Advertisement

Kanguva: ದೀಪಾವಳಿ ಹಬ್ಬಕ್ಕೆ ʼಕಂಗುವʼ ಸ್ಪೆಷೆಲ್‌ ಪೋಸ್ಟರ್; ಮಿಂಚಿದ ಸೂರ್ಯ

10:25 AM Nov 13, 2023 | Team Udayavani |

ಚೆನ್ನೈ: ನಟ ಸೂರ್ಯ ವೃತ್ತಿ ಬದುಕಿನ ದೊಡ್ಡ ಸಿನಿಮಾವೆಂದೇ ಹೇಳಲಾಗುತ್ತಿರುವ ಪ್ಯಾನ್‌ ಇಂಡಿಯಾ ʼಕಂಗುವʼ  ದೀಪಾವಳಿ ಹಬ್ಬಕ್ಕೆ ಹೊಸ ಪೋಸ್ಟರ್‌ ರಿಲೀಸ್‌ ಮಾಡಿ ನಿರೀಕ್ಷೆಯಿಂದ ಕಾಯುತ್ತಿರುವ ಫ್ಯಾನ್ಸ್‌ ಗಳಿಗೆ ಹಬ್ಬದ ಶುಭಾಶಯವನ್ನು ಕೋರಿದೆ.

Advertisement

ʼಅನ್ನಾಥೆʼ, ʼವಿಶ್ವಾಸಂʼ, ವೇದಾಲಂʼ.. ಹೀಗೆ ಕಾಲಿವುಡ್ ನಲ್ಲಿ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿರುವ ಶಿವ ʼಕಂಗುವʼ ಸಿನಿಮಾಕ್ಕೆ ಆ್ಯಕ್ಷನ್ ಕಟ್‌ ಹೇಳುತ್ತಿದ್ದಾರೆ. ಈಗಾಗಲೇ ರಿಲೀಸ್‌ ಆಗಿರುವ  ʼಕಂಗುವʼ ಗ್ಲಿಂಪ್ಸ್‌ ಗಮನ ಸೆಳೆದಿದೆ. ವಾರಿಯರ್‌ ಲುಕ್‌ ನಲ್ಲಿ ಸೂರ್ಯ ಮಿಂಚಿದ್ದಾರೆ. ವಿಭಿನ್ನ ಅವತಾರದಲ್ಲಿ ಸೂರ್ಯ ಕಾಣಿಸಿಕೊಂಡಿದ್ದಾರೆ.

ಇದೀಗ ದೀಪಾವಳಿ ಹಬ್ಬಕ್ಕೆ ʼಕಂಗುವʼ ಪೋಸ್ಟರ್‌ ರಿಲೀಸ್‌ ಮಾಡಿದೆ. ಬೇಟೆಗೆ ಹೊರಟವರಂತೆ ಬೆಂಕಿಯ ಕೋಲನ್ನಿಡಿದುಕೊಂಡು ಸೂರ್ಯ ಮಾಸ್‌ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ ಹಂಚಿಕೊಂಡು ಸೂರ್ಯ ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯವನ್ನು ಕೋರಿದ್ದಾರೆ.

ಇದನ್ನೂ ಓದಿ: Tiger 3: ಮೊದಲ ದಿನವೇ ದೊಡ್ಡ ಓಪನಿಂಗ್‌ ಪಡೆದುಕೊಂಡ ʼಟೈಗರ್ -3ʼ; ಗಳಿಸಿದ್ದೆಷ್ಟು?

ದಿಶಾ ಪಟಾನಿ , ಬಾಬಿ ಡಿಯೋಲ್, ನಟರಾಜನ್ ಸುಬ್ರಮಣ್ಯಂ, ಜಗಪತಿ ಬಾಬು, ಯೋಗಿ ಬಾಬು, ರೆಡಿನ್ ಕಿಂಗ್ಸ್ಲಿ, ಕೋವೈ ಸರಳಾ, ಆನಂದರಾಜ್, ರವಿ ರಾಘವೇಂದ್ರ, ಕೆ.ಎಸ್.ರವಿಕುಮಾರ್ ಮುಂತಾದ‌ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

Advertisement

ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದು, ಖ್ಯಾತ ಸಿನಿಮಾಟೋಗ್ರಾಫರ್ ವೆಟ್ರಿ ಪಳನಿಸಾಮಿ ಕ್ಯಾಮೆರಾ ವರ್ಕ್‌ ಮಾಡಿದ್ದಾರೆ.

ದುಬಾರಿ ಬಜೆಟ್‌ ನಲ್ಲಿ ಸಿನಿಮಾ ತಯಾರಾಗುತ್ತಿರುವ ʼಕಂಗುವʼ 2024 ರ ಬೇಸಿಗೆಯಲ್ಲಿ ಸಿನಿಮಾ ರಿಲೀಸ್‌ ಆಗುವ ಸಾಧ್ಯತೆಯಿದೆ.

ಇದಾದ ಬಳಿಕ ಸೂರ್ಯ ಲೋಕೇಶ್‌ ಕನಕರಾಜ್‌ ಹಾಗೂ ಸುಧಾ ಕೊಂಗರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next