Advertisement

ಕನಕನ ನಾಯಕಿ ಮಾನ್ವಿತಾ

12:32 PM Mar 09, 2017 | Team Udayavani |

ದುನಿಯಾ ವಿಜಯ್‌ ನಾಯಕರಾಗಿರುವ “ಕನಕ’ ಚಿತ್ರಕ್ಕೆ ಮುಹೂರ್ತವಾಗಿದ್ದು, ಒಂದ ಹಂತದ ಚಿತ್ರೀಕರಣ ಮುಗಿದಿದ್ದು, ಮಧ್ಯದಲ್ಲಿ ಫೋಟೋಶೂಟ್‌ ಸಹ ಆಗಿದ್ದು ಗೊತ್ತಿರುವ ವಿಷಯವೇ. ಇಷ್ಟೆಲ್ಲಾ ಆಗುತ್ತಿದ್ದರೂ ಚಿತ್ರಕ್ಕೆ ನಾಯಕಿಯ ಆಯ್ಕೆ ಮಾತ್ರ ಆಗಿರಲಿಲ್ಲ. ನಾಯಕಿ ಯಾರಾಗಬಹುದು ಎಂಬ ಪ್ರಶ್ನೆಗೆ ಎರಡ್ಮೂರು ಹೆಸರುಗಳು ಕೇಳಿ ಬರುತ್ತಿದ್ದವಾದರೂ, ಯಾವುದೂ ಪಕ್ಕಾ ಆಗಿರಲಿಲ್ಲ. ಈಗ ನಿರ್ದೇಶಕ ಆರ್‌. ಚಂದ್ರು, ಮಾನ್ವಿತಾ ಹರೀಶ್‌ ಅವರನ್ನು ಚಿತ್ರದ ನಾಯಕಿಯನ್ನಾಗಿ ಫಿಕ್ಸ್‌ ಮಾಡಿದ್ದಾರೆ.

Advertisement

ಹೌದು, “ಕನಕ’ ಚಿತ್ರದ ನಾಯಕಿಯಾಗಿ ಮಾನ್ವಿತಾ ಹರೀಶ್‌ ಆಯ್ಕೆಯಾಗಿದ್ದಾರೆ. ಸದ್ಯಕ್ಕೆ ಶಿವರಾಜಕುಮಾರ್‌ ಅವರ “ಟಗರು’ ಚಿತ್ರಕ್ಕೆ ನಾಯಕಿಯಾಗಿರುವ ಮಾನ್ವಿತಾ, ಆ ಚಿತ್ರದ ನಂತರ ಯಾವೊಂದು ಚಿತ್ರವನ್ನೂ ಒಪ್ಪಿರಲಿಲ್ಲ. ಈಗ “ಕನಕ’ನಿಗೆ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ವಿಜಯ್‌ ಆಟೋ ಡ್ರೈವರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮಾನ್ವಿತಾ ಈ ಚಿತ್ರದಲ್ಲಿ ಕಾಲೇಜು ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಮಾರ್ಚ್‌ 13ರಿಂದ ಚಿತ್ರೀಕರಣದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

“ಕನಕ’ ಚಿತ್ರದ ನಿರ್ದೇಶನವಷ್ಟೇ ಅಲ್ಲ, ನಿರ್ಮಾಣದ ಹೊಣೆಯನ್ನು ಸ್ವತಃ ಚಂದ್ರು ಅವರೇ ಹೊತ್ತಿದ್ದಾರೆ. ಚಿತ್ರಕ್ಕೆ “ರಾಜ್‌ಕುಮಾರ್‌ ಫ್ಯಾನ್‌’ ಎಂಬ ಅಡಿಬರಹ ಕೂಡಾ ಇದೆ.  “ಕನಕ’ ಆಟೋ ಡ್ರೆ„ವರ್‌ ಒಬ್ಬನ ಕಥೆ. ಆತನೇನು ಡಿಗ್ರಿ ಮಾಡಿದೋನಲ್ಲ. ಓದಿದ್ದು ಕಡಿಮೆಯೇ. ಆದರಾತ ಡಾ. ರಾಜ್‌ಕುಮಾರ್‌ ಅವರ ಅಪ್ಪಟ ಅಭಿಮಾನಿ. ಇಂಥಾ ವ್ಯಕ್ತಿಯ ಪ್ರೀತಿ, ಜೀವನದ ಕುರಿತಾಗಿ ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ ಚಂದ್ರು. ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ, ನವೀನ್‌ ಸಜ್ಜು ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next