿಗಿ ಪದಗಳು ಗಮನ ಸೆಳೆಯಿತು. ಭಾರತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಗೌರವ ಕಾರ್ಯದರ್ಶಿ ಸಂಜೀವ ಹಿರೇಮಠ ವಾರ್ಷಿಕ ವರದಿ ಮಂಡಿಸಿದರು. ಗಣ್ಯರಾದ ದಿವಾಕರ ಶೆಟ್ಟಿ ಇಂದ್ರಾಳಿ, ಗೋಪಾಲ್ ಹೆಗ್ಡೆ, ಗುರುದೇವ್ ಭಾಸ್ಕರ್ ಶೆಟ್ಟಿ, ಡಾ| ಸುರೇಂದ್ರ ಶೆಟ್ಟಿ, ಡಾ| ರಘುನಾಥ್ ಅವರು ಉಪಸ್ಥಿತರಿದ್ದರು. ಸಂಸ್ಥೆಯ ಪದಾಧಿಕಾರಿಗಳಾದ ಸಂಜೀವ ಹಿರೇಮಠ, ಪ್ರಕಾಶ್ ನಾಯಕ್, ಎಂ. ಆರ್. ಹೊಸಕೋಟಿ, ಅಕ್ಕ ಮಹಾದೇವಿ ಹಿರೇಮಠ, ಜಿ. ಆರ್. ಮೂರ್ತಿ, ಗಿರಿಜಾ ಸೊಗಲದ, ಭಾರತಿ ಭೋಜ ಶೆಟ್ಟಿ, ರವೀಂದ್ರ ವೈ. ಶೆಟ್ಟಿ, ಪುಟ್ಟಪ್ಪ ಹಾನಗಲ್, ಜಿ. ವಿಶ್ವನಾಥ್, ಬಸವ ಪ್ರಭು ಜತ್ತಿ, ಕೊಟ್ರೇಶ್ ಮಠ, ಸದಾಶಿವ ಕೆ. ಶೆಟ್ಟಿ, ಮಾರುತಿ ಗಜಕೋಶ ಮೊದಲಾದವರು ಉಪಸ್ಥಿತರಿದ್ದರು. ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಬಿ. ಎಸ್. ಕುರ್ಕಾಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ರಾಜ್ಯೋತ್ಸವಗಳಂತಹ ಪ್ರಶಸ್ತಿಗಳಲ್ಲಿ ತುಳು-ಕನ್ನಡಿಗರಲ್ಲಿ ಭೇದ-ಭಾವ ಮಾಡಬಾರದು. ಅವಿರತ ಶ್ರಮದಿಂದಲೇ ಈ ಪ್ರಶಸ್ತಿಗಳು ಲಭಿಸುತ್ತದೆ. ಕಲ್ಯಾಣ್ ಕನ್ನಡ ಸಾಂಸ್ಕೃತಿಕ ಕೇಂದ್ರದ ಶೈಕ್ಷಣಿಕ, ಸಾಮಾಜಿಕ ಕಳಕಳಿ ಪ್ರಶಂಸನೀಯ – ಬಿ. ಶಾಂತಾರಾಮ ಶೆಟ್ಟಿ (ಕಾರ್ಯಾಧ್ಯಕ್ಷರು: ಬಂಟರವಾಣಿ ಮಾಸಿಕ). ಸಾಹಿತಿ ವ್ಯಾಸರಾವ್ ನಿಂಜೂರು ಅವರ ಜೊತೆಗೆ ವೇದಿಕೆ ಹಂಚಿಕೊಳ್ಳುತ್ತಿರುವುದು ಹೆಮ್ಮೆಯಾಗುತ್ತಿದೆ. ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ ಹಾಗೂ ಕಲ್ಯಾಣ್ ಕರ್ನಾಟಕ ಸಂಘಗಳು ಸಹೋದರ ಸಂಸ್ಥೆಯಿದ್ದಂತೆ. ಸಂಸ್ಥೆಯ ಅಭಿವೃದ್ದಿಗೆ ಎಲ್ಲರ ಸಹಕಾರ ಅಗತ್ಯ
– ಟಿ. ಎಸ್. ಉಪಾಧ್ಯಾಯ (ಮಾಜಿ ಅಧ್ಯಕ್ಷರು : ಕಲ್ಯಾಣ್ ಕರ್ನಾಟಕ ಸಂಘ). ಕಲ್ಯಾಣ್ ಕನ್ನಡ ಸಾಂಸ್ಕೃತಿಕ ಕೇಂದ್ರ ನಡೆದು ಬಂದ ದಾರಿ ರೋಚಕವಾಗಿದೆ. ಸಂಸ್ಥೆಯ ಯೋಜನೆ, ಯೋಚನೆಗಳಿಗೆ ಎಲ್ಲರ ಸಹಕಾರ ಅಗತ್ಯ. ಸಂಘದ ನೂತನ ಕಟ್ಟಡದ ಕನಸನ್ನು ನನಸಾಗಿಸಲು ತುಳು-ಕನ್ನಡಿಗರು ಒಮ್ಮತದಿಂದ ಸಹಕರಿಸಬೇಕು. ಕನ್ನಡದ ಕೈಂಕರ್ಯವನ್ನು ನಿಭಾಯಿಸಲು ನಮ್ಮ ಸಂಸ್ಥೆಯು ಸದಾ ಬದ್ಧವಾಗಿದೆ
– ಜ್ಯೋತಿ ಪ್ರಕಾಶ್ ಹೆಗ್ಡೆ ಕುಂಠಿನಿ (ಅಧ್ಯಕ್ಷರು : ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್).