Advertisement

ಭೋಜಪುರಿ ಮತ್ತೊಂದು ಚಿತ್ರದಲ್ಲಿ ಬ್ಯುಝಿಯಾದ ನಟಿ ಹರ್ಷಿಕಾ ಪೂಣಚ್ಚ

03:25 PM Jul 03, 2021 | Team Udayavani |

ಬೆಂಗಳೂರು: ಲಾಕ್ ಡೌನ್ ಟೈಮಿನಲ್ಲಿ ಅತೀ ಹೆಚ್ಚು ಸದ್ದು ಮಾಡಿದ್ದು ಚಂದನವನದ ನಟಿ ಹರ್ಷಿಕಾ ಪೂಣಚ್ಚ. ಸಮಾಜ ಸೇವೆ ತನ್ನ ಮುಖ್ಯ ಗುರಿ ಎಂದುಕೊಂಡಿರುವ ಈ ಬೆಡಗಿ ರಾಜ್ಯಾದ್ಯಂತ ತಿರುಗಾಡಿ ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದರು. ಇದೀಗ ಲಾಕ್ ಡೌನ್ ತೆರವಾಗಿದ್ದರಿಂದ ಸಿನಿಮಾ ರಂಗದಲ್ಲಿ ಮತ್ತೆ ಬ್ಯುಸಿಯಾಗಿದ್ದಾರೆ.

Advertisement

ಅಂದಹಾಗೆ ಹರ್ಷಿಕಾ ಅವರ ಸಿನಿ ಡೈರಿಗೆ ಮತ್ತೊಂದು ಹೊಸ ಸಿನಿಮಾ ಸೇರ್ಪಡೆಯಾಗಿದೆ. ಅದು ಭೋಜಪುರಿ ಸಿನಿಮಾ ಅನ್ನೋದು ಮತ್ತೊಂದು ವಿಶೇಷ.  ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರೇಮಾಂಶು ಸಿಂಗ್ ಈ ಚಿತ್ರಕ್ಕೆ ಆಕ್ಷನ್‌ ಕಟ್ ಹೇಳಿದ್ದು, ‘ಸಜನ್ ರೇ ಜೂಟ್ ಮತ್ ಬೋಲೊ’ ಎಂಬ ಶೀರ್ಷಿಕೆ ಇಟ್ಟಿದ್ದಾರೆ. ಪ್ರದೀಪ್ ಪಾಂಡೆ ನಾಯಕನಾಗಿ ಅಭಿನಯಿಸಿದ್ದಾರೆ. ಸೊಲ್ಲಾಪುರದಲ್ಲಿ 15 ದಿನದ ಚಿತ್ರೀಕರಣವನ್ನು ಕಂಪ್ಲೀಟ್‌ ಮಾಡಿದ್ದಾರೆ. ನಾಸಿರ್ ಜಮಾಲ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.

ಇನ್ನು ಹರ್ಷಿಕಾ ಪೂಣಚ್ಚ ಅವರು ಭೋಜಪುರಿ ಸಿನಿಮಾದಲ್ಲಿ ನಟಿಸುತ್ತಿರುವುದು ಇದೆ ಮೊದಲೆನಲ್ಲ. ಈಗಾಗಲೇ ಪವನ್ ಸಿಂಗ್ ಜೊತೆ ‘ಹಮ್ ಹೈನ್ ರಾಹಿ ಪ್ಯಾರ್ ಕೇ’ ಚಿತ್ರದಲ್ಲಿ ನಟಿಸಿದ್ದು, ಇತ್ತೀಚೆಗೆ ಈ ಸಿನಿಮಾ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಭೋಜಪುರಿ ಸಿನಿಮಾದಲ್ಲಿ ಹರ್ಷಿಕಾ ಪೂಣಚ್ಚ ಅಭಿನಯಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next