ಕನ್ನಡದಲ್ಲಿ ಈಗಾಗಲೇ ಅನೇಕ ಭಕ್ತಿಪ್ರಧಾನ ಚಿತ್ರಗಳು ಬಂದಿವೆ. ಈ ಚಿತ್ರದ ಮೂಲ ಉದ್ದೇಶ ದೇವರ ಶಕ್ತಿ, ಕಾರ್ಣಿಕವನ್ನು ಪ್ರೇಕ್ಷಕರಿಗೆ ತೋರಿಸುವುದು. ಈಗ ಇಂಥದ್ದೇ ಒಂದು ಪ್ರಯತ್ನವಾಗಿ “ಸಿಂಹ ರೂಪಿಣಿ’ ಎಂಬ ಸಿನಿಮಾವೊಂದು ಸಿದ್ಧವಾಗಿದ್ದು, ನಿನ್ನೆ (ಅ.17) ರಂದು ತೆರೆಕಂಡಿದೆ.
ಕಿನ್ನಾಳ್ ರಾಜ್ ಅವರ ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಜೊತೆಗೆ ನಿರ್ದೇಶನವಿದೆ. ದೊಡ್ಡಬಳ್ಳಾಪುರ ಕೆ.ಎಂ.ನಂಜುಂಡೇಶ್ವರ ಕಥೆ ಬರೆದು ಶ್ರೀ ಚಕ್ರ ಫಿಲಂಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ನಿರ್ದೇಶಕ ಕಿನ್ನಾಳ್ ರಾಜ್ ಮಾತನಾಡಿ, ಶೀರ್ಷಿಕೆ ಹೇಳುವಂತೆ ಶ್ರೀ ಮಾರಮ್ಮ ದೇವಿ ಕುರಿತಾಗಿದ್ದು, ಚಿತ್ರದಲ್ಲಿ ಗ್ರಾಫಿಕ್ಸ್ ಹೆಚ್ಚು ಬಳಸಲಾಗಿದೆ. ರಾಕ್ಷಸನನ್ನು ಸಂಹಾರ ಮಾಡಲು ಪಾರ್ವತಿದೇವಿ ಏಳು ಅವತಾರಗಳಲ್ಲಿ ಭೂಮಿಗೆ ಬರುತ್ತಾಳೆ. ಅದರಲ್ಲಿ ಕೊನೆಯದು ಶ್ರೀ ಮಾರಮ್ಮ ದೇವಿಯದ್ದು ಆಗಿರುತ್ತದೆ. ತಾಯಿಯ ಮಹಿಮೆ, ಪವಾಡಗಳು, ಈಗಿನ ಟ್ರೆಂಡ್‌ಗೆ ತಕ್ಕಂತೆ ಕಮರ್ಷಿಯಲ್ ಅಂಶಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರದಲ್ಲಿ 132 ಕಲಾವಿದರು ಅಭಿನಯಿಸಿದ್ದಾರೆ’ ಎಂದರು.
ನಿರ್ಮಾಪಕ ಕೆ.ಎಂ.ನಂಜುಡೇಶ್ವರ ಹೇಳುವಂತೆ ಪ್ರತಿಯೊಬ್ಬರ ಜೀವನದಲ್ಲಿ ಒಂದೊಂದು ಅನುಭವ ಆಗಿರುತ್ತದೆ. ತಾಯಿ ವಿರಾಜಮಾನವಾಗಿ ಕೂತಿದ್ದಾಳೆ. ನೀವುಗಳು ದರ್ಶನ ಮಾಡಿದ್ದೀರಾ. ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ. ತಾಯಿಯ ಅನುಭವವನ್ನು ಫೀಲ್ ಮಾಡಿ. ತ್ರಿಮೂರ್ತಿ, ತ್ರಿಶಕ್ತಿ, ಸರ್ವಶಕ್ತಿ ಸ್ವರೂಪಿಣಿ ಗ್ರಾಮ ದೇವತೆ ಮಾರಮ್ಮ. ಮೂರು ದೇವತೆಗಳು, ತ್ರಿಮೂರ್ತಿಗಳು. ಎಲ್ಲಾ ದೇವರುಗಳಿಗೆ ಮೂಲ ದೇವರು ಗ್ರಾಮ ದೇವತೆ. ನಿಮ್ಮೂರಿನ ದೇವತೆಯ ಪೂಜೆ ಮಾಡಿ, ಶ್ರೀಮನ್ ನಾರಾಯಣ ತಿರುಪತಿಯಲ್ಲಿ ದರ್ಶನವಾದಂತೆ ಆಗುತ್ತದೆ’ ಎಂದರು.