Advertisement

ಕನಿಲ ಶ್ರೀ ಭಗವತಿ ಕ್ಷೇತ್ರ: ಭರಣಿ ಮಹೋತ್ಸವ ಸಂಪನ್ನ

10:05 AM Mar 22, 2018 | Karthik A |

ಹೊಸಂಗಡಿ: ಕನಿಲ ಶ್ರೀ ಭಗವತೀ ಕ್ಷೇತ್ರದ ಭರಣಿ ಮಹೋತ್ಸವದ ಅಂಗವಾಗಿ ಚಕ್ರವರ್ತಿ ಹೊಸಂಗಡಿ ಇವರಿಂದ ಸಾಂಸ್ಕೃತಿಕ ಸಂಭ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವರ್ಷಿತಾ ಶೆಟ್ಟಿ ಬೆಜ್ಜಂಗಳ ಅವರ ನಿರ್ದೇಶನದಲ್ಲಿ ಶ್ರೀ ಭ್ರಾಮರಿ ನೃತ್ಯ ತಂಡ ಮೀಯಪದವು ಅವರಿಂದ ‘ಶ್ರೀ ನವ ದುರ್ಗಾ ಮಹಿಮೆ’ ಎಂಬ ನೃತ್ಯ ರೂಪಕ ಮತ್ತು ದೀಕ್ಷಾ ಹೊಂಸಗಡಿ, ನಂದಿತಾ ಹೊಸಂಗಡಿ ಅವರಿಂದ ನೃತ್ಯ ಪ್ರದರ್ಶನ ನಡೆಯಿತು.

Advertisement

ಈ ವೇಳೆ ಕನಿಲ ಶ್ರೀ ಭಗವತಿ ಕ್ಷೇತ್ರದ ಕೊಂಬು ವಾದಕರಾಗಿರುವ ದಿವಾಕರ ಪೊಯ್ಯಕಂಡ ಅವರನ್ನು ಕ್ಷೇತ್ರದ ಆಡಳಿತ ಸಮಿತಿ ಪಧಾಧಿಕಾರಿಗಳಾದ ರೋಹಿದಾಸ್‌ ಎಸ್‌. ಬಂಗೇರ, ಟಿ. ಲಕ್ಷ್ಮಣ ಸಾಲಿಯಾನ್‌, ಪದ್ಮನಾಭ ಕಡಪ್ಪರ, ಕೆ.ಪಿ. ಅರವಿಂದ, ಚಂದ್ರಶೇಖರ ಬೆಳ್ಚಾಡ, ಚಕ್ರವರ್ತಿ ಸಂಸ್ಥೆಯ ಪದಾಧಿಕಾರಿಗಳಾದ ಅನಿಲ್‌ರಾಜ್‌ ಅಂಗಡಿಪದವು, ಹರೀಶ್‌ ಮಜಾಲ್‌, ಸುರೇಶ್‌ ಗಾಣಿಂಜಾಲ್‌ ಮೊದಲಾದವರು ಕ್ಷೇತ್ರದ ವತಿಯಿಂದ ಹಾಗೂ ಸಂಸ್ಥೆಯ ವತಿಯಿಂದ ಶಾಲು ಹೊದೆಸಿ ಸ್ಮರಣಿಕೆ, ಫಲಪುಷ್ಪವನ್ನಿತ್ತು ಸಮ್ಮಾನಿಸಿದರು. ದಿನಕರ್‌ ಬಿ.ಎಂ. ಹಾಗೂ ರತನ್‌ ಕುಮಾರ್‌ ಹೊಸಂಗಡಿ ಕಾರ್ಯಕ್ರಮ ನಿರೂಪಿಸಿದರು. 

ಬಳಿಕ ಮಂಗಳೂರಿನ ಶ್ರೀ ಲಲಿತೆ ತಂಡದವರಿಂದ ‘ಕಟೀಲ್ದಪ್ಪೆ ಉಳ್ಳಾಲ್ದಿ’ ಎಂಬ ಅದ್ದೂರಿ ಭಕ್ತಿ ಪ್ರಧಾನ ನಾಟಕ ನಡೆಯಿತು. ಬಳಿಕ ಕ್ಷೇತ್ರದಲ್ಲಿ ಬಲಿ ಉತ್ಸವ, ಬಿಂಬ ದರ್ಶನ, ಮಡಸ್ತಾನ, ಸರ್ಪಕಳ, ಮೂಡುನಡೆ, ಅಮೃತ ಕಲಶ, ತಾಲಪ್ಪೊಲಿ, ಬೆಳಗ್ಗೆ ಧ್ವಜ ಅವರೋಹಣ, ಶ್ರೀ ಧೂಮಾವತಿ ದೈವದ ನೇಮೋತ್ಸವ, ಗಂಧ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಬಳಿಕ ಭಂಡಾರ ಇಳಿಯುವುದರೊಂದಿಗೆ ಕಳೆದ 7 ದಿನಗಳಿಂದ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿದ ಭರಣಿ ಮಹೋತ್ಸವವು ಸಂಪನ್ನಗೊಂಡಿತು.

ಚಿತ್ರ : ಪ್ರಭಾ ಮಂಜೇಶ್ವರ

Advertisement

Udayavani is now on Telegram. Click here to join our channel and stay updated with the latest news.

Next