Advertisement

ಕನಕಪುರ: ವೈಯಕ್ತಿಕ ದ್ವೇಷಕ್ಕೆ ಕೊಲೆಗೈದಿದ್ದ ಆರೋಪಿ ಸೆರೆ

03:20 PM Jan 25, 2021 | Team Udayavani |

ಕನಕಪುರ: ವೈಯಕ್ತಿಕ ದ್ವೇಷಕ್ಕೆ ಮಲಗಿದ್ದ ಅಪರಿಚಿತ ವ್ಯಕ್ತಿಯ ಮೇಲೆ ಸಿಮೆಂಟ್‌ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿದ್ದ ಪ್ರಕರಣವನ್ನು ಭೇದಿಸಿರುವ ಕಗ್ಗಲೀಪುರ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

ತಾಲೂಕಿನ ಕಸಬಾ ಹೋಬಳಿಯ ಮಾದಾಪುರ ದೊಡ್ಡಿ ಗ್ರಾಮದ ವಾಸಿ ದಿ. ವೆಂಕಟಾ ಬೋವಿ ಪುತ್ರ ಪುಟ್ಟಸ್ವಾಮಿ ಮೃತದುರ್ದೈವಿ. ಮಹಾರಾಷ್ಟ್ರ ಮೂಲದಿಂದ ಬಂದು ಕಗ್ಗಲೀಪುರ ಸಂಕ್ರಾಂತಿ ವೆಂಚರ್ಸ್‌ ಲೇಔಟ್‌ ಶೆಡ್‌ನ‌ಲ್ಲಿ ವಾಸಿಯಾಗಿದ್ದ ಕೂಲಿಕಾರ್ಮಿಕ ಬಾಪು ಡಾಂಗೆ ಕೊಲೆ ಆರೋಪಿ ಎಂದು ಗುರುತಿಸಲಾಗಿದೆ.

ಜಿಲ್ಲೆಯ ಹಾರೋಹಳ್ಳಿ ವೃತ್ತದ ಕಗ್ಗಲೀಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿಯ ಕಗಲೀಪುರ ಬಳಿಯ ಅಶ್ವತ್ಥಕಟ್ಟೆಯ ಮೇಲೆ ಮಲಗಿದ್ದ ಪುಟ್ಟ ಸ್ವಾಮಿ ಮೇಲೆ ಸಿಮೆಂಟ್‌ ಇಟ್ಟಿಗೆ ಎತ್ತಿ ಹಾಕಿ ಜ.
21ರಂದು ತಡರಾತ್ರಿ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ ಕಗಲೀಪುರ ಪೊಲೀಸರು, ಕೊಲೆಗಾರನ ಜಾಡು ಹಿಡಿದು ತನಿಖೆ ಕೈಗೊಂಡಿದ್ದರು. ಪ್ರಕರಣ ಭೇದಿಸಿ ಆರೋಪಿ ಬಾಪು
ಡಾಂಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, “ವೈಯಕ್ತಿಕ ದ್ವೇಷದಿಂದ ತಾನೇ ಕೊಲೆ ಮಾಡಿರುವುದಾಗಿ’ ತಪ್ಪೊಪ್ಪಿಕೊಂಡಿದ್ದಾನೆ. ದೋಷಾರೋಪ ಪಟ್ಟಿ ಯೊಂದಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ:ಬ್ರಾಹ್ಮಣರಿಗೆ ರಾಜಕೀಯ ಶಕ್ತಿ ತುಂಬಲು ಯತ್ನ; ಗೆಲುವಿಗೆ ವಿಪ್ರರ ಕೊಡುಗೆ ಅಪಾರ

24 ಗಂಟೆಗಳಲ್ಲಿ ಕೊಲೆ ಪ್ರಕರಣ ಭೇದಿಸಿರುವ ಹಾರೋಹಳ್ಳಿ ವೃತ್ತ ನಿರೀಕ್ಷಕ ಸತೀಶ್‌, ಕಗಲೀಪುರ ಆರಕ್ಷಕ ಉಪ ನಿರೀಕ್ಷಕ ವೆಂಕಟೇಶ್‌ ಮತ್ತು ಸಿಬ್ಬಂದಿ ಅನಂತ್‌ ಕುಮಾರ್‌, ಪ್ರಕಾಶ್‌, ನಾಗರಾಜು ಸೇರಿ ದಂತೆ ಸಿಬ್ಬಂದಿಗಳನ್ನು ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಿರೀಶ್‌ ಉಪವಿಭಾಗದ ಪೊಲೀಸ್‌ ಅಧೀಕ್ಷಕರಾದ ಪುರುಷೋತ್ತಮ್‌ ಅವರು ಅಭಿನಂದಿಸಿದ್ದಾರೆ.

Advertisement

ಲಗೇಜ್‌ ವಿಚಾರಕೆ ಕಂಡಕ್ಟರ್ ಮೇಲೆ ಹಲ್ಲೆ
ದೊಡ್ಡಬಳ್ಳಾಪುರ: ಲಗೇಜಿಗೆ ಟಿಕೆಟ್‌ ನೀಡುವ ವಿಚಾರವಾಗಿ ಸಾರಿಗೆ ಸಂಸ್ಥೆಯ ಬಸ್‌ ನಿರ್ವಾಹಕನ ಮೇಲೆ ಪ್ರಯಾಣಿಕರು ಹಲ್ಲೆ ನಡೆಸಿದ್ದು, ತೀವ್ರವಾಗಿ ಹಲ್ಲೆಗೊಳಗಾದ ನಿರ್ವಾಹಕ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶನಿವಾರ ಸಂಜೆ ನಡೆದಿದೆ. ನಗರದ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣದಿಂದ ಬೆಂಗಳೂರಿಗೆ ಹೊರಟಿದ್ದ ಬಸ್‌ನಲ್ಲಿ ಪ್ರಯಾಣಿಸಲು ಕುಟುಂಬವೊಂದು ಲಗೇಜಿಗೆ 30 ರೂ. ಬದಲು 20 ಪಡೆಯುವಂತೆ ನಿರ್ವಾಹಕನೊಂದಿಗೆ ಜಗಳವಾಡಿದ್ದಾರೆ. ಈ ವೇಳೆ ನಿರ್ವಾಹಕ ಮಾರುತಿ ಎಂಬುವವರ ಮೇಲೆ ಪ್ರಯಾಣಿಕ ಕುಟುಂಬದ ಸದಸ್ಯರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಸಂತ್ರಸ್ತನ ನೆರವಿಗೆ ಬಂದ ಚಾಲಕ ಶರಣಪ್ಪರ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಸ್ಥಳದಲ್ಲಿದ್ದ ಸಿಬ್ಬಂದಿ ದೂರಿದ್ದಾರೆ. ನಿರ್ವಾಹಕರೂ ನಮ್ಮ ಮೇಲೆ ಕೈಮಾಡಿದರು ಎಂದು ಪ್ರಯಾಣಿಕರು ದೂರಿದರು.ಹಲ್ಲೆಯಿಂದ ಗಾಯಗೊಂಡ ನಿರ್ವಾಹಕ ಮಾರುತಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ಮಾಡಿದ ಶಬೀರ್‌ ಮತ್ತಿತರರ ಮೇಲೆ ದೊಡ್ಡಬಳ್ಳಾಪುರ ನಗರ ಪೊಲೀಸ್‌ ಠಾಣೆಗೆ ದೂರನ್ನು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next