Advertisement

ಕನಕಪುರಕ್ಕೆ ಮೆಡಿಕಲ್‌ ಕಾಲೇಜು ವಿವಾದ: ಸರ್ಕಾರ ಮರು ಆದೇಶ ಹೊರಡಿಸುವ ವಿಶ್ವಾಸದವಿದೆ

10:11 AM Dec 09, 2019 | Team Udayavani |

ಬೆಂಗಳೂರು: ಕನಕಪುರ ಮೆಡಿಕಲ್‌ ಕಾಲೇಜು ಯೋಜನೆಗೆ ಸರ್ಕಾರ ಮರು ಆದೇಶ ನೀಡುವ ವಿಶ್ವಾಸವಿದೆ. ಒಂದು ವೇಳೆ ಆದೇಶ ನೀಡದಿದ್ದರೆ ನಾನು ನನ್ನ ಹೋರಾಟ ಮಾಡುತ್ತೇನೆ. ಹೋರಾಟ ಹೇಗಿರುತ್ತದೆ ಎಂದು ಹೇಳುವುದಿಲ್ಲ, ಮುಂದಿನ ದಿನಗಳಲ್ಲಿ ನೀವೇ ನೋಡುತ್ತೀರಿ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

Advertisement

ಮಾಧ್ಯಮ ಪ್ರತಿನಿಧಿಗಳೊಂದಿಗೆ ಭಾನುವಾರ ಮಾತನಾಡಿದ ಅವರು, ಕನಕಪುರ ಮೆಡಿಕಲ್‌ ಕಾಲೇಜು ವಿಚಾರ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು.

ಕನಕಪುರಕ್ಕೆ ನೀಡಲಾಗಿದ್ದ ಮೆಡಿಕಲ್‌ ಕಾಲೇಜನ್ನು ಮುಖ್ಯಮಂತ್ರಿಯವರು ಹಿಂಪಡೆದ ರೀತಿ ಸರಿಯಿಲ್ಲ. ಅವರಿಗೆ ತಾವು ಮಾಡಿದ್ದು ತಪ್ಪು ಅಂತಾ ಜ್ಞಾನೋದಯವಾಗಿ ಮತ್ತೇ ಕನಕಪುರ ಮೆಡಿಕಲ್‌ ಕಾಲೇಜು ಯೋಜನೆಗೆ ಮರು ಆದೇಶ ಮಾಡುವ ವಿಶ್ವಾಸವಿದೆ. ಇಲ್ಲದಿದ್ದರೆ ಬೇರೆ ವಿಧಿ ಇಲ್ಲದೆ ನಮ್ಮ ಹೋರಾಟ ಮಾಡಬೇಕಾಗುತ್ತದೆ. ಈಗಲೇ ಹೋರಾಟ ಯಾವ ರೀತಿ ಇರುತ್ತೆ ಅಂತಾ ಹೇಳುವುದಿಲ್ಲ. ಯಡಿಯೂರಪ್ಪನವರು ಕೂಡ ಹೋರಾಟ ಮಾಡಿಕೊಂಡೆ ರಾಜಕೀಯದಲ್ಲಿ ಬೆಳೆದವರು. ನಾವು ಅದನ್ನೇ ಮಾಡುತ್ತೇವೆ.

ನಮಗೆ ಹೋರಾಟ ಮಾಡಲು ಸಾವಿರಾರು ಜನರನ್ನು ಕರೆದುಕೊಂಡು ಬರಬೇಕಿಲ್ಲ. ನಮ್ಮ ಭಾಗದ ಶಾಸಕರು, ಎಂಎಲ್‌ಸಿ ಗಳು ಸೇರಿ ಹೇಗೆ ಹೋರಾಟ ಮಾಡಬೇಕು ಅಂತಾ ಗೊತ್ತಿದೆ. ಅದು ಹೇಗಿರುತ್ತದೆ ಎಂಬುದನ್ನು ನೀವು ಕಾದು ನೋಡಿ. ಜನರು ನಮಗೆ ಕೊಟ್ಟಿರುವ ಶಕ್ತಿ ನಮ್ಮಲ್ಲಿ ಇದೆ. ನಮ್ಮ ಹೋರಾಟಕ್ಕೆ ಅಷ್ಟು ಸಾಕು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಅಶ್ವಥ್‌ ನಾರಾಯಣ್‌ಗೆ “ಆಲ್‌ ದಿ ಬೆಸ್ಟ್‌’!
ಉಪಚುನಾವಣೆ ಫ‌ಲಿತಾಂಶ ಬಂದ ನಂತರ ರಾಮನಗರದ ಕ್ಲೀನಿಂಗ್‌ ಕೆಲಸ ಶುರು ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಅಶ್ವಥ್‌ ನಾರಾಯಣ್‌ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, “ಗುಡ್‌…ಅವರಿಗೆ ಒಳ್ಳೆಯದಾಗಲಿ. ರಾಮನಗರದಿಂದ ದೇವೇಗೌಡರು ಮುಖ್ಯಮಂತ್ರಿ ಹಾಗೂ ಪ್ರಧಾನಿ ಆದವರು, ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿ¨ªಾರೆ.

Advertisement

ನಾನು ಕೂಡ ಮಂತ್ರಿ ಆಗಿದ್ದವನು. ನಮ್ಮಿಂದ ಮಾಡಲು ಸಾಧ್ಯವಾಗದನ್ನು ಅವರು ಮಾಡುತ್ತೇನೆ ಅಂತಿ¨ªಾರೆ. ಖಂಡಿತಾ ಮಾಡಲಿ. ಅದನ್ನು ನಾವು ಸ್ವಾಗತಿಸಬೇಕು ಹಾಗೂ ಪೋ›ತ್ಸಾಹ ನೀಡಬೇಕು. ಒಳ್ಳೆ ಕೆಲಸಕ್ಕೆ ನಾವು ವಿರೋಧ ಮಾಡುವುದಿಲ್ಲ. ಅವರಿಗೆ ಆಲ್‌ ದಿ ಬೆಸ್ಟ್‌ ಹೇಳುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.

ಮಹಿಳಾ ಸುರಕ್ಷತೆ ಬಗ್ಗೆ ಆಂದೋಲನ ಆಗಬೇಕು:
ಉನ್ನಾವೋ ಅತ್ಯಾಚಾರ ವಿಚಾರದಲ್ಲಿ ಉತ್ತರ ಪ್ರದೇಶದ ಸರ್ಕಾರ ಎಡವಿರುವ ಬಗ್ಗೆ ಈಗಾಗಲೇ ಪ್ರಿಯಾಂಕ ಗಾಂಧಿ ಹಾಗೂ ಅಖೀಲೇಶ್‌ ಯಾದವ್‌ ಅವರು ಪ್ರಸ್ತಾಪ ಮಾಡಿ¨ªಾರೆ. ಯಾವುದೇ ಸರ್ಕಾರ ಇರಲಿ ಬಹಳ ಪಾರದರ್ಶಕವಾಗಿರಬೇಕು. ಇದು ಮಾನವೀಯತೆ ಹಾಗೂ ಭಾರತದ ಗೌರವದ ಪ್ರಶ್ನೆ. ಈ ವಿಚಾರದಲ್ಲಿ ಯಾವುದೇ ಪಕ್ಷದ ಸರ್ಕಾರ ವಿಫ‌ಲವಾಗಬಾರದು. ಬಿಜೆಪಿ ಸರ್ಕಾರ ವಿಫ‌ಲವಾಗಿದೆ. ನಾವು ಈ ವಿಚಾರವಾಗಿ ದೊಡ್ಡ ಆಂದೋಲನ ಮಾಡಬೇಕು. ಇದು ಕೇವಲ ಪಕ್ಷಕ್ಕೆ ಅಥವಾ ಸರ್ಕಾರಕ್ಕೆ ಸಂಬಂಧಿಸಿದ ವಿಚಾರವಲ್ಲ. ದೇಶಾದ್ಯಂತ ಯುವಕರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಪ್ರಕರಣವನ್ನು ನಾನು ಖಂಡಿಸುತ್ತೇನೆ. ಇಂತಹ ವಿಚಾರದಲ್ಲಿ ಸಂತ್ರಸ್ತೆಗೆ ಬೆಂಬಲವಾಗಿ ನಿಲ್ಲಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು, ನ್ಯಾಯ ದೊರೆಯಬೇಕು ಎಂದು ಡಿ.ಕೆ. ಶಿವಕುಮಾರ್‌ ಅಭಿಪ್ರಾಯಪಟ್ಟರು.

ಬಿಜೆಪಿ 13 ಅಲ್ಲ 15 ಗೆಲ್ಲಬೇಕು: ಡಿಕೆಶಿ ವ್ಯಂಗ್ಯ
ಉಪ ಚುನಾವಣೆಯಲ್ಲಿ ಬಿಜೆಪಿ 13 ಸ್ಥಾನ ಗೆಲ್ಲುತ್ತದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಲಾ ಒಂದು ಸ್ಥಾನ ಗೆಲ್ಲುತ್ತದೆ ಎಂಬ ಮುಖ್ಯಮಂತ್ರಿ ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಕ್ತಿಯಿಸಿದ ಡಿ.ಕೆ. ಶಿವಕುಮಾರ್‌, ‘ಬಿಜೆಪಿ 13 ಗೆಲ್ತಾರೆ ಅಂತಾ ಯಾರು ಹೇಳಿದ್ದು, ಯಡಿಯೂರಪ್ಪನವರು ಭ್ರಮೆಯಲ್ಲಿ ಹಾಗೆ ಹೇಳಿ¨ªಾರೆ. ಬಿಜೆಪಿ ಎಲ್ಲಾ 15ಕ್ಕೆ 15ರಲ್ಲೂ ಗೆಲ್ಲುತ್ತದೆ. 13 ಗೆದ್ದು ಎರಡು ಕ್ಷೇತ್ರಗಳಲ್ಲಿ ಮಾತ್ರ ಅವರಿಗೆ ಯಾಕೆ ಮೋಸ ಮಾಡಬೇಕು. 15 ಗೆಲ್ಲುತ್ತೇವೆ ಅಂತಾ ತಾನೇ ನಿಲ್ಲಿಸಿರೋದು. ಮಂತ್ರಿ ಮಾಡುತ್ತೇವೆ ಅಂತಾ ಹೇಳಿ ತಾನೇ 15 ಮಂದಿಗೆ ಟಿಕೆಟ್‌ ಕೊಟ್ಟು ನಿಲ್ಲಿಸಿರೋದು. 13 ಜನರನ್ನು ಗೆಲ್ಲಿಸಿಕೊಂಡು ಇನ್ನಿಬ್ಬರಿಗೆ ಯಾಕೆ ರಾಜಕೀಯ ಭವಿಷ್ಯದಲ್ಲಿ ಮೋಸ ಮಾಡ್ತಾರೆ? ಮೊದಲೇ ಇಬ್ಬರಿಗೆ ವಂಚನೆಯಾಗಿದೆ. ಈಗ ಇನ್ನಿಬ್ಬರಿಗೆ ವಂಚನೆ ಯಾಕೆ? ಬಿಜೆಪಿ 15 ಗೆದ್ದೇ ಗೆಲ್ಲುತ್ತಾರೆ ಅಂತಾ ನಾನು ಅಂದುಕೊಂಡಿದ್ದೇನೆ’ ಎಂದು ವ್ಯಂಗ್ಯವಾಡಿದರು.

“ದೆಹಲಿಯಲ್ಲಿ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ನಾವಿಬ್ಬರು ಏನೇನು ಅನುಭವಿಸಿದ್ದೇವೆ ಅಂತಾ ನಮ್ಮಿಬ್ಬರಿಗೆ ಮಾತ್ರ ಗೊತ್ತು. ಮುಂದೆ ಸಮಯ ಬಂದಾಗ ಅವುಗಳ ಬಗ್ಗೆ ದಾಖಲೆಯೊಂದಿಗೆ ಮಾತಾಡುತ್ತೇನೆ. ತಿಹಾರ್‌ ಜೈಲಲ್ಲಿ ನಾವು ಒಬ್ಬರ ಜತೆ ಒಬ್ಬರು ಮಾತನಾಡಲು ಅವಕಾಶ ಮಾಡಿಕೊಡುತ್ತಿರಲಿಲ್ಲ. ಆಸ್ಪತ್ರೆಗೆ ತೆರಳುವಾಗ, ವೈದ್ಯರನ್ನು ಭೇಟಿ ಮಾಡುವಾಗ ಹಾಯ…, ಹಲೋ ಹೇಳುತ್ತಿ¨ªೆ. ಹೀಗಾಗಿ ಈಗ ಅವರನ್ನು ಭೇಟಿ ಮಾಡಿ ನಮ್ಮ ಮುಂದಿನ ಹೋರಾಟ, ನಡೆಗಳ ಬಗ್ಗೆ ಚರ್ಚಿಸಿದ್ದೇನೆ. ಈ ವಿಚಾರದಲ್ಲಿ ನಾನು ಅಷ್ಟೊಂದು ಪಂಡಿತನಲ್ಲ ಹೀಗಾಗಿ ಅವರಿಂದ ಕೆಲವು ಸಲಹೆ ಪಡೆದೆ, ಜೊತೆಗೆ ನಾನು ಕೊಡಬೇಕಾದ ಸಲಹೆ ಕೊಟ್ಟೆ.’
– ಡಿ.ಕೆ. ಶಿವಕುಮಾರ್‌, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next