ಬಾಲಿವುಡ್ ನ ಪ್ರತಿಭಾನ್ವಿತ, ನೇರ ನುಡಿಯ ನಟಿ ಕಂಗನಾ ರಣಾವುತ್ ತನ್ನ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ ಎರಡು ರಾಷ್ಟ್ರೀಯ ಪಕ್ಷಗಳು ನನಗೆ ಚುನಾವಣಾ ಟಿಕೆಟ್ ನೀಡಲು ಮುಂದಾಗಿದ್ದವು. ಆದರೆ ನಾನು ತಿರಸ್ಕರಿಸಿದ್ದೆ ಎಂದು ಕ್ವೀನ್ ಕಂಗನಾ ಹೇಳಿದ್ದಾರೆ
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ಹಿಂದೆ ಕಾಂಗ್ರೆಸ್ ಮತ್ತು ಮಣಿಕರ್ಣಿಕಾ ಚಿತ್ರದ ನಂತರ ಬಿಜೆಪಿ ಪಕ್ಷವೂ ನನಗೆ ಚುನಾವಣಾ ಟಿಕೆಟ್ ನೀಡಲು ಮುಂದಾಗಿದ್ದವು. ಆದರೆ ನನಗೆ ರಾಜಕೀಯಕ್ಕೆ ಸೇರುವ ಬಗ್ಗೆ ಯಾವುದೇ ಆಲೋಚನೆಗಳಿಲ್ಲ ಎಂದು ಕಂಗನಾ ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರೋತ್ಸವ ಭಾಷಣ ಮೆಚ್ಚಿ ಮಾಡಿದ್ದ ಟ್ವೀಟ್ ಕಂಡು ಕಂಗನಾ ಬಿಜೆಪಿ ಸೇರುತ್ತಾರೆ ಎಂಬ ನೆಟ್ಟಿಗರ ಊಹಾಪೋಹಗಳಿಗೆ ತೆರೆ ಎಳೆದ ನಟಿ ರಾಜಕೀಯ ಸೇರ್ಪಡೆ ಸಾಧ್ಯತೆಯನ್ನು ತಳ್ಳಿ ಹಾಕಿದರು.
ನನ್ನ ತಾತ ಕಾಂಗ್ರೆಸ್ ಪಕ್ಷದಿಂದ ಸತತ 15 ವರ್ಷಗಳ ಕಾಲ ಶಾಸಕರಾಗಿದ್ದರು. ಆದರೆ ನನಗೆ ರಾಜಕೀಯ ಸೇರ್ಪಡೆಯಾಗುವ ಉದ್ದೇಶವಿಲ್ಲ. ಚಿತ್ರರಂಗದಲ್ಲೇ ಬ್ಯುಸಿ ಇದ್ದೇನೆ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.