Advertisement
-ಸುದೀಪ್ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಏಕಕಾಲದಲ್ಲಿ ಐದು ಭಾಷೆಯಲ್ಲಿ ತೆರೆಗೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಬಿಡುಗಡೆ.
– ಚಿತ್ರದಲ್ಲಿ ಕುಸ್ತಿ ಹಾಗೂ ಬಾಕ್ಸಿಂಗ್ ಪಟುವಾಗಿ ನಟನೆ. ಪಾತ್ರಕ್ಕಾಗಿ ಪ್ರೊಫೆಶನಲ್ಸ್‌ಗಳಿಂದ ತರಬೇತಿ
– ಜಿಮ್‌ನಿಂದ ದೂರವಿದ್ದ
ಸುದೀಪ್ ಚಿತ್ರಕ್ಕಾಗಿ ಜಿಮ್ ಮಾಡಿ, ಫಿಟ್ ಆದ ಚಿತ್ರ
– ಮೊದಲ ಬಾರಿಗೆ ಸುನೀಲ್
ಶೆಟ್ಟಿ ಕನ್ನಡದಲ್ಲಿ ನಟಿಸಿದ ಸಿನಿಮಾ.
– “ಹೆಬ್ಬುಲಿ’ ಯಶಸ್ಸಿನ ನಂತರ ಕೃಷ್ಣ-ಸುದೀಪ್ ಜೋಡಿಯ ಎರಡನೇ ಚಿತ್ರ.
– ಆ್ಯಕ್ಷನ್ ಜೊತೆಗೆ ಫ್ಯಾಮಿಲಿ ಡ್ರಾಮಾ -ಇದು “ಪೈಲ್ವಾನ್’ ಚಿತ್ರದ ಹೈಲೈಟ್ಸ್. ನಿನ್ನೆ ತೆರೆಕಂಡಿರುವ “ಪೈಲ್ವಾನ್’ ಸುದೀಪ್ ಅವರಿಗೆ ಸಾಕಷ್ಟು ವಿಶೇಷ ಅನುಭವ ನೀಡಿದ ಸಿನಿಮಾ ಎಂದರೆ ತಪ್ಪಲ್ಲ. ಸುದೀಪ್ ಇಲ್ಲಿವರೆಗೆ ಸಾಕಷ್ಟು ಕಮರ್ಷಿಯಲ್ ಸಿನಿಮಾಗಳನ್ನು ಮಾಡಿದ್ದಾರೆ. ಆದರೆ, “ಪೈಲ್ವಾನ್’ ಅವೆಲ್ಲ ಸಿನಿಮಾಗಳಿಗಿಂತ ತುಂಬಾನೇ ಭಿನ್ನ. ಅದು ಕಥೆ, ತಯಾರಿಯಿಂದ ಹಿಡಿದು ಬಿಡುಗಡೆವರೆಗೆ. ಹೌದು, “ಪೈಲ್ವಾನ್’ ಚಿತ್ರ ಏಕಕಾಲಕ್ಕೆ ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಈ ಹಿಂದಿನ ಸಿನಿಮಾಗಳು ಬೇರೆ ಭಾಷೆಯಲ್ಲಿ ಬಿಡುಗಡೆಯಾಗಿದ್ದರೂ ಏಕಕಾಲದಲ್ಲಿ ಬಿಡುಗಡೆಯಾಗಿದ್ದು ಕಡಿಮೆಯೇ.
Related Articles
Advertisement
ಆದರೂ, ನಾನು ಮಾಡಬೇಕು ಅಂತ ಅಂದಾಗ, ಭಯ ಶುರುವಾಯ್ತು. ಯಾವುದೋ ಶೇಪ್‌ನಿಂದ ಇನ್ಯಾವುದೋ ಶೇಪ್ ತಗೋಬೇಕು. ಕೆಲ ಸ್ನೇಹಿತರು ವರ್ಷಗಟ್ಟಲೆ ಅದನ್ನು ಮಾಡಿದ್ದಾರೆ. ನಾನು ಮಾಡಬೇಕು ಎಂಬುದನ್ನು ನೆನಪಿಸಿಕೊಂಡರೆ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಂಡಿದ್ದು ನಿಜ. ಅದಕ್ಕೆಲ್ಲ ಸಮಯ ಬೇಕು, ತಾಳ್ಮೆ ಬೇಕು. ನನ್ನಿಂದ ಸಾಧ್ಯವಿಲ್ಲ ಅನ್ನುತ್ತಲೇ, ನೀವು ಬೇರೆಯವರನ್ನು ಇಟ್ಟುಕೊಂಡು ಚಿತ್ರ ಮಾಡಿಬಿಡಿ ಅನ್ನೋ ಮಾತುಕತೆ ಬಂತು. ಕೊನೆಗೆ ನೀವು ಮಾಡಿದರೆ ಮಾಡ್ತೀನಿ ಸರ್ ಅಂದಾಗಲೂ, ಈ ಸಿನಿಮಾನೇ ಬೇಡ ಅಂತ ಹೋಗಿದ್ದೂ ಇದೆ. ಒಂದು ವಾರದ ಬಳಿಕ ಯಾಕೋ ತಲೆಗೆ ಒಂದು ಯೋಚನೆ ಬಂತು. ನಾನು ಯಾವುದರ ಹಿಂದೆ ಓಡುತ್ತಾ ಇದ್ದೀನಿ. ಇವತ್ತಲ್ಲ ನಾಳೆ ಮಾಡಲೇಬೇಕು.
ಪ್ರಯತ್ನ ಮಾಡೋಣ, ಅಬ್ಬಬ್ಟಾ ಅಂದ್ರೆ ಒಂದು ಮಟ್ಟಕ್ಕೆ ಬರ್ತಿನಿ ಅಲ್ವಾ ಎಂಬ ಯೋಚನೆ ಬಂತು. ಅದಕ್ಕಿಂತ ಹೆಚ್ಚಾಗಿ ಒಂದು ಹಠ ಶುರುವಾಯ್ತು. ಆ ಹಠಕ್ಕೆ ಕಾರಣ, “ಕುಸ್ತಿ’ ಮೇಲೆ ಒಂದು ಸಿನಿಮಾ ಮಾಡ್ತೀನಿ ಅನ್ನೋದು. ಕ್ರೀಡೆಗೆ ಸಂಬಂಧಿಸಿದ ಚಿತ್ರ ಮಾಡಿರಲಿಲ್ಲ. “ಪೈಲ್ವಾನ’ ಮಾಡೋಕೆ ರೆಡಿಯಾದೆ. ಜಿಮ್‌ಗೆ ತುಂಬಾ ಡೆಡಿಕೇಷನ್ ಬೇಕಿತ್ತು. ಅಲ್ಲಿ ಕಟ್ಟುನಿಟ್ಟಿನ ಕೆಲಸ ಶುರುವಾಯ್ತು. ಡಯೆಟ್ ಕೂಡ ಸರಿಯಾಗಿತ್ತು ಒಳೆಯ ಟ್ರೈನರ್ ಸಿಕ್ಕರು. ನಾನು ಊಟ ಮಾಡೋದು ಕಮ್ಮಿ. ಕುರುಕಲು ತಿಂಡಿ ತಿನ್ನೋದು ಜಾಸ್ತಿ ಇತ್ತು. ಆದರೂ, ಅದನ್ನು ಜಿಮ್‌ಗಾಗಿ ನಿಲ್ಲಿಸಿದೆ. ರಾಮೋಜಿ ಫಿಲ್ಮ್ಸಿಟಿಯಲ್ಲೇ ಎಲ್ಲವೂ ವ್ಯವಸ್ಥೆ ಆಗಿತ್ತು. ಏಳಕ್ಕೆ ಊಟ ಮುಗಿಸಬೇಕು. ಏಳೂವರೆ ಆದರೂ ಊಟ ಮಾಡುವಂತಿಲ್ಲ. ಶೇಪ್ ಆಗೋಕೆ ಸಾಕಷ್ಟು ಕಸರತ್ತು ಮತ್ತು ಶಿಸ್ತು ಬೇಕಿತ್ತು.
4.30 ಕ್ಕೆ ಎದ್ದರೆ, 5ಕ್ಕೆ ಜಿಮ್‌ಗೆ ಹೋಗಿ, 6.15 ರ ತನಕ ವಕೌìಟ್ ಮಾಡಿ, ಅಲ್ಲಿಂದ ಐದು ನಿಮಿಷ ಲೊಕೇಶನ್‌ಗೆ ತಲುಪಿ, ಸಿಗುವ 15 ನಿಮಿಷ ಮಲಗಿ, ನಂತರ 7.15 ಕ್ಕೆ ಫಸ್ಟ್ ಶಾಟ್ ಕೊಡುತ್ತಿದ್ದೆ. 1.15 ಕ್ಕೆ ಊಟ ಕೊಡಲೇಬೇಕಿತ್ತು. ನಂತರ 5.15 ಕ್ಕೆ ಬಂದು ನೇರ ಸ್ವಿಮ್ಮಿಂಗ್ ಮುಗಿಸಿ ಮನೆಗೆ ಹೋಗಿ, ಒಂದು ಬ್ಲಾಕ್ ಕಾಫಿ ಕುಡಿದು, ನಾನೇ ಬೇಕಾದ ಅಡುಗೆ ಮಾಡಿ ಊಟ ಮುಗಿಸಿ 8.30 ಕ್ಕೆ ಮಲಗುತ್ತಿದ್ದೆ. ನನಗೆ ವರ್ಕ್ ಡಿಸಿಪ್ಲೀನ್ ಜಾಸ್ತಿ. ಆದರೆ, ಪರ್ಸನಲ್ ಡಿಸಿಪ್ಲೀನ್ ಕಮ್ಮಿ. ಆದರೆ, “ಪೈಲ್ವಾನ’ ನನ್ನ ಜೀವನದಲ್ಲಿ ಶಿಸ್ತು ಕಲಿಸಿತು. ಶಿಸ್ತು ನಿಮ್ಮ ಜೀವನವನ್ನು ಬದಲಿಸುತ್ತದೆ’ ಎಂದು “ಪೈಲ್ವಾನ್’ ಚಿತ್ರದ ಬಗ್ಗೆ ಹೇಳುತ್ತಾರೆ.
ಈ ಚಿತ್ರವನ್ನು ಕೃಷ್ಣ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಆಕಾಂಕ್ಷಾ ಸಿಂಗ್, ಕಬೀರ್ ಸಿಂಗ್ ದುಹಾನ್, ಸುಶಾಂತ್ ಸಿಂಗ್, ಶರತ್ ಲೋತಾಶ್ವ, ಅವಿನಾಶ್, ಅಪ್ಪಣ್ಣ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಕೃಷ್ಣ, ಡಿ.ಎಸ್.ಕಣ್ಣನ್ ಹಾಗೂ ಜೆ.ಮಧುಕಿರಣ್ ಚಿತ್ರಕಥೆ ಬರೆದಿದ್ದಾರೆ. ಕೃಷ್ಣ ಹಾಗೂ ಡಿ.ಎಸ್.ಕಣ್ಣನ್ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಕರುಣಾಕರ್ ಅವರ ಛಾಯಾಗ್ರಹಣದೆ. ರುಬೆನ್ ಸಂಕಲನ, ಗಣೇಶ್ ಆಚಾರ್ಯ, ರಾಜು ಸುಂದರಂ, ಹರ್ಷ ನೃತ್ಯ ಹಾಗೂ ರಾಮ್ – ಲಕ್ಷ್ಮಣ್, ಅವರ ಸಾಹಸವಿದೆ.
ರವಿಪ್ರಕಾಶ್ ರೈ