Advertisement
ಕಸ ವಿಲೇವಾರಿ ನಡೆಸುವುದನ್ನು ಪ್ರತಿಭಟಿಸಿದ ಗ್ರಾಮಸ್ಥರ ಮೇಲೆ ಪೊಲೀಸರ ದೌರ್ಜನ್ಯ ಪ್ರದರ್ಶಿಸಿದ್ದಾರೆ ಹಾಗೂ ಕಸ ವಿಲೇವಾರಿಯ ವಿಚಾರದಲ್ಲಿ ಪುರಸಭೆಯವರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಸಜೀಪನಡು ಗ್ರಾಮಸ್ಥರು ಸಜೀಪ ಬಂದ್ ಗೆ ಕರೆ ನೀಡಿದ್ದರು.
ಕಂಚಿನಡ್ಕಪದವು ಘಟಕದಲ್ಲಿ ತ್ಯಾಜ್ಯ ವಿಲೇವಾರಿ ನಡೆಸುವ ಕುರಿತು ಕೆಲವು ದಿನಗಳಿಂದ ಸ್ಥಳೀಯರು ಹಾಗೂ ಬಂಟ್ವಾಳ ಪುರಸಭೆಯ ಮಧ್ಯೆ ಪರ – ವಿರೋಧದ ಮಾತುಗಳು ಕೇಳಿಬರುತ್ತಿದ್ದು, ಮಂಗಳೂರು ಸಹಾಯಕ ಕಮಿಷನರ್ ನಿರ್ದೇಶನದಂತೆ ಪುರಸಭೆಯವರು ಕಸವನ್ನು ವಿಲೇವಾರಿ ನಡೆಸುವುದಕ್ಕೆ ಇಲ್ಲಿಗೆ ತಂದಿದ್ದರು. ಬುಧವಾರ ಕಸ ಬರುತ್ತದೆ ಎಂದು ಮಾಹಿತಿ ತಿಳಿದ ಸಜೀಪನಡು ಗ್ರಾಮಸ್ಥರು ಗ್ರಾ.ಪಂ.ಅಧ್ಯಕ್ಷ ಮಹಮ್ಮದ್ ನಾಸೀರ್ ನೇತೃತ್ವದಲ್ಲಿ ತ್ಯಾಜ್ಯ ಘಟಕದ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಹಿನ್ನೆಲೆಯಲ್ಲಿ ಪುರಸಭೆಯವರು ಪೊಲೀಸ್ ರಕ್ಷಣೆಯನ್ನೂ ಕೇಳಿದ್ದರು.
Related Articles
Advertisement
ಕಸದ ವಾಹನ ಕಂಚಿನಡ್ಕಪದವುಗೆ ತೆರಳುತ್ತಿದ್ದಂತೆ ಸ್ಥಳೀಯರು ಗೇಟಿಗೆ ಅಡ್ಡ ಕುಳಿತರು. ಮಹಿಳೆಯರು, ಮಕ್ಕಳು ಸಹಿತ ಸುಮಾರು 100ಕ್ಕೂ ಅಧಿಕ ಮಂದಿ ಸೇರಿದ್ದರು. ಪ್ರಾರಂಭದಲ್ಲಿ ಗ್ರಾಮಸ್ಥರ ಮನವೊಲಿಕೆಗೆ ಪ್ರಯತ್ನಿಸಲಾಯಿತಾದರೂ ಅದು ಫಲ ನೀಡಲಿಲ್ಲ. ತಮ್ಮ ಬೇಡಿಕೆ ಈಡೇರಿಸಿದ ಬಳಿಕವೇ ಕಸ ವಿಲೇವಾರಿ ನಡೆಸಿ ಎಂದು ಪಟ್ಟು ಹಿಡಿದರು.
ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್ ಡಿ’ ಸೋಜಾ, ಸಿಐ ಟಿ.ಡಿ.ನಾಗರಾಜ್, ಗ್ರಾಮಾಂತರ ಎಸ್‌ಐ ಪ್ರಸನ್ನ ಅವರು ಗ್ರಾಮಸ್ಥರನ್ನು ಮನವೊಲಿಸಲು ಸಾಕಷ್ಟು ಪ್ರಯತ್ನಪಟ್ಟರು. ಪುರಸಭೆಯ ಪರಿಸರ ಎಂಜಿನಿಯರ್ ಯಾಸ್ಮಿನ್ ಅವರು ಕೂಡ ಸ್ಥಳದಲ್ಲಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದು ಕೊನೆಗೆ ಪೊಲೀಸರು ಗ್ರಾ.ಪಂ.ಅಧ್ಯಕ್ಷ ಮಹಮ್ಮದ್ ನಾಸೀರ್ ಸಹಿತ ಸುಮಾರು 30ಕ್ಕೂ ಆಧಿಕ ಮಂದಿಯನ್ನು ವಶಕ್ಕೆ ಪಡೆದರು. ಉಳಿದವರನ್ನು ಸ್ಥಳದಿಂದ ಚದುರಿಸಿ, ತ್ಯಾಜ್ಯವನ್ನು ವಿಲೇವಾರಿ ನಡೆಸಲಾಯಿತು.