Advertisement

ಕನಕ ಭವನಕ್ಕೆ ಕೋಟಿ ರೂ. ಅನುದಾನ

11:35 AM Jul 21, 2017 | Team Udayavani |

ಹುಣಸೂರು: ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಕನಕ ಭವನಕ್ಕೆ ಹೆಚ್ಚುವರಿಯಾಗಿ ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ತಾಲೂಕು ಕುರುಬರ ಕ್ಷೇಮಾಭಿವೃದ್ಧಿ ಸಮಿತಿ ಸಭೆಯಲ್ಲಿ ಅಧ್ಯಕ್ಷ ಡಿ.ಕೆ.ಕುನ್ನೇಗೌಡ ಹೇಳಿದರು.

Advertisement

ಪಟ್ಟಣದಲ್ಲಿ ಕನಕ ಭವನದಲ್ಲಿ ನಡೆದ ತಾ.ಕುರುಬರ ಅಭಿವೃದ್ಧಿ ಸಮಿತಿಯ 2016-17ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಕನಕ ಭವನಕ್ಕೆ ಶಾಸಕ ಎಚ್‌.ಪಿ. ಮಂಜುನಾಥ್‌ ನೇತೃತ್ವದಲ್ಲಿ ಸಮಾಜದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಸಲ್ಲಿಸಿದ ಮನವಿಗೆ ಈಗಾಗಲೇ ಹಿಂದುಳಿದ ವರ್ಗಗಳ ಇಲಾಖೆಯಿಂದ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದು ಮತ್ತೆ ವಿಶೇಷವಾಗಿ ಒಂದು ಕೋಟಿ ರೂ. ಹೆಚ್ಚುವರಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಶಾಸಕ ಎಚ್‌.ಪಿ.ಮಂಜುನಾಥ್‌ ಸಹ ತಮ್ಮ ತಾಯಿ ರತ್ನಮ್ಮರ ಹೆಸರಿನಲ್ಲಿ 10 ಲಕ್ಷರೂ. ವೈಯಕ್ತಿಕ ಕೊಡುಗೆ ನೀಡಿದ್ದಾರೆ  ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ 25 ಲಕ್ಷ ರೂ, ವಿಧಾನ ಪರಿಷತ್‌ ಮಾಜಿ ಸದಸ್ಯ ಸಿ.ಎಚ್‌. ವಿಜಯಶಂಕರ್‌ 10 ಲಕ್ಷ ರೂ, ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ 10 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿಸಿದ್ದು ಕನಕ ಭವನ ನಿರ್ಮಾಣ ಮಾಡಲು ಪûಾತೀತವಾಗಿ ಎಲ್ಲರೂ ಸಹಕರಿಸಿದ್ದಾರೆ ಎಂದು ಅಭಿನಂದಿಸಿದರು.

ಸನ್ಮಾನ: ತಾಲೂಕು ಕುರುಬರ ಅಭಿವೃದ್ಧಿ ಸಮಿತಿಯಲ್ಲಿ ಈವರೆಗೆ ಸೇವೆ ಸಲ್ಲಿಸಿದ ಎಲ್ಲ ಮಾಜಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು. ಸಮಿತಿಯ ಕಾರ್ಯದರ್ಶಿ ನರಸಿಂಹ ವಾರ್ಷಿಕ ವರದಿ ಮಂಡಿಸಿದರು. ಡಿ ದೇವರಾಜ ಅರಸು ನಿಗಮದ ನಿರ್ದೇಶಕ ಎ.ಪಿ.ಸ್ವಾಮಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ವಾಸೇಗೌಡ, ಮಾಜಿ ಅಧ್ಯಕ್ಷರುಗಳಾದ ರಮೇಶ್‌, ಬಿ.ಎನ್‌.ಜಯರಾಮ್‌, ಜಿಪಂ ಮಾಜಿ ಸದಸ್ಯ ರಮೇಶ್‌,

-ಕಣಗಾಲ್‌ ರಾಮೇಗೌಡ, ವಕೀಲರಾದ ಸ್ವಾಮಿಗೌಡ, ರಾಮಕಷ್ಣ, ಶಿಕ್ಷಕ ವೆಂಕಟರಮಣ,  ಖಜಾಂಚಿ ಗಣೇಶ್‌ಕುಮಾರಸ್ವಾಮಿ, ಮುಖಂಡರಾದ ಪ್ರಭಾಕರಹೆಗ್ಗಡೆ, ಕೆ.ಗಣಪತಿ, ಜಿಲ್ಲಾ ಎಸ್ಸಿ/ಎಸ್ಟಿ ಹಿತರಕ್ಷಣ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್‌, ಮಂಡ್ಯಮಹೇಶ್‌, ಕಾಯಿಶೇಖರ್‌, ರಾಘು, ಬಸವರಾಜೇಗೌಡ, ಮೆಡಿಕಲ್‌ ಕೃಷ್ಣ, ಹರೀಶ್‌, ಶಿವಾನಂದ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next