Advertisement
ಅಧಿಕಾರಿಗಳ ಭೇಟಿಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ನಾಶ ಪಡಿಸಿದ ಕಾಂಡ್ಲಾ ವೃಕ್ಷಗಳ ಬಾಬ್ತು ದಂಡ ಶುಲ್ಕ ವಿಧಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ ತಿಳಿಸಿದ್ದಾರೆ.
ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖಾಧಿಕಾರಿಗಳ ತಾತ್ಕಾಲಿಕ ಕ್ರಮಕ್ಕೆ ಕ್ಯಾರೇ ಎನ್ನದೇ ಮಾ. 17ರಂದು ಬೆಳಗ್ಗೆ ಇಲ್ಲಿನ ನದಿತೀರದಲ್ಲಿ ರಸ್ತೆ ನಿರ್ಮಾಣ ಕಾರ್ಯ ಮತ್ತೆ ಮುಂದುವರಿದಿದೆ. ಜೆಸಿಬಿ ಮೂಲಕ ಕಾಂಡ್ಲಾ ಗಿಡಗಳನ್ನು ಮಣ್ಣಿನಡಿ ಹೂತು ರಸ್ತೆ ನಿರ್ಮಿಸುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಸ್ಥಳೀಯರು ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಸಂಪೂರ್ಣ ಅಸಮಾ ಧಾನಗೊಂಡಿದ್ದು, ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗೆ ದೂರು
ಸ್ಥಳೀಯಾಧಿಕಾರಿಗಳು ಕಾಂಡ್ಲಾ ರಕ್ಷಣೆಗೆ ಸಂಪೂರ್ಣ ವಿಫಲರಾಗಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಆಗ್ರಹಿಸಿ ಸ್ಥಳೀಯ ನಿವಾಸಿ ಸುರೇಂದ್ರ ಅವರು ಉಡುಪಿ ಡಿಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.