Advertisement

ಕನಕದಾಸ ಕವಿ ಮಾತ್ರವಲ್ಲ, ದಾರ್ಶನಿಕ: ಕಾ. ತ. ಚಿಕ್ಕಣ್ಣ

07:45 AM Aug 14, 2017 | Harsha Rao |

ಉಡುಪಿ: ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕನಕದಾಸ ಕೀರ್ತನಕಾರ, ಭಕ್ತ, ದಾಸ ಎಂದಷ್ಟೇ ಪರಿಗಣಿಸಲಾಗಿದೆ. ಆದರೆ 21ನೇ ಶತಮಾನದಲ್ಲಿ ಕನಕದಾಸರು ಕವಿ, ದಾರ್ಶನಿಕರಾಗಿದ್ದಾರೆ. ಭಕ್ತಿಯನ್ನು ವ್ಯಾಪಾರ, ವ್ಯವಹಾರ, ಸ್ವಾರ್ಥದ ರೀತಿಯಲ್ಲಿ ನೋಡದೆ ಮನುಷ್ಯ ಸಂಬಂಧದ ಮೌಲ್ಯಗಳನ್ನಿಟ್ಟುಕೊಂಡು ಸಾಹಿತ್ಯ ರಚನೆ ಮಾಡಿದ್ದಾರೆ ಎಂದು ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ. ಚಿಕ್ಕಣ್ಣ ಹೇಳಿದರು.

Advertisement

ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಸಂಶೋಧನಾ ಕೇಂದ್ರ ಬೆಂಗಳೂರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಣಿಪಾಲ ವಿ.ವಿ.ಯ ಕನಕದಾಸ ಅಧ್ಯಯನ ಸಂಶೋಧನ ಪೀಠದ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ತಳ ಸಮುದಾಯಗಳ ಸಾಂಸ್ಕೃತಿಕ ಸಂಚಲನ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

“ವಿದ್ಯಾರ್ಥಿಗಳೇ ಮಾತಾಡಿ’
ಭಕ್ತಿ ಜಡತ್ವದ ಸ್ಥಿತಿಗೆ ತಲುಪಿದ‌ ಮಧ್ಯಕಾಲೀನ ಯುಗದಲ್ಲಿ ಸಂತ ಪರಂಪರೆ ಭಕ್ತಿ ಚಳವಳಿಯನ್ನು ಹುಟ್ಟು ಹಾಕಿತು. ಆಗ ಪ್ರಾರಂಭವಾದ ಭಕ್ತಿ ಚಳವಳಿ ಕನಕದಾಸ, ಪುರಂದರದಾಸರನ್ನೊಳಗೊಂಡು ಈಗಲೂ ಮುಂದುವರಿದಿದೆ ಎಂದ ಚಿಕ್ಕಣ್ಣ ಅವರು, ಕನಕ ಸಾಹಿತ್ಯವನ್ನು 15 ಭಾಷೆಗಳಿಗೆ ಅನುವಾದಿಸಿ ಕರ್ನಾಟಕ ತಣ್ತೀಪದದ ವತಿಯಿಂದ ಸಮಗ್ರ ಸಾಹಿತ್ಯವನ್ನು ಹೊರತರಲಾಗುತ್ತದೆ. ವಿದ್ಯಾರ್ಥಿಗಳು ಅವರಲ್ಲಿರುವ ಅನು ಮಾನಗಳನ್ನು ಮುಕ್ತವಾಗಿ ಕೇಳಿದಾಗ ಮಾತ್ರ ವರ್ತಮಾನದ ತಲ್ಲಣಗಳ ಬೇಗುದಿಯನ್ನು ನಿವಾರಿಸಲು ಸಾಧ್ಯ. ಅದಕ್ಕಾಗಿ ಯುವಜನತೆ ಮಾತನಾಡಬೇಕಿದೆ ಎಂದರು.

ಆಚರಣೆಗಳ ಅರ್ಥ ತಿಳಿದುಕೊಳ್ಳಿ
ಮಣಿಪಾಲ ಜನರಲ್‌ ಎಜುಕೇಶನ್‌ ಅಕಾಡೆಮಿಯ ಆಡಳಿತಾ ಧಿಕಾರಿ ಪ್ರೊ| ಶಾಂತಾರಾಮ್‌ ಮಾತನಾಡಿ, ಸಮಾಜದಲ್ಲಿರುವ ಪ್ರತಿಯೊಂದು ಜಾತಿ-ಪಂಗಡಗಳಲ್ಲಿ ಹಲವು ಪರಂಪರೆಗಳಿವೆ. ಯುವಜನತೆ ಈ ಎಲ್ಲ ಆಚರಣೆಗಳ ಅರ್ಥವನ್ನು ತಿಳಿದುಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ಅವುಗಳ ಅಂಧಾಚರಣೆ ಮಾತ್ರವಲ್ಲ ಕಾಟಾಚಾರಕ್ಕೆ ಆಚರಣೆ ಮಾಡಿದಂತಾಗುತ್ತದೆ. ಆ ರೀತಿ ಆಗಬಾರದು ಎಂದಾದರೆ ಆಚರಣೆಗಳು, ಪರಂಪರೆಯ ಹಿನ್ನೆಲೆ ಅರ್ಥಗಳನ್ನು ತಿಳಿದುಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ವಿ.ವಿ.ಯ ಸಹ ಕುಲಾ ಧಿಪತಿ ಡಾ| ಎಚ್‌.ಎಸ್‌. ಬÇÉಾಳ್‌ ಮಾತನಾಡಿ, ನಮ್ಮ ಹಿಂದಿನ ಆಚರಣೆ, ಸಂಸ್ಕೃತಿ, ಕಲೆಯನ್ನು ಯುವ ಜನಾಂಗಕ್ಕೆ ತಿಳಿಸಿಕೊಟ್ಟಾಗ ಮಾತ್ರ ಅದನ್ನು ಉಳಿಸುವ ಜತೆಗೆ ಬೆಳೆಸಲು ಸಾಧ್ಯ ಎಂದರು.

Advertisement

ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ| ಕುಸುಮಾ ಕಾಮತ್‌ ಉಪಸ್ಥಿತರಿದ್ದರು. ಸಂಶೋಧನ ಪೀಠದ ಸಂಯೋಜನಾ ಧಿಕಾರಿ ಪ್ರೊ| ವರದೇಶ ಹಿರೇಗಂಗೆ ಸ್ವಾಗತಿಸಿದರು. ಸುಪ್ರೀತಾ ಡಿ.ಎಸ್‌. ಕಾರ್ಯಕ್ರಮ ನಿರೂಪಿಸಿದರು. ಸಹ ಸಂಯೋಜನಾಧಿ ಕಾರಿ ಡಾ| ಅಶೋಕ ಆಳ್ವ  ವಂದಿಸಿದರು.

ಧರ್ಮದ ಆಭರಣಗಳಿವು
ಕೇವಲ ದೇವರನ್ನು ಇಟ್ಟುಕೊಂಡು ಪೂಜಿಸುವುದು ಧರ್ಮವಲ್ಲ. ದಯೆ, ಪ್ರೀತಿ, ಕರುಣೆ, ಅಸಹಾಯಕರಿಗೆ ನೆರವು ನೀಡುವುದು ನಿಜವಾದ ಧರ್ಮ. ಇದುವೇ ಧರ್ಮದ ಆಭರಣಗಳು. ಭಕ್ತಿ, ಧರ್ಮ, ರಾಷ್ಟ್ರೀಯತೆ ವ್ಯಕ್ತಿಗತವಾಗದೇ ಅದು ಸಾರ್ವತ್ರಿಕವಾದಾಗ ಮನುಷ್ಯ-ಮನುಷ್ಯರ ನಡುವಿನ ಸಂಬಂಧ ಗಟ್ಟಿಯಾಗುತ್ತದೆ. ಈಗಿನ ಜನರ ಮನಃಸ್ಥಿತಿ ಹೇಗೆಂದರೆ ಕಿಟಕಿ, ಬಾಗಿಲು ಮುಚ್ಚಿ ಬೆಳಕಿಗಾಗಿ ತಡಕಾಡುತ್ತಿದ್ದೇವೆ. ಆದರೆ ಕೋಣೆಗಳನ್ನು ತೆರೆದಾಗ ಮಾತ್ರ ಹೊಸ ಆಲೋಚನೆ ಬರಲು ಸಾಧ್ಯ. ಹಾಗೆಯೇ ನಮ್ಮ ಮನಸ್ಸನ್ನು ಕೂಡ ತೆರೆದು ನೋಡಿ ಎಂದು ಚಿಕ್ಕಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next