Advertisement

ಆ್ಯಕ್ಷನ್ ಸೀನ್ ಶೂಟಿಂಗ್ ವೇಳೆ ಅವಘಡ : ನಟಿ ಶಾನ್ವಿ ಶ್ರೀವಾಸ್ತವ್ ಗೆ ಗಾಯ

07:43 PM Aug 01, 2021 | Team Udayavani |

ಬೆಂಗಳೂರು: ‘ಬ್ಯಾಂಗ್’ ಸಿನಿಮಾದ ಚಿತ್ರೀಕರಣದ ವೇಳೆ ನಟಿ ಶಾನ್ವಿ ಶ್ರೀವಾಸ್ತವ್ ಬಿದ್ದು ಗಾಯ ಮಾಡಿಕೊಂಡಿದ್ದಾರೆ.

Advertisement

ಕನ್ನಡದ ನಟಿ ಶಾನ್ವಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಬ್ಯಾಂಗ್ ಸಿನಿಮಾ ಸಾಹಸ ದೃಶ್ಯವೊಂದನ್ನು ಮಳೆಯಲ್ಲಿ ಶೂಟ್ ಮಾಡಲಾಗುತ್ತಿತ್ತು. ಈ ವೇಳೆ ಅವರು ಜಾರಿ ಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರತಂಡ ಹೇಳಿದೆ.

ಈ ಚಿತ್ರದ ಆಕ್ಷನ್ ದೃಶ್ಯಕ್ಕಾಗಿ ಶಾನ್ವಿ 9 ರಿಂದ 10 ಗಂಟೆಗಳ ಕಾಲ ಮಳೆಯಲ್ಲೇ ನಿಂತು ಫೈಟ್ ಮಾಡುತ್ತಿದ್ರು, ಚಿತ್ರೀಕರಣ ಕೂಡ ಅದ್ಭುತವಾಗಿ ನಡೆಯುತ್ತಿತ್ತು. ಆದರೆ ಕಾಲು ಜಾರಿ ಬಿದ್ದಿರು. ಕೈಗೆ ಪೆಟ್ಟಾಗಿದೆ. ಸದ್ಯ ಚಿತ್ರೀಕರಣ ನಿಲ್ಲಿಸಿದ್ದೇವೆ. ಶಾನ್ವಿ ಈಗ ಆರಾಮಾಗಿ ಇದ್ದಾರೆ. ಏನು ಸಮಸ್ಯೆ ಇಲ್ಲ” ಎಂದು ಚಿತ್ರತಂಡದವರು ತಿಳಿಸಿದ್ದಾರೆ.

ಇನ್ನು ಬ್ಯಾಂಗ್ ಸಿನಿಮಾ ಶ್ರೀ ಗಣೇಶ್ ಪರಶುರಾಮ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಚಿತ್ರಕ್ಕೆ ಯು ಕೆ ಪ್ರೊಡಕ್ಷನ್ ಲಾಂಛನದಲ್ಲಿ ವಸಂತ್ ಕುಮಾರ್ ಬಂಡವಾಳ ಹೂಡುತ್ತಿದ್ದಾರೆ. ಅಂದಹಾಗೆ ಶಾನ್ವಿ ಮೊದಲ ಬಾರಿಗೆ ಖಡಕ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next