Advertisement

ಕಸಾಪ ಚುನಾವಣಾ ಪ್ರಚಾರ

12:32 PM Apr 13, 2021 | Team Udayavani |

ಕೊಪ್ಪಳ: ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಕಸಾಪ ಚುನಾವಣೆಯ ಪ್ರಚಾರ ಸಭೆ ಜರುಗಿತು.

Advertisement

ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ| ಶೇಖರಗೌಡ ಮಾಲಿಪಾಟೀಲ, ಕೊಪ್ಪಳ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶರಣೇಗೌಡ ಪೊಲೀಸಪಾಟೀಲ ಅವರ ಪರವಾಗಿ ಮತಯಾಚಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ಅವರು ಪ್ರಚಾರದ ನೇತೃತ್ವ ವಹಿಸಿದ್ದರು. ಸಭೆಯಲ್ಲಿ ಅಭ್ಯರ್ಥಿ ಶರಣೇಗೌಡ ಪೊಲೀಸಪಾಟೀಲ ಮಾತನಾಡಿ, ಗೆಲುವಿಗೆ ಬೆಟಗೇರಿ ಗ್ರಾಮದ ಅಜೀವ ಸದಸ್ಯರ ಬೆಂಬಲ ಅತಿಮುಖ್ಯ. ಐತಿಹಾಸಿಕ ಮತದಾನದ ಮೂಲಕ ರಾಜ್ಯಕ್ಕೆ ಶೇಖರಗೌಡ ಮಾಲಿ ಪಾಟೀಲ,ಜಿಲ್ಲೆಗೆ ಶರಣೇಗೌಡ ಪೊಲೀಸಪಾಟೀಲ ಅವರನ್ನು ಗೆಲ್ಲಿಸಿ ದಾಖಲೆ ಬರೆಯಲು ವಿನಂತಿಸಿದರು.

ಗ್ರಾಮದ ಅಜೀವ ಸದಸ್ಯರ ಪರವಾಗಿ ವೀರೇಶ ಸಜ್ಜನರ, ಶರಣಪ್ಪ ಮತ್ತೂರು, ಮಲ್ಲಿಕಾರ್ಜುನ ಯತ್ನಳ್ಳಿ, ಬಸವರಾಜ ಚಿಂಚಲಿ, ಮಹಾಂತೇಶ ಕಂಚಿ, ರಾಮಚಂದ್ರಗೌಡಗೊಂಡಬಾಳ ಅವರು ಮಾತನಾಡಿದರು.ಕೊಪ್ಪಳ ತಾಲೂಕು ಕಸಾಪ ಅಧ್ಯಕ್ಷಚನ್ನಪ್ಪ ಕಡ್ಡಿಪುಡಿ, ಕಾರಟಗಿ ಕಸಾಪ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ ತಂಡದ ಪರವಾಗಿ ಮತಯಾಚನೆ ಮಾಡಿದರು.

ಈ ವೇಳೆ ನಾರಾಯಣಗೌಡ ಪೊಲೀಸಪಾಟೀಲ, ರಾಮಕೃಷ್ಣಕರ್ಣಂ, ಗುರುಮೂರ್ತಿ ಜೋಗದ,ನಾರಾಯಣಪ್ಪ ಚಿಂಚಲಿ, ಶ್ರೀಕಾಂತ ಬಾವಿ, ಚನ್ನಬಸಪ್ಪ ಗೊರೇಬಾಳ,ವಿಜಯಕುಮಾರ ಯತ್ನಳ್ಳಿ, ಪ್ರವೀಣ ಕುಮಾರ್‌ ಗುಳದಳ್ಳಿ, ನವೀನಕುಮಾರಮಾದಿನೂರ, ಸುರೇಶ ಸಜ್ಜನರ, ಈಶಪ್ಪ ಮತ್ತೂರು, ರೆಹಮಾನ್‌ ಸಾಬ್‌ ಜೀರಕಂಡಿ,ಬಸವರಾಜ ನಾಗರಡ್ಡಿ, ಬಸವಂತಪ್ಪ ಮತ್ತೂರು, ಭೀಮಣ್ಣ ಕವಲೂರು, ಗವಿಸಿದ್ಧಪ್ಪ ಮಾಳೆಕೊಪ್ಪ, ಬೆಟಗೇರಿಗ್ರಾಮದ ಸಾಹಿತ್ಯಾಭಿಮಾನಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next