Advertisement

ಅನಾಥ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿ: ಡಾ.ಶಾಂತಾ

12:23 PM Dec 04, 2020 | Suhan S |

ಕೋಲಾರ: ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯ ರೂಪಿಸಲು ಸಹಕರಿಸಬೇಕು ಎಂದು ಡಾ.ಶಾಂತಾ ತಿಳಿಸಿದರು.

Advertisement

ನಗರದ ಕಾರಂಜಿಕಟ್ಟೆಯಲ್ಲಿರುವ ಶ್ರೀ ನಲ್ಲೂರಮ್ಮ ದೇವಿ ಅನಾಥ ಮಕ್ಕಳ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಲ್ಲಿ ಹಾಲುಮತ ಮಹಾಸಭಾ ಜಿಲ್ಲಾ ಶಾಖೆ ವತಿಯಿಂದ ನಡೆದ 533ನೇ ಕನಕದಾಸ ಜಯಂತ್ಯುತ್ಸವ ಆಚರಣೆಯಲ್ಲಿಭಾಗವಹಿಸಿಮಾತನಾಡಿದರು.ಅನಾಥಾಶ್ರಮ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಮೂಲಕ ಸ್ವಂತ ಜೀವನಕಟ್ಟಿಕೊಳ್ಳುವಾಗೆ ಬೆಂಬಲ ನೀಡಬೇಕು ಎಂದು ನುಡಿದರು.

ಕನಕದಾಸರಂತಹ ದಾರ್ಶನಿಕರ ಜೀವನಚರಿತ್ರೆ ಜ್ಞಾನವನ್ನು ಮಕ್ಕಳಿಗೆ ತಿಳಿ ಹೇಳಿ ಅವರ ಜೀವನಕ್ಕೆ ಮಾರ್ಗದರ್ಶನವಾಗಿಸ ಬೇಕು. ಮಕ್ಕಳಿಗೆ ಯಾವುದೇ ರೀತಿಯ ಸೌಲಭ್ಯ ಒದಗಿಸಲು ಮುಂಚೂಣಿಯಲ್ಲಿರು ತ್ತೇನೆ. ತನ್ನ ಸ್ವಂತ ಖರ್ಚಿನಲ್ಲಿ ಇವರ ಆರೋಗ್ಯ ಕಾಪಾಡುವುದಕ್ಕೆ ಬೇಕಾದ ಸಹಾಯ ಮಾಡುತ್ತೇನೆ ಎಂದು ಭರವ ಸೆನೀಡಿದರು. ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ ಹುಚ್ಚಪ್ಪಗಳಿರಾ ಕುಲದನೆಲೆಯನ್ನು ಬಲ್ಲೀರಾ ಎಂದು ತಮ್ಮ ಕೀರ್ತನೆಗಳ ಮೂಲಕ ಸಮಾಜಕ್ಕೆ ಜನರಲ್ಲಿದ್ದಮೌಡ್ಯಗಳನ್ನು ಹೋಗಲಾಡಿಸಲು ಶ್ರಮಿಸಿದ ಹರಿಕರಾರು ಎಂದು ಸಂಗೊಳ್ಳಿ ರಾಯಣ್ಣನೌಕರರ ಸಂಘದ ಜಿಲ್ಲಾಧ್ಯಕ್ಷ ಮುನಿರಾಜು ಉಪನ್ಯಾಸ ನೀಡಿದರು.

ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಎನ್‌.ಕೆ.ಗೋವಿಂದರಾಜು ಮಾತನಾಡಿ, ಹಾಲುಮತ ಮಹಾಸಭಾ ವತಿಯಿಂದಜಿಲ್ಲೆಯಲ್ಲಿ ಕನಕದಾಸರ ಜಯಂತಿ ಮೊಟ್ಟಮೊದಲ ಕಾರ್ಯಕ್ರಮನಡೆಸುತ್ತಿದ್ದೇವೆ. ಕನಕದಾಸರು ಒಂದು ಜಾತಿಗೆ ಸೀಮಿತವಲ್ಲ, ಅವರು ರಚಿಸಿರುವ ಕೃತಿಗಳ ಮೂಲಕ ಜಾತ್ಯತೀತವಾದ ಬೆಳವಣಿಗೆ ಕಾಣಬಹುದಾಗಿದೆ ಎಂದರು. ಈ ವೇಳೆ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾ ಗೌರವಾಧ್ಯಕ್ಷ ವೆಂಕಟೇಶ್‌, ಸಂಘಟನಾ ಕಾರ್ಯದರ್ಶಿ ಶ್ರೀಕಾಂತ್‌, ಪದಾಧಿಕಾರಿಗಳಾದ ವಕೀಲ ಶ್ರೀನಿವಾಸ್‌, ಬೆಟ್ಟಪ್ಪ, ರಾಜು, ಭುವನೇಶ್ವರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next