Advertisement

ಬದಲಾದ ಸಮಯದಲ್ಲಿ ‘ಬಿಗ್ ಬಾಸ್’ ಶೋ…‘ಸೀಸನ್ 8’ಗೆ ಡೇಟ್ ಫಿಕ್ಸ್

08:14 PM Feb 15, 2021 | Team Udayavani |

ಅತೀ ಹೆಚ್ಚು ವೀಕ್ಷಕರನ್ನ ಹೊಂದಿರುವ ಜನಪ್ರಿಯ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಹೊಸ ಸೀಸನ್ (8ನೇ) ಪ್ರಾರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

Advertisement

ನಟ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಯಶಸ್ವಿಯಾಗಿ ಮೂಡಿ ಬರಲಿರುವ ಬಿಗ್ ಬಾಸ್ 8ನೇ ಸೀಸನ್ ಇದೇ ಫೆ. 28 ರಿಂದ ಪ್ರತಿದಿನ ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇಂದು ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಟ್ವಿಟರ್ ನಲ್ಲಿ ಪ್ರೋಮೊ ರಿಲೀಸ್ ಮಾಡಿದೆ.

ಇನ್ನು ಈ ಬಾರಿ ಬಿಗ್ ಮನೆಗೆ ಕಾಲಿಡಲಿರುವ ಸ್ಪರ್ಧಿಗಳು ಯಾರು ಎಂಬುದು ಇದುವರೆಗೆ ರಿವೀಲ್ ಆಗಿಲ್ಲ. ಫೆ. 28 ರಂದೇ ಸ್ಪರ್ಧಿಗಳ ಹೆಸರು ಬಹಿರಂಗವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next