Advertisement
ಪ್ರಧಾನಿ ಮೋದಿ ಅವರ ಬಾಲ್ಯದ ಜೀವನವನ್ನು ಆಧರಿಸಿ ನಿರ್ಮಿಸಲಾಗಿರುವ ಚಲೋ ಜೀತೆ ಹೇಂ ಎಂಬ ಸಾಕ್ಷ್ಯಚಿತ್ರದ ಸ್ಕ್ರೀನಿಂಗ್‌ನಲ್ಲಿ ಭಾಗವಹಿಸಿ ಅವರು ಈ ಮಾತುಗಳನ್ನಾಡಿದ್ದಾರೆ. ಇದೇ ವೇಳೆ, ಮೋದಿ ಸರಕಾರದ 4 ವರ್ಷಗಳ ಸಾಧನೆ ಯನ್ನು ಪ್ರಶ್ನಿಸಿದಾಗ, ‘ಅವರು ಅತ್ಯಂತ ಪರಿಶ್ರಮದಿಂದ ಪ್ರಧಾನಿ ಹುದ್ದೆಗೇರಿದ್ದಾರೆ. ಅದಕ್ಕೆ ಅವರು ಅರ್ಹರೂ ಹೌದು. ಹೀಗಾಗಿ, ಪ್ರಧಾನ ಮಂತ್ರಿಯಾಗಿ ಅವರ ಸಾಮರ್ಥ್ಯದ ಕುರಿತು ಯಾವುದೇ ಅನು ಮಾನವಿಲ್ಲ’ ಎಂದಿದ್ದಾರೆ. ನೀವೂ ರಾಜಕೀಯ ಸೇರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕಂಗನಾ, ‘ದೇಶವು ಅಪಾಯದಲ್ಲಿದ್ದಾಗ ಯೋಧರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ಧರಾಗುತ್ತಾರೆ. ಹೀಗಾಗಿ, ರಾಜಕೀಯ ಮಾತ್ರವಲ್ಲ, ನಮ್ಮ ದೇಶ ಯಾವಾಗ ನನ್ನನ್ನು ಬಯಸುತ್ತದೋ, ಅಂಥ ಸಮಯದಲ್ಲಿ ನಾನು ನನ್ನ ಪ್ರಾಣ ಕೊಡಲೂ ಸಿದ್ಧ’ ಎಂದಿದ್ದಾರೆ.
ಪ್ರಧಾನಿ ಮೋದಿ ಅವರ ಬಾಲ್ಯದ ಘಟನೆಗಳನ್ನು ಆಧರಿಸಿ ಮಂಗೇಶ್ ಹಡವಾಲೆ ಅವರು ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿದ್ದಾರೆ. ಅದರ ಹೆಸರು ‘ಚಲೋ ಜೀತೆ ಹೇಂ’. ಮುಂಬೈನಲ್ಲಿ ಅದರ ವಿಶೇಷ ಪ್ರದರ್ಶನ ನಡೆದಿದ್ದು, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಸಿಎಂ ಫಡ್ನವೀಸ್, ತಾರೆಯರಾದ ಕಂಗನಾ, ಅಕ್ಷಯ್ ಕುಮಾರ್, ಅಮಿಶಾ ಪಟೇಲ್, ಕ್ರಿಕೆಟ್ ದೇವರು ತೆಂಡೂಲ್ಕರ್ ಮತ್ತಿತರರು ಭಾಗವಹಿಸಿದ್ದರು.