Advertisement

ನಗರಸಭೆ: 57.86 ಲಕ್ಷ ರೂ. ಉಳಿತಾಯ ಬಜೆಟ್‌

12:28 PM Mar 22, 2021 | Team Udayavani |

ಕನಕಪುರ: ನಗರಸಭೆ ಅಧ್ಯಕ್ಷ ಮಕ್ಬುಲ್‌ ಪಾಷಾ 2021-22 ನೇ ಸಾಲಿನ 57.86 ಲಕ್ಷರೂ.ನ ಉಳಿತಾಯ ಬಜೆಟನ್ನು ಮಂಡಿಸಿದರು.

Advertisement

ನಗರದ ನಗರಸಭೆ ಸಭಾಂಗಣದಲ್ಲಿ 2021-22ನೇ ಸಾಲಿನ ಆಯವ್ಯಯ ಮಂಡಿಸಿದ ಅವರು, 2021-22ನೇ ಸಾಲಿನ7.43 ಕೋಟಿ ರೂ. ಆರಂಭ ಶಿಲ್ಕು, 29.35ಕೋಟಿ ರೂ. ಆದಾಯ ಸೇರಿ ಒಟ್ಟು 36.78ಕೋಟಿ ರೂ.ನಲ್ಲಿ 36.20 ಕೋಟಿ ರೂ. ವೆಚ್ಚತೋರಲಾಗಿದೆ. ಉಳಿಕೆ 57.86 ಲಕ್ಷ ರೂ.ಉಳಿತಾಯದ ಅಯವ್ಯಯ ಮಂಡಿಸಿದ್ದಾಗಿ ತಿಳಿಸಿದರು.

15ನೇ ಹಣಕಾಸು ಅನುದಾನದಿಂದ ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವನೀರು, ಘನತ್ಯಾಜ್ಯ ವಸ್ತು ನಿರ್ವಹಣೆ,ಶೌಚಾಲಯ ನಿರ್ಮಾಣ ನಿರ್ವಹಣೆ,ಸ್ಮಶಾನ ಚಿತಾಗಾರ ಕಚೇರಿ ನಿರ್ವಹಣೆಮುಂತಾದ ಅಭಿವೃದ್ಧಿ ಕಾಮಗಾರಿಗಳಿಗೆ2.50 ಕೋಟಿ ರೂ. ಮೀಸಲಿರಿಸಲಾಗಿದೆ,ವಾರ್ಡ್‌ಗಳ ನಾಮಫ‌ಲಕಕ್ಕೆ 20 ಲಕ್ಷ ರೂ.,ಉದ್ಯಾನ ಪರಿಸರ ಸಂರಕ್ಷಣೆಗೆ 30 ಲಕ್ಷ ರೂ., ನಿರ್ವಹಣೆಗೆ 12 ಲಕ್ಷ ರೂ., ನಗರದನೈರ್ಮಲ್ಯ ಸ್ವತ್ಛತೆಗಾಗಿ 2.34 ಕೋಟಿ ರೂ.,ಕಸ ಸಂಗ್ರಹಣೆಗೆ 30 ಲಕ್ಷ ರೂ., ಆರೋಗ್ಯಘನತ್ಯಾಜ್ಯ ನಿರ್ವಹಣೆ ಮತ್ತು ಸ್ವತ್ಛತೆಜಾಗೃತಿ ಕಾರ್ಯಕ್ರಮಗಳಿಗೆ 10 ಲಕ್ಷ ರೂ.,ನಗರಸಭೆಯ ಕುಡಿಯುವ ನೀರಿನ ಸೌಲಭ್ಯಕಾಮಗಾರಿಗಾಗಿ 50 ಲಕ್ಷ ರೂ., 2.28ಕೋಟಿ ರೂ.ನಲ್ಲಿ ನಿರ್ಮಾಣವಾಗುತ್ತಿರುವವಿದ್ಯುತ್‌ ಚಿತಾಗಾರ ಕಾಮಗಾರಿಗೆ 25 ಲಕ್ಷ ರೂ. ನೀಡಲಾಗಿದೆ ಎಂದು ಹೇಳಿದರು.

ಆದಾಯದ ನಿರೀಕ್ಷೆ: ಬೀದಿದೀಪಗಳ ನಿರ್ವಹಣೆಗೆ 35 ಲಕ್ಷ ರೂ., ಪರಿಶಿಷ್ಟ ಜಾತಿ, ಪಂಗಡದ ಕಲ್ಯಾಣಕ್ಕೆ 15 ಲಕ್ಷ ರೂ., ಇತರೆ ಸಮುದಾಯದ ಅಭಿವೃದ್ಧಿಗೆ 6 ಲಕ್ಷ ರೂ.,ದಿವ್ಯಾಂಗರ ಕಲ್ಯಾಣ ಕಾರ್ಯಕ್ರಮಕ್ಕೆ 5 ಲಕ್ಷರೂ., ಪರಿಶಿಷ್ಟ ಜಾತಿ, ಪಂಗಡದವರಆರೋಗ್ಯದ ಶಸ್ತ್ರಚಿಕಿತ್ಸೆಗೆ (ಪತ್ರಕರ್ತರನ್ನುಒಳಗೊಂಡಂತೆ) 3 ಲಕ್ಷ ರೂ.,ಪೌರಕಾರ್ಮಿಕರ ಸುರಕ್ಷತಾ ಸಾಮಗ್ರಿಗಳಿಗೆ 5 ಲಕ್ಷ ರೂ., ಪೌರಕಾರ್ಮಿಕರಉಪಾಹಾರಕ್ಕೆ 8 ಲಕ್ಷ ರೂ., ಪೌರಕಾರ್ಮಿಕರ ಆರೋಗ್ಯಕ್ಕೆ 2 ಲಕ್ಷ ರೂ.,ಪೌರಕಾರ್ಮಿಕರ ದಿನಾಚರಣೆಗೆ 2.50 ಲಕ್ಷ ರೂ., ನೇರ ಪಾವತಿ ವೇತನಕ್ಕಾಗಿ 95 ಲಕ್ಷ ರೂ., ನಗರದ ಆಸ್ತಿ ತೆರಿಗೆಯಿಂದ 2.95 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.

ಖಾತೆ ವರ್ಗಾವಣೆ ಹಾಗೂ ಇತರೆ ಮೂಲ ಗಳಿಂದ 15 ಲಕ್ಷ ರೂ., ಜಾಹೀರಾತಿನಿಂದ 4 ಲಕ್ಷ ರೂ., ಕಟ್ಟಡಗಳ ಪರವಾನಗಿಯಿಂದ50 ಲಕ್ಷ ರೂ., ರಸ್ತೆಗಳ ಅಗೆತದಿಂದ 25 ಲಕ್ಷರೂ. ಆದಾಯ ಬರುವ ನಿರೀಕ್ಷೆ ಇದೆ ಎಂದು ವಿವರಿಸಿದರು. ಕುಡಿಯುವ ನೀರಿನ ಬವಣೆ ನೀಗಿಸಲು ಸರ್ಕಾರದಿಂದ 25 ಲಕ್ಷ ರೂ. ಅನುದಾನದಲ್ಲಿ 15 ಲಕ್ಷ ರೂ. ಬಿಡುಗಡೆ ಮಾಡಬಹುದೆಂಬ ನಿರೀಕ್ಷೆ ಇದೆ ಎಂದು ಹೇಳಿದರು.

Advertisement

ಆದಾಯ ಹೆಚ್ಚಿಸಿ: ನಗರಸಭಾ ಸದಸ್ಯರಾದ ಸ್ಟುಡಿಯೋ ಚಂದ್ರು, ಜಯರಾಮು,ರಾಜು ಮಾತನಾಡಿ, ಎಂಎಚ್‌ಎಸ್‌ ರಸ್ತೆಯಲ್ಲಿರುವ ವಾಣಿಜ್ಯ ಮಳಿಗೆಯಲ್ಲಿ ಹರಾಜಾಗಿದೆ ಉಳಿದಿರುವ ಮೂರು ಮಗಳಿಗೆ ಮತ್ತು ಕನಕ ವಾಣಿಜ್ಯ ಸಂಕೀರ್ಣದ 22ಮಳಿಗೆಗಳ ಭದ್ರತಾ ಠೇವಣಿ ಕಡಿತಗೊಳಿಸಿ,ಹರಾಜು ಹಾಕಬೇಕು, ಜಮೀನನ್ನು ನಗರಸಭೆಗೆ ಹಸ್ತಾಂತರಿಸಲು ಕೋರಿರುವ ಅರ್ಜಿಗಳನ್ನು ಅನುಮೋದಿಸಿ, ನಗರಸಭೆಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರಸಭೆ ಪ್ರಭಾರ ಪೌರಾಯುಕ್ತ ರಾಘವೇಂದ್ರ, ಉಪಾಧ್ಯಕ್ಷ ಗುಂಡಣ್ಣ, ನಗರ ಸಭೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next