Advertisement
ಹೌದು, ಆಗಸ್ಟ್ 20ರಂದು ತಮ್ಮ ಸಿನಿಮಾವನ್ನು ಬಿಡುಗಡೆ ಮಾಡಬೇಕೆಂದು ಒಂದಷ್ಟು ಸಿನಿಮಾಗಳು ತಂಡಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಈಗಾಗಲೇ ವಿಜಯ್ ನಟನೆ, ನಿರ್ದೇಶನದ “ಸಲಗ’, ಸೂರಜ್ ನಟನೆಯ “ನಿನ್ನ ಸನಿಹಕೆ’ ಚಿತ್ರಗಳು ಆಗಸ್ಟ್ 20ರಂದು ತಮ್ಮ ಬಿಡುಗಡೆಯನ್ನು ಘೋಷಿಸಿ ಕೊಂಡಿವೆ. ಇದರ ನಡುವೆಯೇ ಯೋಗಿ ನಟನೆಯ “ಲಂಕೆ’ ಚಿತ್ರಕೂಡಾ ಆಗಸ್ಟ್ 20ಕ್ಕೆ ಬರಲು ತುದಿಗಾಲಿನಲ್ಲಿ ನಿಂತಿದೆ. ಜೊತೆಗೆ ಆ ದಿನ ನಮಗೆ ಹೆಚ್ಚು ಸೂಕ್ತವಾಗುತ್ತದೆ ಎಂದಿದೆ.
Related Articles
Advertisement
ಆಗಸ್ಟ್ 20ಕ್ಕೆ ಡಿಮ್ಯಾಂಡ್ ಯಾಕೆ?: ಎಲ್ಲಾ ಓಕೆ, ಬಹುತೇಕ ಸಿನಿಮಾ ಮಂದಿ ಆಗಸ್ಟ್ 20ರ ಮೇಲೆಕಣ್ಣು ಇಡಲು ಕಾರಣವೇನು, ಆ ದಿನದ ವಿಶೇಷವೇನು ಎಂದು ನೀವು ಕೇಳಬಹುದು. ಅದಕ್ಕೆ ಮುಖ್ಯವಾಗಿ ಮೂರು ಕಾರಣ, ಮೊದಲನೇಯದಾಗಿ ಅಂದು ವರಮಹಾಲಕ್ಷ್ಮೀ ಹಬ್ಬ. ಆ ದಿನ ಸಿನಿಮಾ ರಿಲೀಸ್ ಮಾಡಿದರೆ ಒಳ್ಳೆಯದು ಎಂಬ ನಂಬಿಕೆ ಒಂದು ಕಡೆಯಾದರೆ, ಆಗಸ್ಟ್ 20ರ ಹೊತ್ತಿಗೆ ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ತೆರೆದು ರೆಡಿಯಾಗಿರುತ್ತದೆ ಎಂಬುದು ಇನ್ನೊಂದು. ಇನ್ನು, ಮೂರನೇಯ ಕಾರಣವೆಂದರೆ ಮೂರನೇ ಅಲೆಯ ಭಯ. ಆಗಸ್ಟ್‌ನಲ್ಲಿ ಕೊರೊನಾ ಮೂರನೇ ಅಲೆ ಬರುತ್ತದೆ ಎಂಬ ಭಯ ಜನರಲ್ಲಿದೆ.
ಒಂದು ವೇಳೆ ಮತ್ತೆ ಕೊರೊನಾ ತೀವ್ರವಾದರೆ ಚಿತ್ರಮಂದಿರ ಗಳು ಬಾಗಿಲು ಹಾಕಬೇಕಾಗುತ್ತದೆ. ಆಗ ಮತ್ತೆ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗುತ್ತದೆ ಎಂಬ ಭಯ. ಈ ಎಲ್ಲಾಕಾರಣಗಳಿಂದಾಗಿ ಆಗಸ್ಟ್20ರ ಮೇಲೆ ಚಿತ್ರ ತಂಡಗಳು ಕಣ್ಣಿಟ್ಟಿವೆ. ಈ ಎಲ್ಲಾ ಕಾರಣಗಳು ಮೇಲ್ನೋಟಕ್ಕೆ ಸಕಾರಣಗಳಂತೆ ಕಂಡರೂ ಎಲ್ಲಾ ಸಿನಿಮಾಗಳು ಒಂದೇ ದಿನ ತೆರೆಗಪ್ಪಳಿಸಿದರೆ, ಅದರಿಂದ ಎಲ್ಲರಿಗೂ ನಷ್ಟವೇ.
ಸೆಪ್ಟೆಂಬರ್‌ನಲ್ಲಿ ಸಿನಿಮಾ ಕ್ಯೂ: ತೋತಾಪುರಿ ಅಖಾಡಕ್ಕೆ ಇದು ಆಗಸ್ಟ್ ಕಥೆಯಾದರೆ ಸೆಪ್ಟೆಂಬರ್‌ನಲ್ಲೂ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಲಿವೆ. ಶಿವರಾಜ್‌ಕುಮಾರ್ ಅಭಿನಯದ “ಭಜರಂಗಿ-2′ ಈಗಾಗಲೇ ಸೆಪ್ಟೆಂಬರ್10ರಂದು ಬರುವುದಾಗಿ ಘೋಷಿಸಿಕೊಂಡಿದೆ. ಈಗ “ತೋತಾಪುರಿ’ ಸರದಿ. ಜಗ್ಗೇಶ್ ನಾಯಕರಾಗಿರುವ “ತೋತಾಪುರಿ’ ಚಿತ್ರದ ಡಬ್ಬಿಂಗ್‌ಕಾರ್ಯ ಪೂರ್ಣಗೊಂಡಿದೆ. ಈಗ ಇತ್ತ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಸೆಪ್ಟೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಬಿಗ್ ಬಜೆಟ್‌ನ ಹಾಗೂ ಹಿಟ್‌ಕಾಂಬಿನೇಶನ್‌ನ ಸಿನಿಮಾವಾಗಿ “ತೋ ತಾಪುರಿ’ ನಿರೀಕ್ಷೆ ಹುಟ್ಟಿಸಿದೆ. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಚಿತ್ರ ಎರಡು ಭಾಗಗಳಲ್ಲಿ ಬರುತ್ತಿದೆ.
ರವಿಪ್ರಕಾಶ್ ರೈ