Advertisement
ಏತನ್ಮಧ್ಯೆ ತನ್ನ ಮಗಳಿಗೆ ಸೂಕ್ತ ಭದ್ರತೆ ನೀಡಬೇಕೆಂದು ಕಂಗನಾ ತಂದೆ ಹಿಮಾಚಲ್ ಪ್ರದೇಶ ಸರ್ಕಾರಕ್ಕೆ ಮನವಿ ಮಾಡಿಕೊಂಡ ನಂತರ ವೈ ಪ್ಲಸ್ ಭದ್ರತೆ ನೀಡಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕೃಷ್ಣ ರೆಡ್ಡಿ ತಿಳಿಸಿದ್ದಾರೆ.
Related Articles
Advertisement
ಮುಂಬೈ ನಗರಿಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಕಂಗನಾ ಹೇಳಿಕೆ ನೀಡಿದ ನಂತರ ಶಿವಸೇನಾದ ಹಲವು ಮುಖಂಡರು ಕಂಗನಾಗೆ ಬೆದರಿಕೆಯೊಡ್ಡಿದ ನಂತರ ಭದ್ರತೆ ನೀಡುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಹೇಳಿದರು.
ಇದನ್ನೂ ಓದಿ: ಕಳ್ಳರನ್ನು ಹಿಡಿದು ಪೊಲೀಸ್ ಠಾಣೆಗೆ ತಂದರೂ ಬಂಧಿಸದ ಪೊಲೀಸರು!
ಬೆದರಿಕೆ ಹಿನ್ನೆಲೆಯಲ್ಲಿ ಕಂಗನಾಗೆ ವೈ ಪ್ಲಸ್ ಭದ್ರತೆ ನೀಡಲಾಗಿದ್ದು, ಶಸ್ತ್ರ ಸಜ್ಜಿತ ಹತ್ತು ಮಂದಿ ಕಮಾಂಡೋಗಳು ನಿರಂತರವಾಗಿ ಭದ್ರತೆ ನೀಡಲಿದ್ದಾರೆ. ನಟಿ ಕಂಗನಾ ನೀಡಿದ್ದ ಕೆಲವು ಪ್ರಚೋದನಕಾರಿ ಹೇಳಿಕೆಗಳು ಶಿವಸೇನಾ ಮತ್ತು ಕಂಗನಾ ನಡುವೆ ವಾಕ್ಸಮರಕ್ಕೆ ಎಡೆ ಮಾಡಿಕೊಟ್ಟಿತ್ತು.
ಸೆಪ್ಟೆಂಬರ್ 9ರಂದು ಬಾಂದ್ರಾದ ಪಾಲಿ ಹಿಲ್ ನಲ್ಲಿರುವ ಕಚೇರಿಯನ್ನು ಬಿಎಂಸಿ ಭಾಗಶಃ ಧ್ವಂಸ ಮಾಡಿದ್ದು, ಈ ಕಾರ್ಯಾಚರಣೆ ವಿರುದ್ಧ ಕಂಗಾನಾ ಕೋರ್ಟ್ ಮೆಟ್ಟಿಲೇರಿದ್ದು, ತಾತ್ಕಾಲಿಕ ತಡೆ ನೀಡಿತ್ತು.