Advertisement

Vrusha Patil; ಲವ್ ಬೆಡಗಿಯ ಸಿನಿಕನಸು

04:59 PM Nov 02, 2023 | Team Udayavani |

ಇತ್ತೀಚೆಗಷ್ಟೇ ತೆರೆಕಂಡ ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ “ಲವ್‌’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ನಟಿ ವೃಷಾ ಪಾಟೀಲ್‌. “ಲವ್‌’ ಸಿನಿಮಾದಲ್ಲಿ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡ ವೃಷಾ, ಮೊದಲ ಸಿನಿಮಾದಲ್ಲೇ ಸಿನಿಪ್ರಿಯರು ಮತ್ತು ಸಿನಿಮಾ ಮಂದಿಯ ಗಮನ ಸೆಳೆದ ಹುಡುಗಿ.

Advertisement

ಉತ್ತರ ಕರ್ನಾಟಕದ ಹುಬ್ಬಳ್ಳಿ ಮೂಲದ ವೃಷಾ ಪಾಟೀಲ್‌, ಬಾಲ್ಯದಿಂದಲೇ ಸಿನಿಮಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳತ್ತ ಆಸಕ್ತಿ ಬೆಳೆಸಿಕೊಂಡ ಹುಡುಗಿ. ನಟಿ ಸೌಂದರ್ಯ ಅಂದ್ರೆ ವೃಷಾಗೆ ಅಚ್ಚುಮೆಚ್ಚು. ಮುಂದೆ ಸೌಂದರ್ಯ ಅವರಂತೆ ದೊಡ್ಡ ನಟಿಯಾಗಬೇಕು ಎಂಬುದು ವೃಷಾ ಬಾಲ್ಯದಿಂದಲೇ ಕಾಣುತ್ತಿದ್ದ ಕನಸು. ಹುಬ್ಬಳ್ಳಿಯಲ್ಲೇ ತಮ್ಮ ಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ಪೂರೈಸಿದ ವೃಷಾ, ಆನಂತರ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿನತ್ತ ಮುಖ ಮಾಡಿದ್ದರು.

ಸಿನಿಮಾ ಹಿನ್ನೆಲೆಯಿಲ್ಲದ ಕಾರಣ, ಆರಂಭದಲ್ಲಿ ಮನೆಯವರಿಂದಲೂ ವೃಷಾ ಸಿನಿಮಾ ಎಂಟ್ರಿಗೆ ಕೊಂಚ ವಿರೋಧವಿತ್ತು. ಆದರೂ ಛಲ ಬಿಡದ ವೃಷಾ, ತಮ್ಮ ಓದಿನ ನಡುವೆಯೇ ಒಂದಷ್ಟು ಆಡಿಷನ್ಸ್‌ಗಳನ್ನು ಕೊಡುವುದಲ್ಲದೆ, ಅಭಿನಯಕ್ಕೆ ಬೇಕಾದ ತಯಾರಿ ಕೂಡ ಮಾಡಿಕೊಂಡಿದ್ದರು. ಇದೇ ವೇಳೆ “ಲವ್‌’ ಸಿನಿಮಾದ ಆಫ‌ರ್‌ ವೃಷಾ ಪಾಟೀಲ್‌ ಅವರನ್ನು ಹುಡುಕಿಕೊಂಡು ಬಂದಿತು.

ಬಹುತೇಕ ಹೊಸ ಪ್ರತಿಭೆಗಳಿದ್ದ ಈ ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡಿದ್ದು, ವೃಷಾ ಅಭಿನಯಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ “ಲವ್‌’ ಸಿನಿಮಾದ ನಂತರ ಒಂದಷ್ಟು ಸಿನಿಮಾಗಳ ಆಫ‌ರ್ ವೃಷಾ ಅವರನ್ನು ಹುಡುಕಿಕೊಂಡು ಬರುತ್ತಿದ್ದು, ಆ ಸಿನಿಮಾಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next