ಮುಂಬಯಿ: ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ದಶಮಾನೋತ್ಸವ ಸಮಾರಂಭವು ಫೆ. 25 ರಂದು ಪೂರ್ವಾಹ್ನ ಕುರ್ಲಾ ಪೂರ್ವ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ದಿನವಿಡೀ ಜರಗಿತು.
ಬಂಟ್ಸ್ ಸಂಘ ಮುಂಬಯಿ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಮಿತಿ ಹಾಗೂ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ ಅವರು ವಹಿಸಿದ್ದರು.
ಸಮಾರಂಭದಲ್ಲಿ ಕಲಾಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಹಿರಿಯ ಯಕ್ಷಗಾನ ಅರ್ಥದಾರಿ ಕೆ. ಕೆ. ಶೆಟ್ಟಿ, ಬಿ. ಬಿ. ಜೋಶಿ, ದೇವದಾಸ ಶೆಟ್ಟಿ, ರಾಘು ಪಿ. ಶೆಟ್ಟಿ, ಶೈಲಜಾ ಮಧುಸೂದನ್, ಶೇಖರ್ ಕೋಟ್ಯಾನ್, ಶಿವರಾಜ್ ಸುವರ್ಣ, ಚಂದ್ರಪ್ರಭಾ ಸುವರ್ಣ, ಶ್ಯಾಮ್ ಎನ್. ಶೆಟ್ಟಿ ಕೆಮ್ರಾಲ್ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಕೆ. ಕೆ. ಶೆಟ್ಟಿ ಮತ್ತು ರಾಘು ಪಿ. ಶೆಟ್ಟಿ ಅವರು ಮಾತನಾಡಿ ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ದಶಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನ ಮುಂಬಯಿ ಸಂಸ್ಥಾಪಕ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್, ಉದ್ಯಮಿ ಹಾಗೂ ಸಮಾಜ ಸೇವಕರುಗಳಾದ ಬಿ. ವಿವೇಕ ಶೆಟ್ಟಿ, ಕರುಣಾಕರ್ ಎಂ. ಶೆಟ್ಟಿ, ಶಂಕರ ಶೆಟ್ಟಿ ವಿರಾರ್, ಭಾಸ್ಕರ ಶೆಟ್ಟಿ ಖಾಂದೇಶ್, ಶ್ರೀನಿವಾಸ ಸಾಫಲ್ಯ, ಎನ್. ಎನ್. ಪಾಲ್, ಐಕಳ ಗುಣಪಾಲ ಶೆಟ್ಟಿ, ಡಾ| ಆರ್. ಕೆ. ಶೆಟ್ಟಿ, ಸಂತೋಷ್ ಶೆಟ್ಟಿ ಪುಣೆ, ಲತಾ ಪ್ರಭಾಕರ್ ಶೆಟ್ಟಿ, ಅಮರನಾಥ ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಉಪಾಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಜತೆ ಕಾರ್ಯದರ್ಶಿ ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರ್, ಜತೆ ಕೋಶಾಧಿಕಾರಿ ಮಹೇಶ್ ಎಸ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಇದರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ, ದಶಮಾನೋತ್ಸವ ಸಮಿತಿಯ ಸಂಘಟನಾ ಕಾರ್ಯದರ್ಶಿ ದೇವದಾಸ ಪಿ. ಸಾಲ್ಯಾನ್, ಪರಿಷತ್ತಿನ ಸಂಸ್ಥಾಪಕಾಧ್ಯಕ್ಷ ಎಸ್. ಟಿ. ವಿಜಯಕುಮಾರ್ ತಿಂಗಳಾಯ, ಉಪಾಧ್ಯಕ್ಷರುಗಳಾದ ಕಮಲಾಕ್ಷ ಜಿ. ಸರಾಫ್ ಮತ್ತು ನ್ಯಾಯವಾದಿ ಸುಭಾಷ್ ಬಿ. ಶೆಟ್ಟಿ, ಗೌ| ಕೋಶಾಧಿಕಾರಿ ಪಿ. ಬಿ. ಚಂದ್ರಹಾಸ್, ಜೊತೆ ಕಾರ್ಯದರ್ಶಿ ಚಂದ್ರಾವತಿ ದೇವಾಡಿಗ, ಜೊತೆ ಕೋಶಾಧಿಕಾರಿ ನವೀನ್ ಶೆಟ್ಟಿ ಇನ್ನಬಾಳಿಕೆ ಅವರು ಉಪಸ್ಥಿತರಿದ್ದರು.
ವಿಶೇಷ ಆಮಂತ್ರಿತರುಗಳಾಗಿ ಉಮಾಕೃಷ್ಣ ಶೆಟ್ಟಿ, ಶಿವರಾಮ ಜಿ. ಶೆಟ್ಟಿ ಅಜೆಕಾರು, ಶ್ಯಾಮ ಎನ್. ಶೆಟ್ಟಿ, ಭಾಸ್ಕರ ಶೆಟ್ಟಿ ಕಾಶಿಮೀರಾ, ರತ್ನಾಕರ ಶೆಟ್ಟಿ ಮುಂಡ್ಕೂರು, ಹರೀಶ್ ಎನ್. ಶೆಟ್ಟಿ ಮಲಾಡ್, ಸಿಎ ಸದಾಶಿವ ಶೆಟ್ಟಿ, ಕುಶಲ ಭಂಡಾರಿ ಥಾಣೆ, ಸುಧಾಕರ ಜಿ. ಪೂಜಾರಿ, ಮಂಜುನಾಥ ಬನ್ನೂರು, ಸುಬ್ಬಯ್ಯ ಶೆಟ್ಟಿ ಕಲ್ಯಾಣ್, ಸಂಯೋಜಕರುಗಳಾದ ಕರ್ನೂರು ಮೋಹನ್ ರೈ ಮತ್ತು ಪದ್ಮನಾಭ ಸಸಿಹಿತ್ಲು, ದಶಮಾನೋತ್ಸವ ಸಮಿತಿಯ ಉಪಾಧ್ಯಕ್ಷ ಅನಿಲ್ ಶೆಟ್ಟಿ ಏಳಿಂಜೆ, ಕೈಪಿಡಿ ಸಮಿತಿಯ ಕಾರ್ಯಾಧ್ಯಕ್ಷ ಜಿ. ಟಿ. ಆಚಾರ್ಯ, ಸಂಚಾಲಕ ಸಾ. ದಯಾ ಮೊದಲಾದವರು ಉಪಸ್ಥಿತರಿದ್ದು ಡಾ| ಸುನೀತಾ ಎಂ. ಶೆಟ್ಟಿ ಅವರನ್ನು ಅಭಿನಂದಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್