ವಿಜಯಪುರ : ಚಿತ್ರರಂಗ ಮಾತ್ರವಲ್ಲ, ಎಲ್ಲ ರಂಗಗಳಲ್ಲೂ ಮಹಿಳೆಯನ್ನು ಸುಲಭವಾಗಿ ಗುರಿ ಮಾಡುವ ಮನೋಭಾವ ಸಮಾಜದಲ್ಲಿ ಸಹಜವಾಗಿ ನಡೆಯುತ್ತಿದೆ ಎಂದು ಚಿತ್ರನಟಿ ರಾಗಿಣಿ ದ್ವಿವೇದಿ ಬೇಸರ ವ್ಯಕ್ತಪಡಿಸಿದರು.
ಬುಧವಾರ (ಜೂನ್ 16) ವಿಜಯಪುರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಾರು ಏನೇ ದೂರು, ಆರೋಪ ಮಾಡಿದರೂ ಜನರ ಪ್ರೀತಿ, ವಿಶ್ವಾಸ ನನ್ನ ಮೇಲಿದೆ ಎಂದರು.
ನಾವು ತಪ್ಪು ಮಾಡಿಲ್ಲಾ ಎಂದಾದರೆ ಅನಗತ್ಯ ಭಯಪಟ್ಟು, ಒತ್ತಡಕ್ಕೆ ಸಿಲುಕುವ ಅಗತ್ಯವಿಲ್ಲ. ಮಾದಕ ವಸ್ತು ಪ್ರಕತಣದೆ ನನ್ನನ್ನು ಉದ್ದೇಶ ಪೂರ್ವಕವಾಗಿ ಗುರಿ ಮಾಡಲಾಗಿದೆ. ಹೆಣ್ಮಕ್ಕಳನ್ನು ತುಂಬಾ ಸುಲಭವಾಗಿ ಗುರಿ ಮಾಡೋದು ಸಮಾಜದಲ್ಲಿ ಹವ್ಯಾಸವಾಗಿದೆ.
ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಸಂಬರಗಿ ಯಾರೆಂದು ನನಗೆ ಗೊತ್ತಿಲ್ಲ. ನಿಜವಾಗಿಯೂ ನನಗೆ ಸಂಬರಗಿ ಪರಿಚಯವಿಲ್ಲ, ಅವರೊಂದಿಗೆ ನಾನು ಮಾತನಾಡಿಯೂ ಇಲ್ಲ, ಅವರವರ ಅಭಿಪ್ರಾಯ ಹೇಳುತ್ತಾರೆ, ಅಂಥವರನ್ನು ನಮ್ಮಂಥವರು ನಿಯಂತ್ರಿಸಲು ಸಾಧ್ಯವಿಲ್ಲ. ನಾನು ಏನು ಮಾಡ್ತಿನಿ, ಏನು ಮಾತಾಡ್ತಿನಿ ಅನ್ನೋದನ್ನು ಮಾತ್ರ ನಿಯಂತ್ರಣ ಮಾಡುತ್ತೇನೆ ಎಂದರು.
ನನ್ನನ್ನು ಎಲ್ಲರೂ ಇಷ್ಟ ಪಡುತ್ತಾರೆ, ನನಗೆ ನನ್ನದೇ ಅಭಿಮಾನಿ ಬಳಗವಿದೆ. ಕಷ್ಟಕಾಲದಲ್ಲಿ ನನ್ನನ್ನು ಇಷ್ಟ ಪಟ್ಟವರಿಗೂ, ಇಷ್ಟ ಪಡದವರಿಗೂ ಧನ್ಯವಾದಗಳು ಎಂದರು.