Advertisement

ತೆಲುಗಿನ “ಓದೆಲಾ ರೇಲ್ವೇ ಸ್ಟೇಷನ್‌”ನಲ್ಲಿ ವಸಿಷ್ಠ  ಸಿಂಹ ಕಮಾಲ್‌

04:29 PM Aug 30, 2022 | Team Udayavani |

ಕನ್ನಡ ಚಿತ್ರರಂಗದಲ್ಲಿ ತಮ್ಮ ಕಂಚಿನ ಕಂಠ ಮತ್ತು ಅಭಿನಯದ ಮೂಲಕ ಹೆಸರಾಗಿರುವ ನಟ ವಸಿಷ್ಠ ಸಿಂಹ ಇದೀಗ ತೆಲುಗು ಚಿತ್ರರಂಗದತ್ತಲೂ ಮುಖ ಮಾಡಿದ್ದು, ಇತ್ತೀಚೆಗೆ ವಸಿಷ್ಠ ಸಿಂಹ ಅಭಿನಯಿಸಿದ ಚೊಚ್ಚಲ ತೆಲುಗು ಸಿನಿಮಾ “ಓದೆಲಾ ರೇಲ್ವೇ ಸ್ಟೇಷನ್‌’, ತೆಲುಗಿನ ಜನಪ್ರಿಯ ಓಟಿಟಿ ಫ್ಲಾಟ್‌ಪಾರ್ಮ್ “ಆಹಾ’ದಲ್ಲಿ ಬಿಡುಗಡೆಯಾಗಿದೆ.

Advertisement

ಇನ್ನು “ಓದೆಲಾ ರೇಲ್ವೇ ಸ್ಟೇಷನ್‌’ ನೈಜ ಘಟನೆಯಾಧಾರಿತ ಸಿನಿಮಾವಾಗಿದ್ದು, ಕರೀಮ್‌ ನಗರದಲ್ಲಿ ನಡೆದ ಘಟನೆಯೊಂದನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಈ ಸಿನಿಮಾದಲ್ಲಿ ವಸಿಷ್ಠ ಸಿಂಹ, ತಿರುಪತಿ ಎಂಬ ಧೋಬಿಯ ಪಾತ್ರದಲ್ಲಿ ಡಬಲ್‌ ಶೇಡ್‌ನ‌ಲ್ಲಿ ಕಾಣಿಸಿಕೊಂಡಿದ್ದಾರೆ.

“ಯುವ ನಿರ್ದೇಶಕ ಅಶೋಕ್‌ ತೇಜ ಈ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳಿದ್ದು, ಹೆಬಾ ಪಟೇಲ್‌ ನಾಯಕಿಯಾಗಿ ಅಭಿನಯಿಸಿದ್ದಾರೆ. ಸದ್ಯ ಬಿಡುಗಡೆಯಾಗಿರುವ “ಓದೆಲಾ ರೇಲ್ವೇ ಸ್ಟೇಷನ್‌’ ಸಿನಿಮಾಕ್ಕೆ ತೆಲುಗು ಸಿನಿಪ್ರಿಯರು ಮತ್ತು ಸಿನಿಮಾ ಮಂದಿಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮೊದಲ ತೆಲುಗು ಸಿನಿಮಾದಲ್ಲಿಯೇ ವಸಿಷ್ಠ ಟಾಲಿವುಡ್‌ ಮಂದಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next