Advertisement

ಮಗನಿಗೆ ಬಹಳ ಒಳ ಏಟು ಬಿದ್ದಿದೆ: ನಟ ಜಗ್ಗೇಶ್

12:37 PM Jul 02, 2021 | Team Udayavani |

ಬೆಂಗಳೂರು: ಸ್ಯಾಂಡಲ್ವುಡ್ ಹಿರಿಯ ನಟ ಜಗ್ಗೇಶ್ ತಮ್ಮ ಪುತ್ರ ಯತಿರಾಜ್ ಕಾರು ಅಪಘಾತದ ಕುರಿತು ಮತ್ತೊಂದು ಟ್ವೀಟ್ ಮಾಡಿದ್ದಾರೆ.

Advertisement

ಪುತ್ರನ ಆರೋಗ್ಯದ ಬಗ್ಗೆ ಹೇಳಿರುವ ಜಗ್ಗೇಶ್, ‘ಜೀವನದಲ್ಲಿ ಸಂಸಾರದ ಸರ್ವಸದಸ್ಯರ ಭಾರಹೊತ್ತು, ತನಗಾಗಿ ಏನು ಬಯಸದೆ. ತನ್ನವರಿಗಾಗಿ ಬಂದದ್ದೆಲ್ಲಾ ಸಹಿಸಿ ನೋವುನುಂಗಿ ಹೆಜ್ಜೆ ಹಾಕುವ ಮೌನಯೋಗಿ ಅಪ್ಪ. ಇಂದು ಬಹಳ ನೆನಪಾದ ನನ್ನ ಅಪ್ಪ. ಅವನ ತ್ಯಾಗದ ಮುಂದೆ ಇಂದು ನಾನು ತೃಣ ಎನಿಸಿತು. ಮಗನಿಗೆ ಬಹಳ ಒಳ ಏಟು ಬಿದ್ದಿದೆ, ಪಕ್ಕೆಮೂಳೆ ಬಲತೊಡೆ ligamentಗೆ ಬಲವಾದ ಪೆಟ್ಟು. ಚಿಕಿತ್ಸೆ ನಡೆಯುತ್ತಿದೆ” ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಟ್ವೀಟ್ ಮಾಡಿರುವ ಅವರು, ಕೆಟ್ಟ ಭಯ ಆವರಿಸುತ್ತಿದೆ. ಮನೆಯವರು ನೋಡದಂತೆ ವಿನಂತಿ ಮಾಡಿದರು ಹಾಗಾಗಿ ಟ್ವೀಟ್ ಡಿಲೀಟ್ ಮಾಡಿರುವುದಾಗಿ ಹೇಳಿದ್ದಾರೆ. “ಮಗನ ಕಾರ್ accident ಚಿತ್ರ ನೋಡಿದರೆ ನನಗೆ ಹೃದಯದ ಬಡಿತ ಹೆಚ್ಚಾಗುತ್ತಿದೆ. ಕೆಟ್ಟ ಭಯ ಆವರಿಸುತ್ತದೆ. ಬೆಳಿಗ್ಗೆಯಿಂದ ಏನು ತಿನ್ನಲಾಗದೆ ಕೆಟ್ಟ ಕಲ್ಪನೆಗಳು ನನ್ನ ಕಾಡುತ್ತಿದೆ. ಮನೆಯವರು ಅದ ನೋಡದಂತೆ ವಿನಂತಿ ಮಾಡಿದರು. ಹಾಗಾಗಿ ಹಾಕಿದ ವಿಷಯ ಡಿಲೀಟ್ ಮಾಡಿದೆ” ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next