ಮುಂಬೈ : ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಕಿರಣ್ ರಾವ್ ದಂಪತಿಯ ವಿಚ್ಛೇದನ ಕುರಿತು ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅಮೀರ್ ಹಾಗೂ ಕಿರಣ್ ಡಿವೋರ್ಸ್ ವಿಷಯವನ್ನು ಕೇಂದ್ರವಾಗಿಸಿಕೊಂಡು ಸುದೀರ್ಘ ಪೋಸ್ಟ್ ವೊಂದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕಂಗನಾ, ಅಂತರ್ಜಾತಿ ವಿವಾಹದ ಕುರಿತು ತಮಗಿರುವ ಕೆಲವೊಂದು ಅಭಿಪ್ರಾಯಗಳನ್ನು ಹೊರ ಹಾಕಿದ್ದಾರೆ.
‘ಅಂತರಜಾತಿ (ಅಮೀರ್ ಖಾನ್-ಕಿರಣ್ ರಾವ್ ) ವಿವಾಹವಾದ ದಂಪತಿಗಳ ಮಕ್ಕಳು ಮುಸ್ಲಿಂ ಆಗಿಯೇ ಬೆಳೆಯುತ್ತಾರೆ. ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದ ಮಹಿಳೆ ಹಿಂದೂ ಆಗಿ ಯಾಕೆ ಮುಂದುವರೆಯುವುದಿಲ್ಲ ? ಎಂದು ಪ್ರಶ್ನಿಸಿರುವ ಕಂಗನಾ, ಬದಲಾಗುತ್ತಿರುವ ಇಂದಿನ ಕಾಲ ಮಾನದಲ್ಲಿ ಇದನ್ನೂ ಬದಲಾಯಿಸಬೇಕಿದೆ. ಒಬ್ಬರು ಮುಸ್ಲಿಂರನ್ನು ಮದುವೆಯಾಗಬೇಕೆಂದರೆ ತಮ್ಮ ಧರ್ಮವನ್ನೇಕೆ ಬದಲಾಯಿಸಿಕೊಳ್ಳಬೇಕು ? ಹಿಂದೂ, ಸಿಖ್ ಬೌದ್ಧ, ಜೈನರಿಂದ ಒಂದೇ ಕುಟುಂಬದಲ್ಲಿ ಸಹಬಾಳ್ವೆ ಸಾಧ್ಯವಾಗುವುದಾದರೆ ಅದು ಮುಸ್ಲಿಂರಿಂದ ಯಾಕಿಲ್ಲ ? ಎಂದಿದ್ದಾರೆ ಕಂಗನಾ.
ಒಂದು ಮಗುವನ್ನು ಹಿಂದೂ ಹಾಗೂ ಮತ್ತೊಂದು ಮಗುವನ್ನು ಸಿಖ್ ರನ್ನಾಗಿ ಬೆಳೆಸುವ ಪರಂಪರೆ ಪಂಜಾಬ್ ನ ಬಹುತೇಕ ಕುಟುಂಬಗಳಲ್ಲಿ ಈಗಲೂ ಇದೆ. ಆದರೆ, ಇದು ಹಿಂದೂವಾಗಲಿ, ಮುಸ್ಲಿಂರಲ್ಲಾಗಲಿ ಏಕೆ ಇಲ್ಲ ? ಎಂದು ಪ್ರಶ್ನಿಸಿದ್ದಾರೆ ಲೇಡಿ ಸೂಪರ್ ಸ್ಟಾರ್ ಕಂಗನಾ.
ಇನ್ನು ಶನಿವಾರ ಅಮಿರ್ ಖಾನ್ ಅವರು ತಮ್ಮ ಎರಡನೇ ಪತ್ನಿ ಕಿರಣ್ ರಾವ್ ಅವರಿಗೆ ಡಿವೋರ್ಸ್ ನೀಡಿದರು. 15 ವರ್ಷಗಳ ವರೆಗೆ ಸತಿಪತಿಗಳಾಗಿ ಜೀವನ ನಡೆಸಿದ ಈ ಜೋಡಿ ಇನ್ಮುಂದೆ ಸ್ನೇಹಿತರಾಗಿ ಮುಂದುವರೆಯುವುದಾಗಿ ಘೋಷಿಸಿದರು.