Advertisement
ಅವರು ಮಾಜಿ ಸಂಸದ ಎಚ್.ಜಿ.ರಾಮುಲು ನಿವಾಸದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಂಚಿಪೀಠ ಡಾ|ಚಂದ್ರಶೇಖರ ಸರಸ್ವತಿ ಸ್ವಾಮೀಜಿಯವರಿಗೆ ಕಿಷ್ಕಿಂದಾ ಅಂಜನಾದ್ರಿ, ಚಿಂತಾಮಣಿ, ಹಂಪಿ ಪ್ರದೇಶದ ಬಗ್ಗೆ ಪ್ರೀತಿ ಗೌರವವನ್ನು ಇಟ್ಟುಕೊಂಡಿದ್ದರು. ಹಲವು ಭಾರಿ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ಕಿಷ್ಕಿಂದಾ ಅಂಜನಾದ್ರಿ ಕ್ಷೇತ್ರ ಅಯೋಧ್ಯೆಯಂತೆ ಬೆಳೆಯಬೇಕು.ಆದ್ದರಿಂದ ಕೇಂದ್ರ ರಾಜ್ಯ ಸರಕಾರ ಯೋಜನೆ ರೂಪಿಸಿ ಅನುಷ್ಠಾನ ಮಾಡಬೇಕು. ಅಂಜನಾದ್ರಿಗೆ ಐತಿಹಾಸಿಕ ಇತಿಹಾಸವಿದ್ದು ಮೊದಲಿಗೆ ಶ್ರೀರಾಮ, ಲಕ್ಷ್ಮಣ ಋಷಿಮುಖ ಪರ್ವತ ಪ್ರದೇಶದಲ್ಲಿ ಆಂಜನೇಯನಿಗೆ ಭೇಟಿಯಾಗಿ ಕಿಷ್ಕಿಂದಾ ರಾಜ ಸುಗ್ರೀವನಿಂದ ನೆರವು ಪಡೆದು ಲಂಕಾ ಪ್ರದೇಶಕ್ಕೆ ಹನುಮಂತ ತೆರಳಿದ್ದು ಇಲ್ಲಿಂದ ಆದ್ದರಿಂದ ಕಿಷ್ಕಿಂದಾ ಅಂಜನಾದ್ರಿಯ ಇತಿಹಾಸ ಬಹಳಷ್ಟಿದೆ. ಈ ಪ್ರದೇಶವನ್ನು ಎಲ್ಲಾ ಹಿಂದೂಗಳು ನೋಡುವಂತಾಗಬೇಕು. ಪ್ರಕೃತಿ ಸೌಂದರ್ಯವನ್ನು ಉಳಿಸಿಕೊಂಡು ಸರಕಾರ ಅಭಿವೃದ್ಧಿ ಕಾರ್ಯ ಮಾಡಲಿ.ಯುವಜನರಿಗೆ ಧರ್ಮ ದೇವರ ಕುರಿತು ಆಸಕ್ತಿ ಮೂಡುವಂತೆ ಪಾಲಕರು ಕ್ರಮ ಶಿಕ್ಷಣ ಕಲಿಸಬೇಕು. ದೇಶದ ಧಾರ್ಮಿಕ ಕೇಂದ್ರಗಳ ಜವಾಬ್ದಾರಿಯನ್ನು ಸರಕಾರ ಜನತೆಗೆ ಬಿಡಬೇಕು. ಕಂಚಿಕಾಮಕೋಟಿ ಪೀಠದಿಂದ ಸರ್ಕ್ಯೂಟ್ ಯೋಜನೆ ರೂಪಿಸಿ ಪೂಜ್ಯ ಡಾ|ಚಂದ್ರಶೇಖರ ಸರಸ್ವತಿ ಸ್ವಾಮೀಜಿಯವರು ಭೇಟಿ ನೀಡಿದ್ದ ಸ್ಥಳಗಳನ್ನು ಭಕ್ತರು ವೀಕ್ಷಣೆ ಮಾಡಲು ಯೋಜನೆ ರೂಪಿಸಲಾಗುತ್ತದೆ.
Advertisement
ಶ್ರೀರಾಮನಿಗೆ ವಿಶ್ವಾಸ ನೀಡಿದ ಅಂಜನಾದ್ರಿ ಜಗತ್ತಿಗೆ ಪರಿಚಯವಾಗಬೇಕು: ಕಂಚಿ ಶ್ರೀ
07:19 PM Apr 13, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.