Advertisement

ಕಾಂದಿವಲಿ ಕನ್ನಡ ಸಂಘದ 24ನೇ ವಾರ್ಷಿಕ ಮಹಾಸಭೆ

04:53 PM Oct 03, 2018 | |

ಮುಂಬಯಿ: ಕನ್ನಡ ಭಾಷಾ ಭಿಮಾನ, ಸಂಸ್ಕೃತಿ ಬೆಳೆಯ ಬೇಕಾದಲ್ಲಿ ಸಂಘ- ಸಂಸ್ಥೆಗಳಲ್ಲಿ ಯುವ ಶಕ್ತಿಯ ಬೆಳವಣಿಗೆ ಅನಿವಾರ್ಯವಾಗಿದೆ. ಸದಸ್ಯರು ಸದಸ್ಯತ್ವದ ಅಭಿಯಾನದಲ್ಲಿ ಯುವ ಸದಸ್ಯತ್ವ ನೋಂದಣಿಗೆ ಮಹತ್ವ ನೀಡಬೇಕು. ಕುಂಠಿತಗೊಳ್ಳುತ್ತಿರುವ ಮಹಿಳಾ ವಿಭಾಗಕ್ಕೂ ಹೆಚ್ಚು ಪ್ರಾಧಾನ್ಯತೆ ನೀಡಿ ಸಂಘದಲ್ಲಿ ಮಹಿಳಾ ಶಕ್ತಿಯ ಪ್ರಾಬಲ್ಯಕ್ಕೂ ಮಹತ್ವ ನೀಡಬೇಕು. ಯುವ ಪೀಳಿಗೆಯ ಹಸ್ತಾಕ್ಷರವಿಲ್ಲದೆ ಸಂಘ-ಸಂಸ್ಥೆಗಳು ಅಭಿವೃದ್ಧಿಯತ್ತ ಸಾಗಲು ಸಾಧ್ಯವಿಲ್ಲ ಎಂದು ಕಾಂದಿವಲಿ ಕನ್ನಡ ಸಂಘದ ಅಧ್ಯಕ್ಷ ಪೊಲ್ಯ ಜಯಪಾಲ ಶೆಟ್ಟಿ ಅವರು ಅಭಿಪ್ರಾಯಿಸಿದರು.

Advertisement

ಸೆ. 30 ರಂದು ಕಾಂದಿವಲಿ ಪಶ್ಚಿಮದ ಮಹಾವೀರ ನಗರದ ಪಾಂಚೋಲಿಯ ಶಾಲೆಯಲ್ಲಿ ನಡೆದ ಕಾಂದಿವಲಿ ಕನ್ನಡ ಸಂಘದ 24 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ನಾಲ್ಕು ದಶಕಗಳ ಹಿಂದೆ ಕಾಂದಿವಲಿ ಪರಿಸರದಲ್ಲಿ ಕನ್ನಡ ಮನಸುಗಳು ಒಗ್ಗೂಡಿ ಸ್ಥಾಪಿಸಿದ ಈ ಸಂಘವು ಹಿರಿಯ ಸಂಸ್ಥೆಗಳಲ್ಲಿ ಒಂದಾಗಿ ಪರಿಸರದ ವಿವಿಧ ಸಮಾಜ ಸೇವೆಯಲ್ಲಿ ಕಾರ್ಯನಿರತ ಸಂಸ್ಥೆಯಾಗಿದೆ. ಸಂಸ್ಕೃತಿ, ಸಂಸ್ಕಾರದೊಂದಿಗೆ ತಾಯ್ನಾಡಿನ ಕೂಟಗಳನ್ನು ಕಟ್ಟಿಕೊಂಡು ಸಾಂಸ್ಕೃತಿಕ ಬೇರುಗಳನ್ನು ಪೋಷಿಸುತ್ತಾ ಜನಹಿತ ಸಮಾಜ ಸೇವೆಯೂ ಸಂಸ್ಥೆಗೆ ಬೆಳ್ಳಿಹಬ್ಬದ ಸಡಗರವನ್ನು ಆಚರಿಸುವಂತಾಗಿದೆ. ಸಮಸ್ತ ತುಳು-ಕನ್ನಡಿಗರು ಸಹಾಯ ಹಸ್ತ ನೀಡಿ ಕಾಂದಿವಲಿ ಕನ್ನಡ ಸಂಘ ಭವಿಷ್ಯತ್ತಿನ ಸಂಸ್ಥೆಯಾಗುವುದರಲ್ಲಿ ಸಹಕರಿಸುವಂತೆ ಕರೆ ನೀಡಿದರು.

ಪ್ರಾರ್ಥನೆಯೊಂದಿಗೆ ಪ್ರಾರಂಭ ಗೊಂಡ ಮಹಾಸಭೆಯಲ್ಲಿ ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ್‌ ಕೆ. ಹೆಜ್ಮಾಡಿ ಪದಾಧಿಕಾರಿಗಳು, ಸದಸ್ಯರನ್ನು ಸ್ವಾಗತಿಸಿ, ಗತ ವಾರ್ಷಿಕ ವರದಿಯನ್ನು ಮಂಡಿಸಿದರು. ಗೌರವ ಕೋಶಾಧಿಕಾರಿ ಸುಂದರ ಎಸ್‌. ಶೆಟ್ಟಿ ಲೆಕ್ಕಪತ್ರ ಮಂಡಿಸಿ ಅಂಗೀಕರಿಸಿಕೊಂಡರು.

ಸಲಹೆಗಾರರುಗಳಾದ ಜಯಕರ ಎಸ್‌. ಶೆಟ್ಟಿ ಅವರು ಮಾತ ನಾಡಿ, ಬೆಳ್ಳಿಹಬ್ಬದ ಸ್ವಾಗತದ ಆಹ್ವಾನ ದಲ್ಲಿರುವ ಕಾಂದಿವಲಿ ಕನ್ನಡ ಸಂಘವು ಪ್ರಸಕ್ತ ವರ್ಷದಲ್ಲಿ ಸದಾ ಕಾರ್ಯಚಟುವಟಿಕೆಗಳಲ್ಲಿ ನಿರತವಾಗಿರ ಬೇಕು. ಖರ್ಚು ವೆಚ್ಚಕ್ಕಾಗಿ ನಿಧಿ ಸಂಗ್ರಹದಂತಹ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಬೇಕು. ಎಲ್ಲರೂ ಒಗ್ಗಟ್ಟಾಗಿ ಆರ್ಥಿಕ ಪರಿಸ್ಥಿತಿ ಸುದೃಢಗೊಳಿಸುವಲ್ಲಿ ಸಹ ಮತದಿಂದ ಕೆಲಸ ಮಾಡಬೇಕು ಎಂದರು.

ಸದಸ್ಯರಾದ ಜಯಕರ ಕುಕ್ಯಾನ್‌ ಅವರು ಮಾತನಾಡಿ, ಕೆಲವೊಂದು ಮಹತ್ವದ ಬದಲಾವಣೆಯ ಮೂಲಕ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆಗೊಳಿಸಬೇಕು. ಬೆಳ್ಳಿಹಬ್ಬದ ಸ್ವಾಗತದ ಈ ಸಮಯ ದಲ್ಲಿ ಸದಸ್ಯರೆಲ್ಲ ಸಂಸ್ಥೆಯ ಅಭಿವೃದ್ಧಿಗೆ ಕಾರೊÂàನ್ಮುಖರಾಗಿ, ಪುನರಾಭಿವೃದ್ಧಿಗೆ ಒಳಗಾಗದ ಸಂಘದ ಕಟ್ಟಡಕ್ಕೆ ತಾತ್ಕಲಿಕವಾಗಿ ಕಚೇರಿಯೊಂದನ್ನು ಪಡೆಯಬೇಕು ಎಂದು ಸಲಹೆ ನೀಡಿದರು.
ನಿಟ್ಟೆ ದಾಮೋದರ ಆಚಾರ್ಯ ಅವರು ಮಾತನಾಡಿ, ಪ್ರೀತಿ, ಬಾಂಧವ್ಯ ಗಟ್ಟಿಗೊಳಿಸಲು ಇಂತಹ ಸಭೆಯಲ್ಲಿ ಚರ್ಚೆ ಅಗತ್ಯ. ಸಂಘದ ಸದಸ್ಯರೆಲ್ಲರೂ ಅಭಿಮಾನ ವ್ಯಕ್ತಿಗಳಾಗಿರಬೇಕು. ಅಧ್ಯಕ್ಷರೂ ಆರ್ಥಿ ಕತೆಯಲ್ಲಿ ಸಲಹೆ ಗಾರಾಗಿರ ಬೇಕು ಎಂದರು.

Advertisement

ಸಲಹೆಗಾರರಾದ ಮಂಜಯ್ಯ ಸಿ. ಅಮೀನ್‌, ವಿನೋದಾ ಡಿ. ಶೆಟ್ಟಿ ಸಲಹೆ ಸೂಚನೆಗಳನ್ನು ನೀಡಿದರು. ವೇದಿಕೆ ಯಲ್ಲಿ ಗೌರವಾಧ್ಯಕ್ಷ ಜಿ.ಟಿ. ಪೂಜಾರಿ, ಉಪಾಧ್ಯಕ್ಷರಾದ ಪ್ರೇಮನಾಥ್‌ ಪಿ. ಕೋಟ್ಯಾನ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರೋಜಾ ಎನ್‌. ಶೆಟ್ಟಿ ಉಪಸ್ಥಿತರಿದ್ದರು. 

ಜತೆ ಕಾರ್ಯದರ್ಶಿ ಉಮೇಶ್‌ ಎನ್‌. ಸುರತ್ಕಲ್‌ ವಂದಿಸಿದರು. ಅಧಿಕ ಸಂಖ್ಯೆಯಲ್ಲಿ ಸದಸ್ಯ ಬಾಂಧವರು ಉಪಸ್ಥಿತರಿದ್ದರು. 

ಚಿತ್ರ-ವರದಿ : ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next