Advertisement
ಈ ಭಾಗದ ಜನತೆ ನಿರಂತರವಾಗಿ ಕಳೆದ 28 ವರ್ಷದಿಂದ ಮನವಿ ಸಲ್ಲಿಸುತ್ತಲೇ ಬರುತ್ತಿದ್ದಾರೆ. ಆದರೆ ಫಲಿತಾಂಶ ಶೂನ್ಯ. ಈ ಭಾಗದಲ್ಲಿ ಅಣೆಕಟ್ಟು ನಿರ್ಮಾಣವಾದರೆ ಇಲ್ಲಿನ ಕೃಷಿಕರಿಗೆ ತುಂಬಾ ಅನುಕೂಲವಾಗಲಿದೆ. ನೂರಾರು ಎಕ್ರೆ ಕೃಷಿ ಭೂಮಿ ಹಚ್ಚ ಹಸುರಾಗಿ ಕಂಗೊಳಿಸಲಿದೆ.
1991 ಡಿ. 15ರಂದು ಊರಿನವರೇ ಸೇರಿ ಬೆಳಂದೂರು ಮಂಡಲ ಪಂಚಾಯತ್‌ನ ಅಧ್ಯಕ್ಷರ ಮೂಲಕ ಸಂಬಂಧಪಟ್ಟವರಿಗೆ ಮೊದಲ ಮನವಿ ಸಲ್ಲಿಸಿದ್ದರು. ಆ ಬಳಿಕ ಪ್ರತೀ ಬಾರಿಯೂ ಶಾಸಕರಿಗೆ, ಸಂಸದರಿಗೆ ನಿರಂತರ ಮನವಿ ನೀಡಲಾಗುತ್ತಿದ್ದರೂ, ಪ್ರಯೋಜನವಾಗಿಲ್ಲ ಎನ್ನುತ್ತಾರೆ ಈ ಭಾಗದ ಜನತೆ.
Related Articles
ಮನವಿ ನೀಡಿ ಯಾವುದೇ ಬೆಳವಣಿಗೆಯಾಗದ್ದನ್ನು ಮನಗಂಡು 2017 ಫೆ. 26ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿದ್ದರು. ಈ ಪರಿಣಾಮ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಯವರು ದ.ಕ.ಜಿ.ಪಂ.ಗೆ ಅನುದಾನ ಬಿಡುಗಡೆ ಮಾಡುವಂತೆ ನಿರ್ದೇಶನವನ್ನು ನೀಡಿದ್ದರು.
Advertisement
ಶಾಸಕರಿಗೆ ವಿವರ ಸಲ್ಲಿಕೆಈ ಎಲ್ಲ ಬೆಳವಣಿಗೆಗಳ ಸವಿವರಗಳನ್ನು ಸುಳ್ಯ ಶಾಸಕರಿಗೆ 2017ರಂದೇ ಸಲ್ಲಿಸಿದ್ದು, ಈವರೆಗೂ ಯಾವುದೇ ಸ್ಪಂದನೆ ಇಲ್ಲ ಎನ್ನುತ್ತಾರೆ ಈ ಭಾಗದವರು. ಶಾಸಕರು ಪ್ರಯತ್ನ ಮಾಡಿದರೆ ಇಲ್ಲಿನ ಜನತೆಯ ಬಹುದಿನಗಳ ಬೇಡಿಕೆ ಈಡೇರುವಂತಾಗುತ್ತದೆ ಎನ್ನುತ್ತಾರೆ ಇಲ್ಲಿನ ಕೃಷಿಕರು. ಪ್ರಸ್ತಾವನೆ ಸಲ್ಲಿಕೆ
ಮರಕ್ಕಡ-ಕಟ್ಟತ್ತಾರು ಕಿಂಡಿ ಅಣೆಕಟ್ಟು ನಿರ್ಮಾಣ ಕುರಿತ ಕಡತಗಳೊಂದಿಗೆ ನೀರಾವರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಅನುಮೋದನೆಗೊಂಡು ಅನುದಾನ ಬಿಡುಗಡೆಯಾಗಬೇಕಿದೆ. ಈ ಕುರಿತು ಪ್ರಯತ್ನ ಮಾಡಲಾಗುತ್ತಿದೆ.
-ಎಸ್. ಅಂಗಾರ, ಶಾಸಕರು, ಸುಳ್ಯ ಆಶಾಭಾವನೆ ನಮ್ಮದು
ಕಳೆದ 28 ವರ್ಷಗಳಿಂದ ನಿರಂತರವಾಗಿ ವಿವಿಧ ಸ್ತರಗಳ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಬೇಡಿಕೆ ಈಡೇರಬಹುದು ಎನ್ನುವ ಆಶಾಭಾವನೆ ನಮ್ಮದು.
-ಸೀತಾರಾಮ ಗೌಡ ಮುಂಡಾಳ, ಪ್ರವೀಣ್ ಚೆನ್ನಾವರ