Advertisement

ಕಾಂಚನ ಮೂಲಸ್ಥಾನ ಪೊಲಿಪು ಮುಂಬಯಿ ಸಮಿತಿಯ ವಾರ್ಷಿಕ ಮಹಾಸಭೆ

05:19 PM Nov 18, 2018 | |

ಮುಂಬಯಿ: ಮೂಲ ಸ್ಥಾನಗಳು ಸದಸ್ಯ ಬಾಂಧವರಿಗೆ ಅನ್ಯೋನ್ಯತೆಯಿಂದ ಬಾಳಲು ಮತ್ತು ಸ್ನೇಹಪರ ಬದುಕನ್ನು ಕಟ್ಟಿಕೊಳ್ಳಲು ಪ್ರೇರಣೆಯನ್ನು ನೀಡುತ್ತದೆ. ಕೌಟುಂಬಿಕ ಸಂಬಂಧಗಳನ್ನು ಗಟ್ಟಿಗೊಳಿಸುವಂತಹ ಕಾರ್ಯವು ಮೂಲಸ್ಥಾನಗಳಿಂದಾಗುತ್ತದೆ. ಇಂದಿನ ಅವಸರದ ಬದುಕಿನಲ್ಲಿಯೂ ಸದಸ್ಯ ಬಾಂಧವರು ಮೂಲಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲಿ ಶ್ರದ್ಧಾ ಭಕ್ತಿಯಿಂದ ಭಾಗವಹಿಸುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ. ಯುವ ಪೀಳಿಗೆ ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಕಾಂಚನ್‌ ಮೂಲಸ್ಥಾನ ಪೊಲಿಪು ಮುಂಬಯಿ ಇದರ ಅಧ್ಯಕ್ಷರಾದ ಮಾಧವ ಸಿ. ಕಾಂಚನ್‌ ಹೇಳಿದರು.

Advertisement

ಅವರು ಕಾಂಚನ ಮೂಲಸ್ಥಾನ ಪೊಲಿಪು, ಮುಂಬಯಿ ಸಮಿತಿಯು ಮಲಾಡ್‌ ಪಶ್ಚಿಮದ ಮಡ್‌ ಐಲ್ಯಾಂಡ್‌ನ‌ ವೆಲ್ಲಂಕಣಿ ವಿಲ್ಲಾದಲ್ಲಿ ಇತ್ತೀಚೆಗೆ ಆಯೋಜಿಸಿದ ವಾರ್ಷಿಕ ಮಹಾಸಭೆ, ವಿಹಾರಕೂಟ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ನಮ್ಮೊಳಗಿನ ಪ್ರೀತಿ ಯನ್ನು ವಿಸ್ತಾರಗೊಳಿಸುವ ಸಾನ್ನಿಧ್ಯವು ಮೂಲಸ್ಥಾನವಾಗಿದ್ದು ಇದರ ಉಳಿವು ಮತ್ತು ಪ್ರಗತಿಗಾಗಿ ಸದಸ್ಯರೆಲ್ಲರೂ ಶ್ರಮಿಸಬೇಕೆಂದು ವಿನಂತಿಸಿದರು.

ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಾಂಚನ್‌ ಮೂಲಸ್ಥಾನದ ಮುಂಬಯಿ ಸಮಿತಿಯ ಗೌರವ  ಅಧ್ಯಕ್ಷ ರಾದ ಸದಾ ಶಿವ ಪಡಂಬೂರು ಅವರು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಸಭೆಯಲ್ಲಿ ಮೂಲಸ್ಥಾನದ ಮುಂಬಯಿ ಸಮಿತಿಯ ಗೌರವ  ಕಾರ್ಯದರ್ಶಿ ಮಧುಸೂದನ್‌  ಇಡ್ಯಾರವರು ವಾರ್ಷಿಕ ವರದಿ
ಯನ್ನು ಮಂಡಿಸಿದರು. ಅದು ಸರ್ವಾನುಮತದಿಂದ ಅಂಗೀಕರಿಸ ಲಾಯಿತು. ವಾರ್ಷಿಕ ಲೆಕ್ಕಪತ್ರವನ್ನು ಗೌರವ  ಕೋಶಾಧಿಕಾರಿ  ಗಂಗಾಧರ ಕಾಂಚನ್‌ ಮಂಡಿಸಿದರು. ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಸಭೆಯಲ್ಲಿ 2018-2019ರ ಅವ ಧಿಗೆ ವಿಶ್ವನಾಥ್‌ ಕಾಂಚನ್‌ ಅವರನ್ನು ಆಂತರಿಕ ಲೆಕ್ಕ ಪರಿ ಶೋಧಕರಾಗಿ ನೇಮಿಸಲಾಯಿತು. 

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ  ಕೇಶವ ಬಿ. ಕಾಂಚನ್‌, ಡಿ. ಕೆ. ಕಾಂಚನ್‌, ಸದಾಶಿವ ಕಾಂಚನ್‌, ದಿವಾಕರ ಬಿ. ಕಾಂಚನ್‌ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

Advertisement

ಮೂಲಸ್ಥಾನದ  ಪ್ರಧಾನ ಸಮಿತಿಯ ಉಪಾಧ್ಯಕ್ಷ ಭಾಸ್ಕರ್‌ ಕಾಂಚನ್‌ ಹಾಗೂ ಗೌರವ  ಕಾರ್ಯದರ್ಶಿ ಶ್ರೀಧರ್‌ ಕಾಂಚನ್‌ ಸಂದಭೋìಚಿತವಾಗಿ ಮಾತನಾಡಿದರು. ಅವರನ್ನು ಅಧ್ಯಕ್ಷರಾದ ಮಾಧವ ಸಿ. ಕಾಂಚನ್‌ ಪುಷ್ಪಗುತ್ಛ ನೀಡಿ ಗೌರವಿಸಿದರು. ಆರಂಭದಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಮಾಡಿದರೆ ಗೌರವ ಕಾರ್ಯದರ್ಶಿ ಮಧುಸೂದನ್‌ ಇಡ್ಯಾ ಸ್ವಾಗತಿಸಿದರು. ಮಹಾಸಭೆಯಲ್ಲಿ ಸದಸ್ಯ ಬಾಂಧವರೆಲ್ಲರಿಗೂ ನಾಗ ಬ್ರಹ್ಮದೇವರ ಗಂಧ ಪ್ರಸಾದವನ್ನು ವಿತರಿಸಲಾಯಿತು. ಇದೇ ಸಂದ ರ್ಭದಲ್ಲಿ ವರದಿ ವರ್ಷದಲ್ಲಿ ದೈವಾಧೀನರಾದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮನೋ ರಂಜನೆಯ ಅಂಗವಾಗಿ ವಿವಿಧ ವಿನೋದಾವಳಿಗಳು  ಜರಗಿದವು.  ಸಂಸ್ಥೆಯ ಪದಾಧಿಕಾರಿಗಳು, ಕಾರ್ಯ ಕಾರಿ ಸಮಿತಿಯ ಸದಸ್ಯರು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next