Advertisement

ಕೊರಟಗೆರೆ ತಾಲೂಕು ಕಚೇರಿಯಲ್ಲಿ ಕನಕದಾಸ, ಒನಕೆ ಓಬವ್ವ ಜಯಂತಿ

05:48 PM Nov 11, 2022 | Team Udayavani |

ಕೊರಟಗೆರೆ: ಕನಕದಾಸರ ಸಾಮಾಜಿಕ ಸಮಾನತೆಯ ತತ್ವ ಸಿದ್ದಾಂತದ ಕೀರ್ತನೆಗಳು, ಮತ್ತು ಒನಕೆ ಓಬವ್ವರ ದೇಶ ಪ್ರೇಮ, ಪರಾಕ್ರಮ, ಶೌರ್ಯ ವಿಶ್ವಕ್ಕೆ ಮಾದರಿ ಎಂದು ತಹಶೀಲ್ದಾರ್ ನಾಹಿದಾ ಜಮ್ ಜಮ್ ತಿಳಿಸಿದರು.

Advertisement

ಪಟ್ಟಣದ ತಾಲೂಕು ಕಚೇರಿಯಲ್ಲಿ ಕನಕದಾಸರ 535 ನೇ ಜಯಂತಿ ಮತ್ತು ಸರ್ಕಾರದ ಮೊದಲ ಒನಕೆ ಓಬವ್ವ ಜಯಂತಿಯನ್ನು ಆಚರಿಸಿ ಮಾತನಾಡಿ, ಕನಕದಾಸರ ಜೀವನ ಚರಿತ್ರೆ ನಮಗೆಲ್ಲಾ ಆದರ್ಶವಾಗಿದೆ, ಅವರು ಸಮಾಜದಲ್ಲಿ ಜಾತಿ ಪದ್ದತಿ, ವರ್ಣ ಬೇಧ ನೀತಿ, ಅಸ್ಪೃಶ್ಯತೆ ವಿರುದ್ದ ಕೀರ್ತನೆ ಮುಖಾಂತರ ಸಮಾಜದಲ್ಲಿ ಅರಿವು ಮೂಡಿಸಿದವರು, ದೇವರಲ್ಲಿ ನಿರ್ಮಲ ಭಕ್ತಿ ಇದ್ದರೆ ಸಾಕು ಒಲಿಯುತ್ತಾರೆ ಎಂದು ತೋರಿಸಿ ಕೊಟ್ಟಿರುವುದು ಉಡುಪಿಯಲ್ಲಿ ಶ್ರೀ ಕೃಷ್ಣರ ದೇವಾಲಯದಲ್ಲಿ ಸಹ ಸಾಕ್ಷಿಯಾಗಿದೆ. ಇದರಿಂದಲೇ ಕನಕದಾಸರು ದಾಸ ಶ್ರೇಷ್ಟರಾಗಿದ್ದಾರೆ. ಅದೇ ರೀತಿ ಚಿತ್ರದುರ್ಗದ ಒನಕೆ ಓಬ್ಬವ್ವ ತೋರಿಸದ ಶೌರ್ಯ ಬೇರೆ ಯಾರು ತೋರಲಾರರು, ಯಾರಿಗೂ ತಿಳಿಯದೆ ತಕ್ಷಣ ಬಂದ ಶತ್ರು ಸೈನಿಕರ ಬಗ್ಗೆ ಗಂಡನಿಗೆ ಹೇಳದೆ, ಮನೆಯಲ್ಲಿ ಇದ್ದ ಒನಕೆಯನ್ನೇ ಆಯುಧವನ್ನಾಗಿ ಮಾಡಿಕೊಂಡು ತನ್ನ ರಾಜ್ಯ ರಕ್ಷಣೆಗೆ ಹೋರಾಡಿ ತಾಯಿ ನಾಡಿಗಾಗಿ ಮಡಿದ ಓಬವ್ವ ಸ್ರೀ ಕುಲದ ಸ್ವಾಭಿಮಾನದ ಸಂಕೇತವಾಗಿದ್ದಾರೆ, ಅವರ ಜಯಂತಿಯನ್ನು ಸರ್ಕಾರ ಜಾರಿಗೆ ತಂದಿರುವುದು ನಾವೆಲ್ಲರೂ ಧನ್ಯವಾದ ತಿಳಿಸಿಬೇಕಿದೆ ಎಂದರು.

ತಾಲೂಕು ಕುರುಬ ಸಂಘದ ಅದ್ಯಕ್ಷ ಮೈಲಾರಪ್ಪ ಮಾತನಾಡಿ ಕನಕದಾಸರ ಕೃತಿ ಕೀರ್ತನೆಗಳು ಎಲ್ಲಾ ಕಾಲದ ಜನರಿಗೆ ಮಾದರಿ ಎಂದರು. ತಾಲೂಕು ಕನಕ ಯುವ ಸೇನೆ ಅಧ್ಯಕ್ಷ ರಂಗಧಾಮಯ್ಯ ಮಾತನಾಡಿ ಕನಕದಾಸರು ಒಂದು ವರ್ಗಕ್ಕೆ ಸೀಮಿತವಲ್ಲ. ನೊಂದ ಶೋಷಿತರ ಪರ ಹೋರಾಡಿದವರಾಗಿದ್ದಾರೆ ಎಂದರು. ಕಾಳಿದಾಸ ವಿದ್ಯಾವರ್ಧಕ ಸಂಘದ ಜಿಲ್ಲಾ ನಿರ್ದೇಶಕ ನಾಗಭೂಷಣ್ ಮಾತನಾಡಿ ಕನಕದಾಸರು ೫೩೫ ವರ್ಷಗಳಿಂದ ಜನರ ಮನಸ್ಸಿನಲ್ಲಿ ಇದ್ದು ಅವರ ತತ್ವ ಸಿದ್ದಾಂತ ನಮಗೆ ದಾರಿ ದೀಪ ಎಂದರು.

ತಾಲೂಕು ಸಂಗೋಳ್ಳಿ ರಾಯಣ್ಣ ಯುವ ವೇದಿಕೆ ಕಾರ್ಯದರ್ಶಿ ನಂಜುಂಡಯ್ಯ ಮಾತನಾಡಿ ಕನಕ ದಾಸರ ಜೀವನ ಚರಿತ್ರೆ ಮನುಕುಲದ ಎಲ್ಲಾರಿಗೂ ಅದರ್ಶವಾಗಿದೆ, ಬ್ರಾಹ್ಮಣರ ಜಾತಿ ಕಿರುಕುಳ ಮದ್ಯೆ ಸಮಾನತೆಗೆ ಹೋರಾಡಿದ ಮಹಾನ್ ಚೇತನ ಎಂದರು.

ತಾಲೂಕು ಛಲವಾದಿ ಸಂಘದ ಕಾರ್ಯದರ್ಶಿ ಪಟ್ಟರಾಜು ಮಾತನಾಡಿ ಒನಕೆ ಓಬವ್ವ ದೇಶದ ಸಮಸ್ತ ಎಲ್ಲಾ ನಾರಿಯರಿಗೆ ಆದರ್ಶವಾಗಿದ್ದಾರೆ, ಹೈದರಾಲಿ ಸೈನಿಕರು ಮೋಸದಿಂದ ಚಿತ್ರದುರ್ಗದ ಕೋಟೆಗೆ ನುಸುಳಿದಾಗ ಯಾವುದೇ ಪೂರ್ವ ತಯಾರಿ ಇಲ್ಲದೆ ಕೈಗೆ ಸಿಕ್ಕ ಒನಕೆಯಲ್ಲೇ ಶತ್ರುಗಳನ್ನು ನಾಶ ಮಾಡಿ ಕೋಟೆ ರಕ್ಷಿದ ಓಬವ್ವ ಜಯಂತಿಯನ್ನು ಸರ್ಕಾರ ಮಾಡುತ್ತಿರುವುದು ಹರ್ಷ ತಂದಿದೆ ಎಂದರು.

Advertisement

ಕಾರ್ಯಕ್ರಮದಲ್ಲಿ ಜಿ.ಪಂ. ಎ.ಇ,ಇ, ರವಿಕುಮಾರ್, ಪಶುವೈದ್ಯಾಧಿಕಾರಿ ಡಾ, ಸಿದ್ದನ ಗೌಡ, ಪ.ಪಂ. ಮುಖ್ಯಾಧಿಕಾರಿ ಭಾಗ್ಯಮ್ಮ, ಸಮಾಜಕಲ್ಯಾಣಧಿಕಾರಿ ಉಮಾದೇವಿ, ಕಂದಾಯ ಇಲಾಖೆಯ ರಂಗನಾಥ್, ಪ್ರತಾಪ್, ಬಸವರಾಜು, ನಕುಲ್, ಛಲವಾದಿ ಸಂಘದ ಅದ್ಯಕ್ಷ ಹನುಮಮೂರ್ತಿ, ಉಪಾದ್ಯಕ್ಷ ಹನುಮಂತ, ಕುರುಬ ಸಂಘದ ಗಂಗರಾಜು, ಲಕ್ಷೀಪ್ರಸಾದ್, ಅನಂದ್, ರಂಗರಾಜು, ಮಧುನಂದನ್, ಶಿವಣ್ಣ ಮುಂತಾದವರು ಹಾಜರಿದ್ದರು. ನಿವೃತ್ತ ಶಿಕ್ಷಕ ಕೃಷ್ಣಾಚಾರ್ ಕನಕದಾಸರ ಕೀರ್ತನೆ ಹಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next