Advertisement

ಶಾಸಕ ಗಣೇಶ ಆರೋಪದಲ್ಲಿ ಹುರುಳಿಲ್ಲ

04:27 PM May 31, 2020 | Naveen |

ಕಂಪ್ಲಿ: ಕ್ಷೇತ್ರದ ಶಾಸಕರಾದ ಜೆ.ಎನ್‌. ಗಣೇಶ್‌ ಅವರು ಸರಿಯಾದ ಮಾಹಿತಿ ಪಡೆಯದೇ ಮಾಜಿ ಶಾಸಕ ಟಿ.ಎಚ್‌. ಸುರೇಶಬಾಬು ಮೇಲೆ ಸುಳ್ಳು ಆರೋಪಗಳನ್ನು ಮಾಡಬಾರದೆಂದು ಬಿಜೆಪಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಳ್ಳಳ್ಳಿ ವೀರೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಅವರು ಪುರಸಭೆ ಮಾಜಿ ಅಧ್ಯಕ್ಷ ಪಿ.ಬ್ರಹ್ಮಯ್ಯನವರ ನಿವಾಸದಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿ, ಮಾರಕ ಕೋವಿಡ್ ವೈರಸ್‌
ಹಿನ್ನೆಲೆಯಲ್ಲಿ ಸರ್ಕಾರವು ಗ್ರಾಪಂ ಚುನಾವಣೆಗಳನ್ನು ಮುಂದೂಡಿದೆ. ಅವಧಿ ಮುಗಿದಿರುವ ಗ್ರಾಪಂಗಳಿಗೆ ನಾಮನಿರ್ದೇಶನ, ಆಡಳಿತಾಧಿಕಾರಿಗಳು ಅಥವಾ ಈಗಿರುವ ಆಡಳಿತ ಮಂಡಳಿಯನ್ನೇ ಮುಂದುವರೆಸಬೇಕೆ ಎನ್ನುವ ಬಗ್ಗೆ ಚರ್ಚೆ ನಡೆಸುತ್ತಿದೆ. ಆದರೆ ನಾಮನಿರ್ದೇಶನ ಮಾಡುವ ಬಗ್ಗೆ ಇನ್ನು ತೀರ್ಮಾನಿಸಿಲ್ಲ, ಸರ್ಕಾರ ಸಾಧಕ-ಬಾಧಕಗಳನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ. ಮಾಜಿ ಶಾಸಕರಾದ ಟಿ.ಎಚ್‌. ಸುರೇಶಬಾಬು ಅವರು ಕ್ಷೇತ್ರದಲ್ಲಿ ಎಲ್ಲಿಯೂ ಆಧಾರ್‌ ಕಾರ್ಡ್‌, ಗುರುತಿನ ಚೀಟಿಗಳನ್ನು ಸಂಗ್ರಹಿಸಿಲ್ಲ. ಆದರೆ ಹಾಲಿ ಶಾಸಕರು ಸರಿಯಾದ ಮಾಹಿತಿಯನ್ನು ಪಡೆಯದೇ ಆರೋಪ ಮಾಡುವುದು ಸರಿಯಲ್ಲ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ವಿ.ಎಲ್‌.ಬಾಬು, ಸಿ.ಆರ್‌. ಹನುಮಂತ, ಎಸ್‌.ಎಂ. ನಾಗರಾಜ, ಹೂಗಾರ್‌ ರಮೇಶ್‌, ಅಂಜಿನೇಯ, ಎನ್‌. ಪುರುಷೋತ್ತಮ, ಪಿ.ಬ್ರಹ್ಮಯ್ಯ, ಜಿ. ಸುಧಾಕರ್‌, ಕೊಡಿದಲ್‌ ರಾಜು, ಡಿ. ಶ್ರೀಧರಶ್ರೇಷ್ಠಿ, ಜಿ. ಲಿಂಗನಗೌಡ, ವಿ.ಗೋವಿಂದರಾಜ್‌, ವಿ. ವಿದ್ಯಾಧರ್‌, ಮರೆಣ್ಣ, ದೇವೇಂದ್ರ, ರೇಣುಕಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next