Advertisement

ನಾಚಿಕೆಗೇಡು!; ಕೃಷಿ ಕಾಯ್ದೆ ಹಿಂಪಡೆದುದಕ್ಕೆ ನಟಿ ಕಂಗನಾ ಆಕ್ರೋಶ

06:01 PM Nov 19, 2021 | Team Udayavani |

ಮುಂಬಯಿ : ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆದ ಕುರಿತಾಜಿ ನಟಿ ಕಂಗನಾ ರಣಾವತ್ ಅವರು ಸಾಮಾಜಿಕ ತಾಣಗಳಲ್ಲಿ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಕಂಗನಾ, “ಬೇಸರ, ನಾಚಿಕೆಗೇಡು, ಸಂಪೂರ್ಣವಾದ ಅನ್ಯಾಯ. ಬೀದಿಗಿಳಿದ ಜನರು ಕಾನೂನುಗಳನ್ನು ಮಾಡಲು ಪ್ರಾರಂಭಿಸಿದ್ದಾರೆಯೇ ಹೊರತು ಸಂಸತ್ತಿನಲ್ಲಿ ಆಯ್ಕೆ ಮಾಡಿದ ಸರ್ಕಾರವಲ್ಲ, ಹೀಗಾದರೆ ನಮ್ಮದೂ ಕೂಡ ಜಿಹಾದಿ ರಾಷ್ಟ್ರವಾಗಲಿದೆ. ಈ ರೀತಿ ಆಗಬೇಕೆಂದು ಬಯಸಿದ ಎಲ್ಲರಿಗೂ ಅಭಿನಂದನೆಗಳು,” ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇನ್ನೊಂದು ಪೋಸ್ಟ್ ನಲ್ಲಿ , ಅವರು ಪ್ರಧಾನಿ ಮೋದಿಯನ್ನು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯೊಂದಿಗೆ ಪರೋಕ್ಷವಾಗಿ ಹೋಲಿಸಿ “ರಾಷ್ಟ್ರದ ಆತ್ಮಸಾಕ್ಷಿಯು ಗಾಢವಾದ ನಿದ್ರೆಯಲ್ಲಿರುವಾಗ, ಲಾಠಿ ಒಂದೇ ಪರಿಹಾರ ಮತ್ತು ಸರ್ವಾಧಿಕಾರವು ಏಕೈಕ ನಿರ್ಣಯವಾಗಿದೆ.. ಜನ್ಮದಿನದ ಶುಭಾಶಯಗಳು ಮೇಡಂ ಪ್ರಧಾನಿ” ಎಂದು ಇಂದಿರಾ ಗಾಂಧಿ ಅವರ ಫೋಟೋದೊಂದಿಗೆ ಬರೆದಿದ್ದಾರೆ.

ಆನಂದ್ ರಂಗನಾಥನ್ ಅವರು ಮಾಡಿರುವ ಟ್ವೀಟ್ ನ ಸ್ಕ್ರೀನ್ ಶಾಟ್ ಅನ್ನು ಕಂಗನಾ ಹಂಚಿಕೊಂಡಿದ್ದು,ಅದರಲ್ಲಿ ‘ಆಘಾತಗೊಂಡಿದ್ದೇನೆ . ಇದು ಹೇಡಿತನದ ಕೃತ್ಯ. ಅಭಿವೃದ್ಧಿಗೆ, ವಿವೇಕಕ್ಕೆ, ಪ್ರಗತಿಗೆ, ಭಾರತಕ್ಕೆ ಅವಮಾನಕರ ಸೋಲು. ನಮ್ಮನ್ನು ದಶಕಗಳ ಹಿಂದೆ ಕರೆದುಕೊಂಡು ಹೋಗುವಲ್ಲಿ ನರೇಂದ್ರ ಮೋದಿ ವಿರೋಧ ಪಕ್ಷಕ್ಕೆ ಸೇರಿದ್ದಾರೆ. ಭಾರತ ಸೋತಿದೆ!, ಅರಾಜಕತೆಗೆ ಜಯವಾಗಿದೆ, ಕೆಟ್ಟ ದಿನಗಳು ಬಂದಿವೆ’ ಎಂದು ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next