ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಹಾಸ್ಯ ನಟರಾಗಿ ಬಂದವರು ಆ ನಂತರ ಹೀರೋಗಳಾಗಿದ್ದಾರೆ. ಅದಕ್ಕೆ ಉದಾಹರಣೆಯಾಗಿ ಸಾಕಷ್ಟು ಮಂದಿ ನಮ್ಮ ಕಣ್ಣ ಮುಂದೆಯೇ ಇದ್ದಾರೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ ಕೆಂಪೇಗೌಡ.
ಸುಮಾರು 80ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಮಿಡಿ, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು, ಸದ್ಯ “ಕಟ್ಲೆ’ ಸಿನಿಮಾಕ್ಕೆ ನಾಯಕರಾಗುತ್ತಿದ್ದಾರೆ. ಎಸ್.ಎಸ್.ವಿಧಾ ಎನ್ನುವವರು ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುದ್ದಾರೆ. ಹೊಸಕೋಟೆ ಮೂಲದ ಭರತ್ ಗೌಡ ಎಂಬುವವರು ಬಂಡವಾಳ ಹೂಡುತ್ತಿದ್ದಾರೆ.
ಈ ಕತೆಯಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳು ಇರಲಿದೆ. ಹಳೆಗನ್ನಡ ಶೀರ್ಷಿಕೆಯಾಗಿದ್ದು, ಅಡಿಬರಹದಲ್ಲಿ ಅವಧಿ ಅಂತ ಹೇಳಿಕೊಂಡಿದೆ. ಪ್ರತಿಯೊಂದು ಮನುಷ್ಯನಿಗೂ ಸಮಯ ಎನ್ನುವುದು ಇರುತ್ತದೆ. ಮನುಷ್ಯನ ಸಾವು ದೇಹಕ್ಕೆ ಮಾತ್ರ. ಆತ್ಮಕ್ಕೆ ಇರೋಲ್ಲ. ದೇಹವು ಪಂಚಭೂತಗಳಲ್ಲಿ ವಿಲೀನ ಆಗುತ್ತದೆ. ಆತ್ಮಕ್ಕೆ ಪುನರಪಿ ಮರಣಂ, ಪುನರಪಿ ಜನನಂ ಎಂದು ಹೇಳುತ್ತಾರೆ. ವೇದಗಳ ಪ್ರಕಾರ ನಾವು ನೋಡುತ್ತಿರುವ ಪಂಚಭೂತ ಶಕ್ತಿಗಳು ದಿಟ. ಎರಡಕ್ಕೂ ಎಲ್ಲೋ ಒಂದು ಕಡೆ ಸಂಬಂದ ಇದೆ. ಅದು ಹೇಗೆ ಎಂಬುದನ್ನು ತೋರಿಸುವ ಪ್ರಯತ್ನ ಈ ಸಿನಿಮಾದಲ್ಲಿ ಆಗುತ್ತಿದೆಯಂತೆ.
ಇದನ್ನೂ ಓದಿ:ಪ್ರಮೋಶನ್ ಅಖಾಡಕ್ಕೆ ಸಲಗ: ಏಪ್ರಿಲ್ 10 ಪ್ರೀ ರಿಲೀಸ್ ಇವೆಂಟ್
ಚಿತ್ರದಲ್ಲಿ ಅಮೃತ ಮತ್ತು ಶರಣ್ಯ ನಾಯಕಿಯರು. ಇವರೊಂದಿಗೆ ಟೆನ್ನಿಸ್ ಕೃಷ್ಣ, ಪವನ್ ಕುಮಾರ್, ಕರಿಸುಬ್ಬು ಮುಂತಾದವರು ನಟಿಸುತ್ತಿದ್ದಾರೆ. ಈಗಾಗಲೇ ಶೇಕಡ 70 ರಷ್ಟು ಚಿತ್ರೀಕರಣವು ಶಿರಸಿ, ಮಲೆನಾಡು ಭಾಗಗಳಲ್ಲಿ ಮುಗಿಸಲಾಗಿದೆ. ಎಂ.ಸಂಜೀವರಾವ್ ರಾಗಗಳನ್ನು ಸಂಯೋಜಿಸಿದ್ದಾರೆ.