Advertisement

ಕರೀನಾ ಬದಲಿಗೆ ಕಂಗನಾ : ಸೀತೆ ಪಾತ್ರಕ್ಕೆ ರಣಾವತ್ ಆಯ್ಕೆ  

05:53 PM Sep 14, 2021 | Team Udayavani |

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರು “The Incarnation – Sita” ಚಿತ್ರದಲ್ಲಿ ಸೀತೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಮಂಗಳವಾರ ಅಧಿಕೃತವಾಗಿ ಘೋಷಣೆಯಾಗಿದೆ.

Advertisement

ಅಲೌಖಿಕ್ ದೇಸಾಯಿ ನಿರ್ದೇಶನದ ಪೌರಾಣಿಕ ಸಿನಿಮಾದಲ್ಲಿ ಕಂಗನಾ ಸೀತೆ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಕೆ.ವಿ ವಿಜಯೇಂದ್ರ ಪ್ರಸಾದ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ.

ಕಳೆದ ಕೆಲ ದಿನಗಳಿಂದ ಈ ಸಿನಿಮಾ ಬಿಟೌನ್‍ನಲ್ಲಿ ಸಖತ್ ಸುದ್ದಿಯಲ್ಲಿತ್ತು. ಈ ಮೊದಲು ಸೀತೆ ಪಾತ್ರಕ್ಕೆ ಕರೀನಾ ಕಫೂರ್ ಅವರಿಗೆ ಆಫರ್ ಮಾಡಲಾಗಿತ್ತು. ಆದರೆ, ಅವರು ಸಂಭಾವನೆ ಹೆಚ್ಚು ಕೇಳಿದ್ದರಿಂದ ಅವರನ್ನು ಕೈ ಬಿಡಲಾಯಿತು ಎನ್ನುವ ಸುದ್ದಿ ಕೇಳಿ ಬಂದಿತ್ತು. ಅದರ ಸೀತೆ ಪಾತ್ರಕ್ಕೆ ಕರೀನಾ ಅವರನ್ನು ಆಯ್ಕೆ ಮಾಡಿದ್ದಕ್ಕೆ ವ್ಯಾಪಕ ವಿರೋಧ ಕೂಡ ವ್ಯಕ್ತವಾಗಿತ್ತು. ಸೈಫ್ ಅಲಿಖಾನ್ ಜೊತೆ ಮದುವೆಯಾದ ಈ ನಟಿ ಸೀತೆ ಪಾತ್ರದಲ್ಲಿ ನಟಿಸುವುದು ಬೇಡ ಎನ್ನುವ ಕೂಗು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬಂದಿತ್ತು. ಈ ಕಾರಣ ಹಾಗೂ ಸಂಭಾವನೆ ವಿಚಾರವಾಗಿ ಬೇಬೋ ಅವರನ್ನು ಚಿತ್ರತಂಡ ಕೈ ಬಿಟ್ಟು ಕಂಗನಾ ಅವರಿಗೆ ಮಣೆ ಹಾಕಿದೆ.

ಕಂಗನಾ ಅವರು ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಇದೇ ಮೊದಲಲ್ಲ. ‘ಮಣಿಕರ್ಣಿಕಾ’ ಚಿತ್ರದಲ್ಲಿ ಅವರು ನಟಿಸಿದ್ದಾರೆ. ಇದೀಗ ಸೀತಾ ಪಾತ್ರಕ್ಕೆ ರೆಡಿಯಾಗುತ್ತಿದ್ದಾರೆ.

ಇನ್ನು ಕಂಗನಾ ರಣಾವತ್ ಅವರ ನಟಿಸಿದ್ದ ತಲೈವಾ ಸಿನಿಮಾ ಇತ್ತೀಚಿಗಷ್ಟೆ ಬಿಡುಗಡೆಯಾಗಿತ್ತು. ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಜೀವನಾಧಾರಿತ ಈ ಚಿತ್ರಕ್ಕೆ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next