ಬೆಂಗಳೂರು: ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ಅವರು ದುಃಖದಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಮುದ್ದಿನ ಸಾಕು ನಾಯಿ ‘ಲಕ್ಕಿ’ಯ ಮರಣ.
ಉಗ್ರಂ ಬೆಡಗಿ ಹರಿಪ್ರಿಯಾ ಅವರು ಪ್ರೀತಿಯಿಂದ ಸಾಕಿ ಬೆಳೆಸಿದ್ದ , ಎಂಟು ವರ್ಷದಿಂದ ಮನೆಯ ಸದಸ್ಯನಂತಿದ್ದ ಲಕ್ಕಿ ಕೊನೆಯಿಸಿರೆಳೆದಿದೆ. ಇದು ಹರಿಪ್ರಿಯಾ ಅವರು ದುಃಖಕ್ಕೆ ಕಾರಣವಾಗಿದ್ದು, ಕಣ್ಣೀರು ಹಾಕಿದ್ದಾರೆ.
ಲಕ್ಕಿಯ ಹಲವು ಫೋಟೊಗಳನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ಹರಿಪ್ರಿಯ ಭಾವುಕ ನುಡಿಗಳನ್ನಾಡಿದ್ದಾರೆ. ”ಲಕ್ಕಿ, ಒಂದು ಅದ್ಭುತವಾದ ಜೀವ. ಲಕ್ಕಿ ನಮ್ಮೊಂದಿಗೆ 8.5 ವರ್ಷ ಇದ್ದ. ನಮಗೆಲ್ಲ ಬಹಳ ಖುಷಿ ಹಾಗೂ ನೆನಪುಳಿಯುವ ಸುಂದರ ಕ್ಷಣಗಳನ್ನು ನೀಡಿ ಹೋಗಿದ್ದಾನೆ. ನಾನು ಅವನೊಂದಿಗೆ ಇದ್ದಾಗ ಸುರಕ್ಷಿತ ಭಾವ ಅನುಭವಿಸುತ್ತಿದ್ದೆ. ನಾವು ಒಟ್ಟಿಗೆ ಆಟವಾಡುತ್ತಿದ್ದೆವು, ಒಟ್ಟಿಗೆ ಪ್ರವಾಸ ಹೋಗುತ್ತಿದ್ದೆವು, ಒಬ್ಬರನ್ನೊಬ್ಬರು ಕಾಡಿಸುತ್ತಿದ್ದೆವು ಕೂಡ” ಎಂದಿದ್ದಾರೆ ಹರಿಪ್ರಿಯ.
Related Articles
ಮತ್ತೊಂದು ಟ್ವೀಟ್‌ನಲ್ಲಿ, ”ಲಕ್ಕಿ, ನಿನ್ನನ್ನು ಪಡೆಯಲು ನಾನು ಅದೃಷ್ಟ ಮಾಡಿದ್ದೆ. ನಿನಗೆ ಹೇಳುವುದೊಂದೆ, ನೀನು ಎಲ್ಲಿಗೇ ಹೋಗಿದ್ದರೂ ಅಲ್ಲಿ ಒಳ್ಳೆಯವನಾಗಿರು. ನೀನು ಪುನರ್ಜನ್ಮ ಪಡೆದು ಬಂದಲ್ಲಿ ನನ್ನನ್ನು ಗುರುತಿಸಿ ಮಾತನಾಡು. ನನಗೆ ಗೊತ್ತಿದೆ ನೀನು ನನ್ನ ಸುತ್ತ-ಮುತ್ತಲೆ ಮತ್ತೆ ಹುಟ್ಟುತ್ತೀಯ. ನಿನಗೆ ಗುಡ್ ಬೈ ಹೇಳಲು ನೋವಾಗುತ್ತದೆ. ನಾವುಗಳೆಲ್ಲರೂ ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇವೆ” ಎಂದಿದ್ದಾರೆ.