Advertisement

ಆ್ಯಕ್ಟಿಂಗ್‌ ಡೈರೆಕ್ಷನ್‌ ಎರಡಕ್ಕೂ ಸೈ…ಬಿಝಿ ಅಪೂರ್ವ

03:30 PM Apr 30, 2022 | Team Udayavani |

ಕ್ರೇಜಿಸ್ಟಾರ್‌ ರವಿಚಂದ್ರನ್‌ ಅಭಿನಯದ “ಅಪೂರ್ವ’ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಚಂದನವನಕ್ಕೆ ಪರಿಚಯವಾದ ನಟಿ ಅಪೂರ್ವ, ನಂತರ “ವಿಕ್ಟರಿ’, “ಕೃಷ್ಣ ಟಾಕೀಸ್‌’ ಸಿನಿಮಾದ ಮೂಲಕ ಭರವಸೆಯ ನಾಯಕ ನಟಿಯಾಗಿ ಗುರುತಿಸಿಕೊಂಡವರು. ನಾಯಕಿಯಾಗಿ ಒಂದಷ್ಟು ಅವಕಾಶಗಳು ಕೈಯಲ್ಲಿರುವಾಗಲೇ ಅಪೂರ್ವಾ ಈಗ ನಿರ್ದೇಶಕಿಯಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ.

Advertisement

“ಓ ನನ್ನ ಚೇತನ’ ಎಂಬ ಸಿನಿಮಾವನ್ನು ನಿರ್ದೇಶಿಸುವ ಮೂಲಕ ಅಪೂರ್ವಾ, ಈಗ ನಿರ್ದೇಶಕಿಯಾಗಿಯೂ ಬಡ್ತಿ ಪಡೆದುಕೊಂಡಿದ್ದಾರೆ. ಇಂದಿನ ಮಕ್ಕಳು ಹಾಗೂ ಸ್ಮಾರ್ಟ್ ಪೋನ್‌ ವಿಷಯವನ್ನು ಇಟ್ಟುಕೊಂಡು ತಯಾರಾದ ಈ ಚಿತ್ರ, ಇತ್ತೀಚೆಗೆ ನಡೆದ 13ನೇ “ಬೆಂಗಳೂರು ಅಂತರ ರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡು ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿತ್ತು.

ಅಂದಹಾಗೆ, ಹೋಮ್ಲಿ ಮತ್ತು ಗ್ಲಾಮರಸ್‌ ಎರಡೂ ಥರದ ಲುಕ್‌ಗೂ ಸೈ ಎನಿಸಿಕೊಂಡಿರುವ ಅಪೂರ್ವಾ, ಈಗ “ಪುರುಷೋತ್ತಮ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಇದೇ ಮೇ ತಿಂಗಳಿನಲ್ಲಿ ಚಿತ್ರ ತೆರೆ ಕಾಣುತ್ತಿದೆ.

ಇದನ್ನೂ ಓದಿ:‘ಬೆಂಕಿ’ಯಲ್ಲಿ ಅರಳಿದ ಹಾಡು

ಇನ್ನು “ಪುರುಷೋತ್ತಮ’ ಚಿತ್ರದಲ್ಲಿ ಅಪೂರ್ವಾ ಕಂಪ್ಲೀಟ್‌ ಹೋಮ್ಲಿ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇತ್ತೀಚೆಗೆ ನಟ ಮತ್ತು ನಿರ್ದೇಶಕ ರಿಷಭ್‌ ಶೆಟ್ಟಿ, “ಪುರುಷೋತ್ತಮ’ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next