ಕನಕಪುರ: ಸರ್ಕಾರಿ ಸೌಲಭ್ಯ ಬಳಸಿಕೊಂಡು ಸರ್ಕಾರಿ ಶಾಲೆಯಲ್ಲಿ ಓದಿದವರು ಇಂದು ಉನ್ನತ ಹುದ್ದೆಗಳಲ್ಲಿದ್ದಾರೆ.ಹೀಗಾಗಿ ಸರ್ಕಾರಿ ಶಾಲೆಗಳನ್ನುಕಡೆಗಣಿಸದೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಯಲಕ್ಷ್ಮೀ ಹೇಳಿದರು.
ತಾಲೂಕಿನ ಮರಳವಾಡಿ ಹೋಬಳಿಯ ರಸ್ತೆ ಜಕ್ಕಸಂದ್ರ ಗ್ರಾಮದಲ್ಲಿ ರಸ್ತೆಅಗಲೀಕರಣಕ್ಕೆ ತೆರವಾಗಿದ್ದ ಸರ್ಕಾರಿಕಿರಿಯ ಪ್ರಾಥಮಿಕ ಶಾಲೆ ಮರುನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆನೆರವೇರಿಸಿ ಮಾತನಾಡಿ, ಸರ್ಕಾರಿಶಾಲೆಗಳಲ್ಲಿ ನುರಿತ ಶಿಕ್ಷಕರನ್ನು ಮಾತ್ರಕೆಲಸ ಮಾಡುತ್ತಾರೆ.
ಮಕ್ಕಳ ಶೈಕ್ಷಣಿಕಅಭಿವೃದ್ಧಿಗೆ ಸರ್ಕಾರ ಶಿಕ್ಷಕರಿಗೆ ತರಬೇತಿನೀಡಲಿದೆ. ಎಲ್ಲರಿಗೂ ಸಮಾನ ಶಿಕ್ಷಣನೀಡುವುದೇ ಸರ್ಕಾರಿ ಶಾಲೆ. ಶಿಕ್ಷಣದಗುಣಮಟ್ಟ, ಮೂಲ ಸೌಲಭ್ಯದಲ್ಲಿಯಾ ವುದೇ ಖಾಸಗಿ ಶಾಲೆಗಳಿಗೂ ಸರ್ಕಾ ರಿಶಾಲೆಗಳು ಕಡಿಮೆ ಇಲ್ಲ ಎಂದರು.ಚೀಲೂರು ಗ್ರಾಪಂ ಅಧ್ಯಕ್ಷೆ ಶೋಭಾರವಿ ಗೌಡ ಮಾತನಾಡಿ, ಸರ್ಕಾರಿಶಾಲೆಗಳಿಗೆ ಸೆಡ್ಡು ಹೋಡೆಯುವರೀತಿಯಲ್ಲಿ 20 ಲಕ್ಷ ರೂ. ವೆಚ್ಚದಲ್ಲಿಶಾಲಾ ಕಟ್ಟಡ ಮತ್ತು ಕಾಂಪೌಂಡ್‌ನಿರ್ಮಾಣ ಮಾಡುವ ಉದ್ದೇಶವಿದೆ.
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವಂತೆ ಜಾಗೃತಿ ಮೂಡಿಸಲಾಗುವುದು.ಇಲಾಖೆ ಮತ್ತು ಅಧಿಕಾರಿಗಳು ಆಂಗ್ಲಮಾಧ್ಯಮ ಸೇರಿದಂತೆ ಇನ್ನಿತರ ಸೌಲಭ್ಯಕಲ್ಪಿಸಿಕೊಟ್ಟರೆ, ಪೋಷಕರು ಸರ್ಕಾರಿಶಾಲೆಗೆ ಮಕ್ಕಳನ್ನು ದಾಖಲು ಮಾಡಲುಮನಸ್ಸು ಮಾಡುತ್ತಾರೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಜಿಲ್ಲಾಧ್ಯಕ್ಷ ರಮೇಶ್, ತಾಲೂಕು ಸಂಘದಅಧ್ಯಕ್ಷ ಕುಮಾರ ಸ್ವಾಮಿ, ಜಕ್ಕಸಂದ್ರ ಶಾಲೆಶಿಕ್ಷಕ ಬಸಪ್ಪ, ಸಹ ಶಿಕ್ಷಕಿ ಆಶಾ ಹೆಗಡೆ,ಚೀಲೂರು ಗ್ರಾಪಂ ಉಪಾಧ್ಯಕ್ಷೆ ಸುಧಾನಾಗೇಶ್, ಪಿಡಿಒ ದಯಾನಂದ ಸಾಗರ್,ಸದಸ್ಯರಾದ ಗೀತಾ ಚಲುವರಾಜು,ಅನುಸೂಯಮ್ಮ, ಹೊನ್ನಗಿರಿಗೌಡ,ಶ್ರೀನಿವಾಸ್, ಅಬ್ಟಾಸ್, ಮುಖಂಡರಾದಮಾರಣ್ಣ, ನಾಗರಾಜು ಹಾಜರಿದ್ದರು.