Advertisement

ಕನಸಿರದ ಬಾಳು ಬಾಳೇ?

03:45 AM Feb 14, 2017 | Harsha Rao |

ನಾನು ಏನೇ ಪ್ರಯತ್ನ ಪಟ್ಟರೂ ಕ್ಲಾಸಿಗೆ ಫ‌ಸ್ಟ್‌ ಬರಲಿಲ್ಲ. ಕ್ಯಾಂಪಸ್‌ ಸೆಲೆಕ್ಷನ್‌ನಲ್ಲಿ ನನಗೆ ನೌಕರಿ ಗಿಟ್ಟಲಿಲ್ಲ. ಇಂಟರ್‌ವ್ಯೂನಲ್ಲಿ ಪದೇ ಪದೆ ಫೇಲಾಗುತ್ತಿದ್ದೇನೆ. ಕಾಲೇಜು ಮುಗಿದ ಮೇಲೆ ಆರಂಭಿಸಿದ ವ್ಯವಹಾರಗಳೊಂದೂ ಕುದುರಲಿಲ್ಲ. ಅಪ್ಪ ಮಾಡುತ್ತಿದ್ದ ಕೆಲಸವನ್ನೂ ನನ್ನಿಂದ ಮುಂದುವರೆಸಲಾಗಲಿಲ್ಲ. ಒಟ್ಟಾರೆ, ಬದುಕಿನಲ್ಲಿ ನನಗೆ ಯಶಸ್ಸು ಸಿಗಲೇ ಇಲ್ಲ- ಇದು ಹಲವು ಹುಡುಗರ ಬದುಕಿನ ನಿತ್ಯದರಾಗ. ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೊದಲು ಸಮಸ್ಯೆಗಳ ಮೂಲ ಹುಡುಕುವುದು ಬುದ್ಧಿವಂತರ ಲಕ್ಷಣ. ನಾವೆಲ್ಲರೂ ಮಾಡುತ್ತಿರುವ ತಪ್ಪೆಂದರೆ ಕನಸು ಕಾಣದಿರುವುದು. 

Advertisement

ನಾನು ಹೀಗೇ ಬದುಕಬೇಕು, ನನಗೆ ಇಂಥದೇ ನೌಕರಿ ಬೇಕು, ನನ್ನ ಲೈಫ್ಸ್ಟೈಲ… ಇದೇನೇ ಎಂದು ತೀರ್ಮಾನಿಸಿ ಬದುಕು ಕಟ್ಟಿಕೊಳ್ಳಲು ಶುರುಮಾಡಿದ ಆ ಕ್ಷಣ ನಿಮಗೊಂದು ಕಿನ್ನರ ಲೋಕವೇ ಗೋಚರಿಸುತ್ತದೆ. ಈ ಸುಂದರ ಜಗತ್ತು ಸೃಷ್ಟಿಯಾಗಿರುವುದು ಕನಸುಗಳಿಂದ. ಅನಾಸಿನ್‌ ಗುಳಿಗೆ ನುಂಗಿದ ಮೇಲೆ ತಲೆನೋವು ಮಾಯವಾಗಲು ಅದರೊಳಗಿನ ಔಷಧಿ ಹೇಗೆ ಕಾರಣವೋ, ಆ ಗುಳಿಗೆ ಸಂಶೋಧಿಸಲು ವೈದ್ಯ ವಿಜ್ಞಾನಿ ಕಂಡ ಕನಸೂ ಅಷ್ಟೇ ಸಕಾರಣವಾದುದು. ಅನಾಸಿನ್‌ ಗುಳಿಗೆ ಸಂಶೋಧನೆ ಕುರಿತ ಕನಸನ್ನು ಆತ ಕಾಣದೇ ಇದ್ದಿದ್ದರೆ ತಲೆನೋವಿಗೆ ತಲೆಗಳೇ ಉರುಳುತ್ತಿದ್ದವೇನೋ.

ರಸ್ತೆ ಬದಿಯಲ್ಲಿ ಪರಂಗಿ ಹಣ್ಣನ್ನು ವಿಶಿಷ್ಟ ಬಗೆಯಲ್ಲಿ ಕತ್ತರಿಸಿಟ್ಟ ವ್ಯಾಪಾರಿ, ಸುಂದರ ಮನೆಯ ನೀಲಿ ನಕಾಶೆ ಬಿಡಿಸಿಟ್ಟ ಇಂಜಿನಿಯರ್‌, ಹೊಸ ಸಿನಿಮಾ ಮಾಡಿದ ನಿರ್ದೇಶಕ,  ಪತ್ರಿಕೆಯ ಮೂಲೆಯಲ್ಲಿ ಪ್ರಕಟಗೊಂಡ ಕವಿತೆ, ಪದಕ ಗೆದ್ದ ಕ್ರೀಡಾಪಟು, ಹೊಸ ಕಂಪನಿ ಶುರು ಮಾಡಿದ ಉದ್ಯಮಿ, ಎಕರೆಗಟ್ಟಲೆ ಬೆಳೆ ಬೆಳೆದ ರೈತ, ಮುಪ್ಪಾನು ಮುಪ್ಪಿನಲ್ಲಿ ನೊಬೆಲ… ಪಡೆದ ವಿಜ್ಞಾನಿ, ಗಿನ್ನಿಸ್‌ ಪುಸ್ತಕದ ಪುಟದಲ್ಲಿ ದಾಖಲಾದ ಪುಟ್ಟ ಬಾಲಕನ ಸಾಧನೆ, ಅನೇಕ ಒತ್ತಡಗಳ ನಡುವೆ ಕಾದಂಬರಿ ಬರೆದು ಓದಿಸಿಕೊಳ್ಳುವ ಕಾದಂಬರಿಕಾರ, ಹೊಸ ರುಚಿ ಸೃಷ್ಟಿಸುವ ಅಡುಗೆ ಭಟ್ಟ, ಇವರೆಲ್ಲರೂ ನಮ್ಮ ನಡುವೆ ಇರುವ ಇವರೆಲ್ಲರೂ ಬದುಕಿಗೆ ನಿತ್ಯ ಹೊಸ ಅರ್ಥ ಕಲ್ಪಿಸುವ ಕನಸುಗಾರರು.

ಇವರೆಲ್ಲರ ಬದುಕಿನ ಗ್ರಾಫ‌ನ್ನು ಒಮ್ಮೆ ತಿರುಗಿಸಿ ನೋಡಿದರೆ ಅವರೆಲ್ಲರೂ ಅಪಾರ ಕನಸುಗಾರರು ಎಂಬುದು ತಿಳಿಯುತ್ತದೆ. ಕನಸು ಕಾಣುವುದಕ್ಕಿಂತ ಬೇರೆ ತಪಸ್ಸು ಬೇಕಿಲ್ಲ. ನಮ್ಮ ನಮ್ಮ ಆಸಕ್ತಿ, ಅಭಿರುಚಿಗಳನ್ನು ಗಮನದಲ್ಲಿಟ್ಟುಕೊಂಡು ನಾವು ಕನಸು ಕಾಣಬೇಕು. “ತಿರುಕನ ಕನಸು’ ಖಂಡಿತವಾಗಿಯೂ ಅಪಾಯಕಾರಿ.

ನಿಮಗೆÇÉಾ ನೆನಪಿರಬಹುದು: ಶಾಲಾದಿನಗಳಲ್ಲಿ ಮೇಷ್ಟ್ರು ದೊಡ್ಡವನಾದ ಮೇಲೆ ಏನಾಗ್ತಿàಯ? ಎಂದು ಕೇಳಿದರೆ, ಡಾಕ್ಟರ್‌ ಆಗ್ತಿàನಿ, ಸಿನಿಮಾ ಹೀರೋ ಆಗ್ತಿàನಿ, ಗಾಂಧಿ ತರಹ ಆಗ್ತಿàನಿ ಎಂದೆಲ್ಲಾ ಉತ್ತರಿಸುತ್ತಿದ್ದೆವು. ಈಗ ಬೆಳೆದು ದೊಡ್ಡವರಾಗಿದ್ದೇವೆ. ಉದ್ಯೋಗಂ ಪುರುಷ ಮಾತ್ರರಿಗೆ ಲಕ್ಷಣಂ ಅಲ್ಲ, ಸ್ತ್ರೀಯರಿಗೂ ಲಕ್ಷ ಣಂ ಆಗಿದೆ. ಬಾಲ್ಯ, ಯೌವನ ಕಳೆದು ವಯಸ್ಕರಾಗುತ್ತಿದ್ದಂತೆ ಜವಾಬ್ದಾರಿಗಳು ಹೆಗಲೇರಿಬಿಡುತ್ತವೆ. ನೌಕರಿ, ದುಡಿಮೆ, ಮದುವೆ, ಸಂಸಾರ, ಮಕ್ಕಳು, ಸಾಲ, ಬೇಡವೆಂದರೂ ಅನೇಕ ಸವಾಲುಗಳು ಧುತ್ತನೆ ಬಂದೆರಗುತ್ತವೆ; ಒಂದು ಕೊಂಡರೆ ಎರಡು ಉಚಿತ ಎನ್ನುವ ಹಾಗೆ!

Advertisement

ಬದುಕನ್ನು ಎದುರಿಸಲು, ಸಾಕಾರಗೊಳಿಸಿಕೊಳ್ಳಲು ನಾವು ಕನಸುಗಾರರಾಗಬೇಕು. ನಿತ್ಯ ಕನಸು ಕಾಣಬೇಕು. ಕನಸು ನನಸಾಗಲು ಶ್ರಮಪಡಬೇಕು. ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು, ಆದರೆ ಕನಸುಗಳಿಲ್ಲದ ದಾರಿಯಲ್ಲಿ ನಡೆಯಲು ಸಾಧ್ಯವಿಲ್ಲ.

– ಕಂಡಕ್ಟರ್‌ ಸೋಮು

Advertisement

Udayavani is now on Telegram. Click here to join our channel and stay updated with the latest news.

Next