Advertisement

ಮಹಿಳೆಯರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಬದಲು ಸುರಕ್ಷತಾ ಕಾರ್ಯ ಕೈಗೊಳ್ಳಿ : ನಟ ಚೇತನ್  

03:55 PM Aug 28, 2021 | Team Udayavani |

ಬೆಂಗಳೂರು: ವಿದ್ಯಾರ್ಥಿನಿ ಅತ್ಯಾಚಾರ ಘಟನೆ ಹಿನ್ನೆಲೆ ಮೈಸೂರು ವಿಶ್ವವಿದ್ಯಾಲಯ ಹೊರಡಿಸಿರುವ ಕೆಲವೊಂದು ನಿಯಮಗಳನ್ನು ಚಲನಚಿತ್ರ ನಟ ಚೇತನ್ ಕುಮಾರ್ ಖಂಡಿಸಿದ್ದಾರೆ.

Advertisement

ಇಂದು (ಆ.27) ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅವರು, ಮೈಸೂರಿನ ಸಾಮೂಹಿಕ ಅತ್ಯಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ವಿಶ್ವವಿದ್ಯಾಲಯವು ಹೆಣ್ಣು ಮಕ್ಕಳು ಸಂಜೆ 6.30ರ ಮೇಲೆ ಒಬ್ಬಂಟಿಯಾಗಿ ಕ್ಯಾಂಪಸ್ ನಲ್ಲಿ ಓಡಾಡಬಾರದೆಂಬ ನಿಯಮವನ್ನು ಜಾರಿಗೆ ತಂದಿದೆ. ಇದು ಹೆಸರಾಂತ ಶೇಕ್ಷಣಿಕ ಸಂಸ್ಥೆಗೆ ನಾಚಿಕಗೇಡಿನ ವಿಷಯ. ಮಹಿಳೆಯರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಬದಲು ಮಾನಸ ಗಂಗೋತ್ರಿಯು ಹೆಣ್ಣು ಮಕ್ಕಳಿಗೆ ರಕ್ಷಣಾತ್ಮಕ ಮತ್ತು ಸುರಕ್ಷತಾ ಕಾರ್ಯ ವಿಧಾನಗಳನ್ನು ಹೆಚ್ಚಿಸಬೇಕೆಂದು ಚೇತನ್ ಆಗ್ರಹಿಸಿದ್ದಾರೆ.

ಆದೇಶ ಹಿಂಪಡೆದ ವಿಶ್ವ ವಿದ್ಯಾಲಯ :

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬಳಿಕ ಮೈಸೂರು ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯರ ಚಲನವಲನ ಮೇಲೆ ನಿರ್ಬಂಧ ವಿಧಿಸಿತ್ತು. ಸಂಜೆ 6.30ರ ನಂತರ ವಿದ್ಯಾರ್ಥಿನಿಯರು ಹೊರಗೆ ಅಡ್ಡಾಡುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿತ್ತು. ಆದರೆ ಅದಕ್ಕೆ ವ್ಯಾಪಕವಾದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸುತ್ತೋಲೆ ಹಿಂಪಡೆಯಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ ನಾರಾಯಣ ತಿಳಿಸಿದ್ದಾರೆ.

ವಿಶ್ವವಿದ್ಯಾಲಯಗಳ ಕ್ಯಾಂಪಸ್ ಗಳು ವಿಸ್ತಾರವಾಗಿರುತ್ತದೆ ಎಂಬುದು ಸಾಮಾನ್ಯ ನಿಜವಾದ ಸಂಗತಿಯಾದರೂ ವಿದ್ಯಾರ್ಥಿನಿಯರು, ಹೆಣ್ಣುಮಕ್ಕಳ ಓಡಾಟಕ್ಕೆ ನಿರ್ಬಂಧ ಹೇರುವುದು ಸರಿಯಾದ ನಿಯಮವಲ್ಲ. ಅದರ ಬದಲಿಗೆ ಕ್ಯಾಂಪಸ್ ನ್ನು ಸುರಕ್ಷಿತವಾಗಿಡಲು ಕ್ರಮ ಕೈಗೊಳ್ಳುವಂತೆ ಮೈಸೂರು ವಿವಿ ಕುಲಪತಿಗಳಿಗೆ ಸೂಚಿಸಿದ್ದೇನೆ ಎಂದು ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

Advertisement

ವಿಶ್ವವಿದ್ಯಾಲಯ ನಿನ್ನೆ ಹೊರಡಿಸಿದ್ದ ಸುತ್ತೋಲೆಯಲ್ಲಿ ಸಂಜೆ 6.30ರ ಬಳಿಕ ಕುಕ್ಕರಹಳ್ಳಿ ಕೆರೆ ಆವರಣದಲ್ಲಿಯೂ ಜನರು ಓಡಾಡುವಂತಿಲ್ಲ ಎಂದು ನಿರ್ಬಂಧ ವಿಧಿಸಲಾಗಿತ್ತು. ಪೊಲೀಸರು ಮೌಖಿಕವಾಗಿ ನೀಡಿದ ಸೂಚನೆ ಮೇರೆಗೆ ಸುರಕ್ಷತೆ ಮತ್ತು ಮುಂಜಾಗ್ರತೆ ಕ್ರಮವಾಗಿ ವಿ.ವಿ ಈ ಸುತ್ತೋಲೆ ಹೊರಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next