Advertisement

ಕೊಡಿಹಳ್ಳಿ ಶಾಲೆ ಮೈದಾನಕ್ಕೆ ಹೊಸ ರೂಪ

06:09 PM Jun 23, 2021 | Team Udayavani |

ಕನಕಪುರ: ಕೊರೊನಾ ರಜೆ ಮುಗಿಸಿ ಮರಳಿ ಶಾಲೆಗೆಬರುವ ಮಕ್ಕಳಿಗೆ ಹೊಸತನ ನೀಡಲು ಕೊಡಿಹಳ್ಳಿಸರ್ಕಾರಿ ಶಾಲೆಯ ಆಟದ ಮೈದಾನ ಹೊಸರೂಪದೊಂದಿಗೆ ಸಿದ್ಧವಾಗಿದೆ.ತಾಲೂಕಿನ ಕೋಡಿಹಳ್ಳಿ ಜಿಎಂಪಿಎಸ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋಡಿಹಳ್ಳಿಗ್ರಾಪಂನಿಂದ ನರೇಗಾ ಯೋಜನೆಯಲ್ಲಿ10 ಲಕ್ಷ ರೂ.ವೆಚ್ಚದಲ್ಲಿ ಸರ್ಕಾರಿ ಶಾಲೆಗಳಿಗೆ ಮಾದರಿಯಾಗುವಂತ ಆಟದ ಮೈದಾನ ಸಿದ್ಧಗೊಂಡಿದೆ.

Advertisement

ಕೊರೊನಾ ರಜೆಮುಗಿಸಿ ಮರಳಿ ಶಾಲೆಗೆ ಬರುವ ಮಕ್ಕಳನ್ನು ನೂತನಆಟದ ಮೈದಾನ ಸ್ವಾಗತ ಮಾಡಲಿದೆ.ಕೆಸರು ಗದ್ದೆಯಾಗಿತ್ತು ಮೈದಾನ: ಕೋಡಿಹಳ್ಳಿಜಿಎಂಪಿಎಸ್‌ ಸರ್ಕಾರಿ ಹಿರಿಯ ಪ್ರಾಥಮಿಕಶಾಲೆಯಲ್ಲಿ 1ರಿಂದ 8ರವರೆಗೆ ವಿದ್ಯಾಭ್ಯಾಸಮಾಡುತ್ತಿರುವ ಸುಮಾರು 400 ಮಕ್ಕಳಿಗೆ ಆಟದಮೈದಾನ ಇಲ್ಲದೆ, ಕ್ರೀಡೆಗಳಿಂದ ವಂಚಿತರಾಗಿದ್ದರು.ಮಳೆ ಬಂದಾಗ ಆಟದ ಮೈದಾನ ಸಂಪೂರ್ಣವಾಗಿಕೆಸರು ಗದ್ದೆಯಾಗುತ್ತಿತ್ತು.

ನಮಗೆ ಉತ್ತಮವಾದಆಟದ ಮೈದಾನ ಬೇಕು ಎಂದು ಕಳೆದ ಒಂದುವರ್ಷದಿಂದಲೂ ಮಕ್ಕಳು ಮತ್ತು ಶಿಕ್ಷಕರು ಗ್ರಾಮಸಭೆಯಲ್ಲಿ ಗ್ರಾಪಂ ಅಧಿಕಾರಿಗಳ ಗಮನ ಸೆಳೆದಿದ್ದರು.ಮಕ್ಕಳ ಸಮಸ್ಯೆ ಬಗ್ಗೆ ಗಂಭೀರವಾಗಿ ಪರಿಗಣಿಸಿದಕೊಡಿಹಳ್ಳಿ ಗ್ರಾಪಂ ಪಿಡಿಒ ಕೃಷ್ಣ ಮೂರ್ತಿ, ಶಾಲೆಮುಖ್ಯ ಶಿಕ್ಷಕರ ಸಹಕಾರದೊಂದಿಗೆ ನರೇಗಾಯೋಜನೆಯಲ್ಲಿ ಸುಮಾರು 10 ಲಕ್ಷ ವೆಚ್ಚದಲ್ಲಿ ಎಲ್ಲ ಕ್ರೀಡೆಗಳಿಗೂ ಅನುಕೂಲವಾಗುವಂತೆ ಆಟದಮೈದಾನ ನಿರ್ಮಾಣ ಮಾಡಿ ಗಮನ ಸೆಳೆದಿದ್ದಾರೆ.ಶಾಲೆಯ ಲಭ್ಯವಿದ್ದ ಜಾಗವನ್ನು ಸದ್ಬಳಕೆಮಾಡಿಕೊಂಡು ಖೋ ಖೋ, ಕಬ್ಬಡ್ಡಿ ಕೊರ್ಟ್‌ಸೇರಿದಂತೆ ಎಲ್ಲಾ ಆಟಗಳಿಗೆ ಅನುಕೂಲ ಕಲ್ಪಿಸಲುಆದ್ಯತೆ ನೀಡಲಾಗಿದೆ.

ಮಕ್ಕಳಿಗಿದೆ ಎಲ್ಲ ರೀತಿಯ ಸೌಲಭ್ಯ: ವಿಶೇಷವಾಗಿಆಟದ ಮೈದಾನದಲ್ಲಿ ಕುಸ್ತಿ ಅಂಕಣ, ಮಳೆ ನೀರುಕೋಯ್ಲು ಘಟಕ, ಪೌಷ್ಟಿಕ ಆಹಾರದ ಕೈತೋಟ, ಸಣ್ಣಮಕ್ಕಳ ಆಟದ ಮೈದಾನ, ರಂಗ ಮಂದಿರ ಸೇರಿದಂತೆಶಾಲಾ ಮಕ್ಕಳಿಗೆ ಅಗತ್ಯವಿರುವ ಎಲ್ಲ ರೀತಿಯಸೌಲಭ್ಯಕಲ್ಪಿಸಲಾಗಿದೆ.

ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ: ಕೋಡಿಹಳ್ಳಿ ಜಿಎಂಪಿಎಸ್‌ ಶಾಲೆಯ ಮಕ್ಕಳು ಯೋಗ, ಕುಸ್ತಿಯಂತಹ ಕ್ರೀಡೆಗಳಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿಭಾಗವಹಿಸಿದ್ದಾರೆ. ಅಂತಹ ವಿದ್ಯಾರ್ಥಿಗಳನ್ನುಗಮನದಲ್ಲಿಟ್ಟುಕೊಂಡೇ ಮೈದಾನದಲ್ಲಿ ಗ್ರಾಮೀಣಕ್ರೀಡೆಗಳಿಗೆ ಆದ್ಯತೆ ನೀಡಿರುವ ಗ್ರಾಪಂ ಅಧಿಕಾರಿಗಳುವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಅಲ್ಲದೆ, ನಮ್ಮನೆಲೆದ ಜನಪದ ಕಲೆ, ಸಾಹಿತ್ಯವನ್ನು ಬಿಂಬಿಸುವಸಾಂಸ್ಕೃತಿಕ ಚಟುವಟಿಕೆ, ಶಾಲಾ ವಾರ್ಷಿಕೋತ್ಸವಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ರಂಗಮಂದಿರ ನಿರ್ಮಾಣ ಮಾಡಲಾಗಿದೆ.

Advertisement

ಮೈದಾನದಲ್ಲಿ ಜಲ ಸಂರಕ್ಷಣೆ: ಮೈದಾನದಲ್ಲಿಅಂತರ್ಜಲ ಮರುಪೂರ್ಣ ಘಟಕ ನಿರ್ಮಾಣ ಮಾಡಿರುವುದು ಮತ್ತೂಂದು ವಿಶೇಷ. ಇತ್ತೀಚಿನ ದಿನಗಳಲ್ಲಿಅಂತರ್ಜಲ ಕುಸಿದು ಪಾತಾಳಕ್ಕಿಳಿದಿದೆ. ಮುಂದಿನದಿನಗಳಲ್ಲಿ ನೀರಿಗೆ ಸಮಸ್ಯೆ ಉಂಟಾಗುವ ಸಂದರ್ಭಬಂದರೂ ಅಚ್ಚರಿಪಡಬೇಕಿಲ್ಲ. ಜಲಮೂಲ ರಕ್ಷಣೆಗೆಇಂದಿನಿಂದಲೇ ಎಚ್ಚೆತ್ತುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿಗ್ರಾಪಂ ಅಧಿಕಾರಿಗಳು ಮಕ್ಕಳಿಗೆ ಪ್ರಾಥಮಿಕಹಂತದಲ್ಲಿ ಅಂತರ್ಜಲ ಸಂರಕ್ಷಣೆ ಬಗ್ಗೆ ಅರಿವುಮೂಡಿಸಲು ಶುದ್ಧ ನೀರು ಘಟಕದಲ್ಲಿ ವ್ಯರ್ಥವಾಗುವ ನೀರನ್ನೇ ಬಳಸಿಕೊಂಡು ಶಾಲಾ ಆವರಣದಲ್ಲಿ ಅಂತರ್ಜಲ ಮರುಪೂರ್ಣ ಘಟಕ ನಿರ್ಮಾಣ ಮಾಡಿದ್ದಾರೆ.

ಉಮೇಶ್‌ ಬಿ.ಟಿ

Advertisement

Udayavani is now on Telegram. Click here to join our channel and stay updated with the latest news.

Next