ಕಂಪ್ಲಿ: ಎರಡು ಕ್ಷೇತ್ರದ ಉಪ ಚುನಾವಣೆ ಹಾಗೂ ನಾಲ್ಕು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲವು ಸಾಧಿ ಸಲಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಭವಿಷ್ಯ ನುಡಿದರು.
ಅವರು ಸೋಮವಾರ ಪಟ್ಟಣದ ಸಕ್ಕರೆಕಾರ್ಖಾನೆಗೆ ದಿಢೀರ್ ಭೇಟಿ ನೀಡಿ, ದುರಸ್ತಿ ಕಾರ್ಮಗಾರಿ ವೀಕ್ಷಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಶಿರಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಡಾ| ಸಿ.ಎಂ.ರಾಜೇಶ್ ಗೌಡ ಅವರು 20 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ತುಮಕೂರಿನಲ್ಲಿ ಫುಡ್ ಪಾರ್ಕ್ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯದ ಹಿನ್ನೆಲೆ ಬಿಜೆಪಿ ಅಭ್ಯರ್ಥಿಯನ್ನು ಮತದಾರರು ಗೆಲ್ಲಿಸಲಿದ್ದಾರೆ. ಆರ್‌ಆರ್ ನಗರ ಉಪ ಚುನಾವಣೆಯಲ್ಲಿ ಮುನಿರತ್ನ ಅವರು 50 ಸಾವಿರ ಮತಗಳ ಅಂತರದಲ್ಲಿ ಜಯಭೇರಿ ಬಾರಿಸಲಿದ್ದಾರೆ. ಬಿಜೆಪಿಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಬೀಸಿದ್ದುಈ ಎರಡು ಉಪ ಚುನಾವಣೆ ಹಾಗೂ ನಾಲ್ಕು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಧೂಳಿಪಟವಾಗಲಿದೆ ಎಂದರು.
ಕಂಪ್ಲಿ ಭಾಗದ ಅಭಿವೃದ್ಧಿ ಸಂಕೇತವಾಗಿರುವಹಾಗೂ ರೈತರ ಜೀವನಾಡಿಯಾಗಿರುವ ಹಳೆ ಸಕ್ಕರೆ ಕಾರ್ಖಾನೆಯನ್ನು ಪುನಃ ಆರಂಭಿಸುವ ಉದ್ದೇಶವನ್ನು ಹೊಂದಿದ್ದು ಈಗಾಗಲೇ ಕೆಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ, ಈ ಭಾಗದಲ್ಲಿ ಅತಿ ಹೆಚ್ಚು ಕಬ್ಬ ಬೆಳೆಯಲಾಗುತ್ತಿತ್ತು. ಆದರೆ ಕಾರ್ಖಾನೆ ಸ್ಥಗಿತಗೊಂಡ ಮೇಲೆ ರೈತರು ಭತ್ತದ ಬೆಳೆಗೆ ಮುಂದಾಗಿದ್ದು ಮುಂದಿನ ದಿನಗಳಲ್ಲಿ ಕಾರ್ಖಾನೆ ಆರಂಭಿಸಿದ ಮೇಲೆ ಕಬ್ಬು ಬೆಳೆಯುವಲ್ಲಿ ರೈತರು ಮುಂದಾಗಲಿದ್ದಾರೆ. ಮುಂದಿನ ದಿನದಲ್ಲಿ ರೈತರ ಸಹಕಾರದೊಂದಿಗೆ ಗುಜರಿ ಅಜೀಜ್ ಸೇರಿದಂತೆ ನಾವು ಸಕ್ಕರೆ ಕಾರ್ಖಾನೆಯನ್ನು ಹೊಸ ತಂತ್ರಜ್ಞಾನದೊಂದಿಗೆ ಕಂಪ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲಾಗುವುದು. ಸಕ್ಕರೆ ಕಾರ್ಖಾನೆ ಆರಂಭಿಸುವ ಮುಂಚಿತವಾಗಿ ರೈತರೊಂದಿಗೆ ಚರ್ಚಿಸಲಾಗುವುದು. ತಾಂತ್ರಿಕ ತಜ್ಞರು ಬಂದು, ವರದಿ ಕೊಟ್ಟ ನಂತರ ಸಕ್ಕರೆ ಕಾರ್ಖಾನೆಯನ್ನು ಅನಾವರಣಗೊಳಿಸಲಾಗುವುದು. ಒಟ್ಟು 300-400 ಕೋಟಿ ವೆಚ್ಚದಲ್ಲಿ ಹೊಸ ಟೆಕ್ನಾಲಜಿಯೊಂದಿಗೆ ಸಕ್ಕರೆ ಕಾರ್ಖಾನೆ ಆರಂಭವಾಗಲಿದೆ. ಇದರಿಂದ ರೈತರಿಗೆ ಅನುಕೂಲದ ಜತೆಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಸಿ.ಆರ್.ಹನುಮಂತ, ರಮೇಶ್ ಹೂಗಾರ್, ಆರ್. ಆಂಜಿನೇಯ್ಯ, ಮುಖಂಡರಾದ ಪಿ.ಬ್ರಹ್ಮಯ್ಯ, ಬಿ.ಸಿದ್ದಪ್ಪ, ವಿ.ವಿದ್ಯಾಧರ, ಚಂದ್ರಕಾಂತ್‌ರೆಡ್ಡಿ, ಕೊಡಿದಲ್ ರಾಜು, ರಾಜುಜೈನ್, ಹೊನ್ನೂರಪ್ಪ, ಕಿಶೋರ್‌ಕುಮಾರ್, ಹರ್ಷಿತ್, ಕಾರ್ತಿಕ್, ರಬಿಯಾ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.