Advertisement

ನಾಡಿನ ಕೀರ್ತಿ ಹೆಚ್ಚಿಸಿದ ಕನಕದಾಸರು

01:14 PM Dec 04, 2020 | Suhan S |

ಚಿಕ್ಕೋಡಿ: ವಿಶ್ವಾಸಕ್ಕೆ ಮತ್ತೂಂದು ಹೆಸರು ಕುರುಬ ಸಮುದಾಯ ಎನ್ನುವುದು ಜನಜನಿತವಾಗಿದೆ. ಕುರುಬರನ್ನು ಎಸ್‌ಟಿಗೆ ಸೇರಿಸುವ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಎಸ್‌ಟಿಗೆ ಸೇರಿಸುವ ಕುರಿತುಮುಖ್ಯಮಂತ್ರಿಗಳ ಗಮನಕ್ಕೆ ತಂದು ಮೀಸಲಾತಿ ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುತ್ತದೆ ಎಂದು ವಿಧಾನ ಪರಿಷತ್‌ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

Advertisement

ಇಲ್ಲಿನ ಮಿನಿ ವಿಧಾನಸೌಧ ಸಭಾ ಭವನದಲ್ಲಿತಾಲೂಕಾಡಳಿತ. ತಾಲೂಕಾ ಪಂಚಾಯತ್‌.ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂತ ಶ್ರೇಷ್ಠ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

15 ನೆಯ ಶತಮಾನದಲ್ಲಿ ದಾಸ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ಕೊಟ್ಟವರು ಕನಕದಾಸರು. ಮಾಡುವ ಕೆಲಸ ಸಮಾಜಮುಖೀಯಾದರೆ ಅವರು ಶ್ರೇಷ್ಠರಾಗುತ್ತಾರೆಎನ್ನುವುದಕ್ಕೆ ಕನಕದಾಸರು ಆದರ್ಶವಾಗಿದ್ದಾರೆ. ಜಯಂತಿಗಳು ಕೇವಲ ಮೆರವಣಿಗೆ ಮತ್ತು ಆಚರಣೆಗೆಸಿಮೀತವಾಗದೆ ಅವರ ತತ್ವಾದರ್ಶ ನಮ್ಮ ಜೀವನದಲ್ಲಿಅಳವಡಿಸಿಕೊಂಡು ಉತ್ತಮ ಜೀವನ ರೂಪಿಸುವಲ್ಲಿ ಮುನ್ನಡೆಯಬೇಕು. ವರ್ಣ ಮತ್ತು ವರ್ಗ ರಹಿತ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಸಮಾಜದ ಒಳಿತಿಗಾಗಿ ಹೋರಾಡಿದ ಸಂತ ಕನಕದಾಸರು ನಾಡಿನ ಕೀರ್ತಿ ಹೆಚ್ಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಬೃಹತ್‌ ಕಾರ್ಯಕ್ರಮ ಆಯೋಜನೆ ಮಾಡಿ ಕನಕದಾಸರ ಸಾಹಿತ್ಯದ ಸಂದೇಶ ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಎಲ್ಲರೂ ಕೂಡಿ ಮಾಡೋಣ ಎಂದರು.

ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ ಮತ್ತು ಗ್ರಾಮ ಲೆಕ್ಕಾಧಿಕಾರಿ ವಿಠuಲ ಢವಳೇಶ್ವರ ಮಾತನಾಡಿದರು. ಪುರಸಭೆ ಉಪಾಧ್ಯಕ್ಷ ಸಂಜಯ ಕವಟಗಿಮಠ, ತಹಶೀಲ್ದಾರ ಸುಭಾಷ ಸಂಪಗಾವಿ, ತಾಪಂ ಇಒ ಸಮೀರ ಮುಲ್ಲಾ, ಪುರಸಭೆ ಸದಸ್ಯರಾದ ನಾಗರಾಜ

Advertisement

ಮೇಧಾರ, ವಿಜಯಭಾಸ್ಕರ ಇಟಗೋನಿ, ಬೀರಾ ಬನ್ನೆ, ಎಚ್‌.ಎಸ್‌.ನಸಲಾಪೂರೆ, ಎಂ.ಕೆ.ಪೂಜೇರಿ, ಶಿವು ಮರ್ಯಾಯಿ, ಮಾಳು ಕೋರೆ, ಡಾ.ವಿಠ್ಠಲ ಶಿಂಧೆ, ಆರ್‌ ಟಿಓ ಭೀಮನಗೌಡಾ ಪಾಟೀಲ, ಬಿ.ಎ.ಮೆಕನಮರಡಿ, ಕೆ.ಬಿ.ತಳವಾರ, ಡಾ. ಸುಂದರ ರೋಗಿ ಮುಂತಾದವರು ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಅಧಿಕಾರಿ ಮಲ್ಲಿಕಾರ್ಜುನ ಉಳ್ಳಾಗಡ್ಡಿ ಸ್ವಾಗತಿಸಿದರು. ನಾಗೇಶಹನುಮಂತಗೋಳ ನಿರೂಪಿಸಿದರು. ಎಸ್‌.ಆರ್‌ .ದೇಸಾಯಿ ವಂದಿಸಿದರು.

ತೆಲಸಂಗ :

ತೆಲಸಂಗ: ತಮ್ಮ ಸಾಹಿತ್ಯದ ಮೂಲಕ ಎಲ್ಲ ಜನಾಂಗದವರನ್ನು ಒಗ್ಗೂಡಿಸಿ ಜ್ಞಾನದ ಮಾರ್ಗವನ್ನು ತೋರಿಸಿದ ಕನಕದಾಸರ ಪದಗಳು ರಾಷ್ಟ್ರದ ಏಕತೆಗೆ ಶಕ್ತಿ ತುಂಬಿವೆ ಎಂದು ತಾಪಂ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ ಹೇಳಿದರು.

ಗ್ರಾಮದ ಕನಕದಾಸ ವೃತ್ತದಲ್ಲಿ ಕನಕ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿ, ಕನಕರ ಬೋಧನೆಗಳನ್ನು

ಜೀವನಲ್ಲಿ ಅಳವಡಿಸಿಕೊಂಡು ಜೀವನ ಸಾರ್ಥಕ ಮಾಡಿಕೊಳ್ಳೋಣ ಎಂದು ಕರೆ ನೀಡಿದರು. ನಿವೃತ್ತ ಸೈನಿಕ ಅಮಸಿದ್ದ ಟೋಪನಗೋಳ ಮಾತನಾಡಿದರು. ಡಾ.ಎಸ್‌.ಐ.ಇಂಚಗೇರಿ, ಹಿರಿಯರಾದ ಮಾಯಪ್ಪ ನಿಡೋಣಿ, ಬಿ.ಎಚ್‌.ಶೆಲ್ಲೆಪ್ಪಗೋಳ, ಸೆ„ಬಣ್ಣ ಶೆಲ್ಲೆಪ್ಪಗೋಳ, ಲಕ್ಷ್ಮಣ ಶೆಲ್ಲೆಪ್ಪಗೋಳ, ನ್ಯಾಯವಾದಿ ಅಮೋಘ ಖೊಬ್ರಿ, ರಾಮು ನಿಡೋಣಿ, ಭರಮಣ್ಣ ಸೇಗಾರ, ವಿಠಲ ಶೆಲ್ಲೆಪ್ಪಗೋಳ, ಮುದಕಣ್ಣ ಪೂಜಾರಿ, ಗೋಪಾಲ ಶೆಲ್ಲೆಪ್ಪಗೋಳ, ಧರೆಪ್ಪ ಮಾಳಿ, ಆನಂದ ಥೆ„ಕಾರ, ಬಸವಾರಾಜ ಬಿಜ್ಜರಗಿ, ಮುನ್ನಾ ಕರಜಗಿ, ಶಿವಯೋಗಿ ಹತ್ತಿ, ಕಾಸಪ್ಪ ಹಳ್ಳದ, ಮಾಳಪ್ಪ ಇತರರಿದ್ದರು.

ಅಡಹಳ್ಳಿ :

ಅಡಹಳ್ಳಿ: ಕನಕದಾಸರು ಒಂದು ಜಾತಿ, ಮತ, ಪಂಥ, ಪ್ರದೇಶಕ್ಕೆ ಸಿಮೀತವಾಗಲಾರರು. ಅವರು ಸರ್ವಜನಾಂಗಕ್ಕೆ ಆದರ್ಶಪ್ರಾಯ ರಾಗಿದ್ದಾರೆ ಎಂದು ಗ್ರಾ.ಪಂ.ಮಾಜಿ ಅಧ್ಯಕ್ಷ ಈರಗೌಡ ಪಾಟೀಲ ಹೇಳಿದರು.

ಅವರು ಗ್ರಾಮದ ಕನಕ ನಗರದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸುನೀಲ ಕೆಂಚಣ್ಣವರ ಹಾಗೂಸೂರ್ಯಕಾಂತ ಡಂಬಳಕರ ಕನಕದಾಸರ ಭಾವಚಿತ್ರದ ಪೂಜೆ ನೆರವೇರಿಸಿದರು. ಶ್ರೀಕಾಂತ ಪತ್ತಾರ, ಲಕ್ಷ್ಮಣ ಕೆಂಚಣ್ಣವರ, ಮಾಳಪ್ಪ ಪೂಜಾರಿ, ಜ್ಯೋತಿ ನಾಗಠಾಣ, ಮಹಾದೇವ ಪಾಟೀಲ, ಕರೇಪ್ಪ ಹಾದಿಮನಿ, ರಾಮು ಬೀಜರಗಿ, ಜಗದೀಶ ಸನದಿ, ಕಲ್ಮೇಶ ಗುಡಿಮನಿ, ಆನಂದ ಧೂಳಶೇಟ್ಟಿ, ಅಣಪ್ಪ ಹಾಲಳ್ಳಿ, ಅಪ್ಪಸಾಬ ಸನದಿ, ಶಂಕರ ನಾವಿ, ಮುತ್ತಪ್ಪ ಮಾಳಿ, ಮಹೇಶ ಹಾದಿಮನಿ, ಹನಮಂತ ಪೂಜಾರಿ, ಸೋಮನಿಂಗ ಸನದಿ, ಬಸಪ್ಪ ಹಾದಿಮನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next