Advertisement

ಮಳಿಗೆಗಳ ನಾಮಫ‌ಲಕ ಬದಲಿಸದಿರುವುದು ಖಂಡನೀಯ

04:31 PM Nov 07, 2022 | Team Udayavani |

ತುಮಕೂರು: ಜಿಲ್ಲೆಯ ಅಂಗಡಿ, ಮುಂಗಟ್ಟುಗಳ ನಾಮಫ‌ಲಕ ಸರ್ಕಾರವೇ ಹೊರಡಿಸಿರುವ ಆದೇಶದಂತೆ 60-40ರ ಅನುಪಾತದಲ್ಲಿ ಕನ್ನಡದಲ್ಲಿ ಇರಬೇಕೆಂದು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರೂ, ಇಂದಿಗೂ ಬಹುತೇಕರು ತಮ್ಮ ಅಂಗಡಿಗಳ ನಾಮಫ‌ಲಕ ಬದಲಿಸದಿರುವುದು ಖಂಡನೀಯ ಎಂದು ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್‌ ತಿಳಿಸಿದರು.

Advertisement

ನಗರದ ಚರ್ಚ್‌ ಸರ್ಕಲ್‌ನಲ್ಲಿ ಕದಂಬ ಕನ್ನಡ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡ ಸಂಘಟನೆಗಳ ಒತ್ತಾಯದ ಮೇರೆಗೆ ಜಿಲ್ಲಾಧಿಕಾರಿಗಳು ಒಂದು ವಾರದ ಮುಂಚಿತವಾಗಿಯೇ ನಾಮಫ‌ಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದರೆ ಚರ್ಚ್‌ ಸರ್ಕಲ್‌ನಲ್ಲಿಯೇ ಇರುವ ಬಹು ತೇಕ ಅಂಗಡಿಯವರು ಈ ನಿಯಮ ಪಾಲಿಸಿಲ್ಲ. ಕೂಡಲೇ ಅವರು ನಾಮಫ‌ಲಕ ಬದಲಾಯಿಸ ದಿದ್ದರೆ ನಾವುಗಳೇ ಬದಲಿಸುವ ಕೆಲಸ ಪ್ರಾರಂಭಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮೀಸಲು ಕಲ್ಪಿಸಲಿ: ಕನ್ನಡ ನಾಡಿನಲ್ಲಿ ಕನ್ನಡ ಅನ್ನದ ಭಾಷೆಯಾಗಬೇಕಾದರೆ ಉದ್ಯೋಗ, ಶಿಕ್ಷಣದಲ್ಲಿ ಕನ್ನಡ ಶಾಲೆಗಳ ಜೊತೆಗೆ, ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಇಂತಿಷ್ಟು ಮೀಸಲಾತಿ ಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹುದ್ದೆಗಳಲ್ಲಿ ಮೀಸಲಿಟ್ಟರೆ ಕನ್ನಡ ಶಾಲೆಗಳು ಸಹ ಉಳಿಯಲಿವೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್‌.ಸಿದ್ದಲಿಂಗಪ್ಪ ಮಾತನಾಡಿ, ಕರ್ನಾಟಕದಲ್ಲಿ ಕನ್ನಡಭಾಷೆಯೇ ಸಾರ್ವಭೌಮ ಎಂಬ ನಿಟ್ಟಿನಲ್ಲಿ ಸರ್ಕಾರ ಸಮಗ್ರ ಭಾಷಾ ವಿಧೇಯಕ-2022 ಮಂಡನೆಯಾಗುತ್ತಿದೆ. ಇದರ ಪರಿಣಾಮ 1-10ನೇ ತರಗತಿಯವರೆಗೆ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸಲು ಕಾಯ್ದೆಯ ಬಲ ಬರಲಿದೆ ಎಂದರು.

ಕರ್ನಾಟಕಕ್ಕೆ ಸೇರಿಸಬೇಕು: ಜಿಲ್ಲೆಯಲ್ಲಿ ಕನ್ನಡ ಭಾಷೆಯ ಏಕೀಕರಣಕ್ಕೆ ಬಿ.ಎಂ.ಶ್ರೀ, ತೀನಂಶ್ರೀ, ತಾಳೆಕೆರೆ ಸುಬ್ರಹ್ಮಣ್ಯಂ ಸೇರಿದಂತೆ ಹಲವರು ಹೋ ರಾಟ ನಡೆಸಿದ್ದಾರೆ. ಅವರುಗಳನ್ನು ನಾವೆಲ್ಲರೂ ಜ್ಞಾಪಿಸಿಕೊಳ್ಳಬೇಕಿದೆ. ಆಂಧ್ರದ ಅಕ್ಕಲಕೋಟೆ, ಕಾಸರಗೋಡು, ಸಾಂಗ್ಲಿ ಹಾಗೂ ನೆರೆಯ ಮಡಕ ಶಿರಾದಲ್ಲಿ ಕನ್ನಡ ಮಾತನಾಡುವ ಜನರ ಸಂಖ್ಯೆ ಹೆಚ್ಚಿದೆ. ಅವುಗಳನ್ನು ಕರ್ನಾಟಕಕ್ಕೆ ಸೇರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕಿದೆ ಎಂದರು.

ಕದಂಬ ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ಅನಿಲ್‌ಕುಮಾರ್‌ ಮಾತನಾಡಿ, ಕನ್ನಡ ನಾಡು, ನುಡಿ, ಜಲ, ನೆಲ ವಿಚಾರವಾಗಿ ಸಾಕಷ್ಟು ಹೋರಾಟ ಗಳನ್ನು ಸಂಘ ಮಾಡುತ್ತಾ ಬಂದಿದೆ.ಇದರ ಜೊತೆಗೆ ಸಮಾಜ ಸೇವೆಯಲ್ಲಿಯೂ ತೊಡಗಿಕೊಂಡಿದೆ. ಇವುಗಳಿಗೆ ಬೆನ್ನೆಲುಬಾಗಿ ಧನಿಯಕುಮಾರ್‌ ಸಹಕಾರ ನೀಡುತ್ತಿದ್ದಾರೆ ಎಂದರು.

Advertisement

ಸಂಘದ ಪದಾಧಿಕಾರಿಗಳಾದ ಚಂಗಾವಿ ರವಿ, ಪ್ರಧಾನ ಕಾರ್ಯದರ್ಶಿ ಮಂಜು ನಾಥ್‌, ಆಟೋ ಘಟಕದ ಜಿಲ್ಲಾಧ್ಯಕ್ಷ ಶ್ರೀಧರ್‌, ಶಬ್ಬೀರ ಅಹಮದ್‌, ಶಂಕರ್‌, ಪ್ರಕಾಶ್‌, ಸಂತೋಷ, ಶಶಿಕುಮಾರ್‌ ಉಪ್ಪಾರ ಹಳ್ಳಿ, ವಿಶ್ವನಾಥ್‌ ಮರಳೂರು ದಿಣ್ಣೆ, ಬಂಬು ಮೋಹನ್‌, ಹರೀಶ್‌ ಅಣೆತೋಟ, ವಕೀಲ ರಾದ ವೆಂಕಟಾಚಲ, ಈರುಳ್ಳಿ ನಾಗಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next